Aadhaar PAN Link : ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್‌ ಲಿಂಕ್ ಮಾಡಿಸಲೇ ಬೇಕು? ಲಿಂಕ್ ಮಾಡಿಸದೇ ಇದ್ರೆ ಜೂನ್ 30ರ ನಂತರ ಏನು ಕಥೆ? ಲಿಂಕ್‌ನಿಂದ ಏನು ಪ್ರಯೋಜನ?

Aadhaar PAN Link ನಿಮ್ಮ ಆಧಾರ್ ಕಾರ್ಡ್‌ ಜೊತೆಗೆ ಪಾನ್ ಕಾರ್ಡ್ ಲಿಂಕ್ ಆಗಿದೆಯೇ? ಒಂದು ವೇಳೆ ಆಗದೇ ಇದ್ದರೆ ಜೂನ್ 30ರ ಒಳಗೆ ದಂಡ ಕಟ್ಟಿ ಲಿಂಕ್ ಮಾಡಿಸಿಕೊಳ್ಳಿ ಎನ್ನುತ್ತಿದೆ ಆದಾಯ ತೆರಿಗೆ ಇಲಾಖೆ.. ನಿಮಗೆ ಗೊತ್ತಿರದ ಸಂಗತಿಗಳು ತಿಳಿದುಕೊಳ್ಳಿ

  1. ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್‌ ಲಿಂಕ್ ಮಾಡಿಸಲೇ ಬೇಕು?
  2. ಆಧಾರ್ – ಪಾನ್ ಲಿಂಕ್ ಆದ್ರೆ ಏನು ಪ್ರಯೋಜನ?
  3. ಲಿಂಕ್ ಮಾಡಿಸದೇ ಇದ್ರೆ ಜೂನ್ 30ನಂತರ ಏನು ಕಥೆ?
  4. ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್‌ ಲಿಂಕ್ ಮಾಡುವುದು ಹೇಗೆ?
1. ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್‌ ಲಿಂಕ್ ಮಾಡಿಸಲೇ ಬೇಕು?

Aadhaar PAN Link ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್‌ ಲಿಂಕ್ ಮಾಡಿಸಲೇ ಬೇಕು. ಅದೂ ಕೂಡಾ ಜೂನ್ 30ರ ಒಳಗೆ.. ಇಲ್ಲವಾದ್ರೆ, ನಿಮ್ಮ ಪಾನ್ ಕಾರ್ಡ್‌ ನಿಷ್ಕ್ರಿಯ ಆಗುತ್ತೆ ಅಂತಾ ಕೇಂದ್ರ ಸರ್ಕಾರ ಹೇಳ್ತಿದೆ. ಈಗ ನೀವು ನಿಮ್ಮ ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್ ಲಿಂಕ್ ಮಾಡಿಸೋಕೆ ಹೋದ್ರೆ ಒಂದು ಸಾವಿರ ರೂಪಾಯಿ ದಂಡ ಕೂಡಾ ಕಟ್ಟಬೇಕಿದೆ. ಜನರಿಗೆ ಸರ್ಕಾರದ ಈ ನೀತಿ ಸಿಟ್ಟು ತರಿಸಿದೆ. ದಂಡ ಏಕೆ ಕಟ್ಟಬೇಕು ಅಂತಾ ಕೇಳ್ತಿದ್ದಾರೆ ಜನ! ಆದ್ರೆ, ಕೇಂದ್ರ ಸರ್ಕಾರ ಹಾಗೂ ಆದಾಯ ತೆರಿಗೆ ಇಲಾಖೆ ಬಳಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇದೆ. ಸರ್ಕಾರದ ಸಮರ್ಥನೆಯೂ ಇದೆ.

PDO Recruitment 2023

ಮೇಲಿಂದ ಮೇಲೆ ಡೆಡ್‌ಲೈನ್ ವಿಸ್ತರಣೆ ಆಗ್ತಾನೇ ಇದೆ!

Aadhaar PAN Link ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್ ಲಿಂಕ್ ಮಾಡಿಸಿ ಅಂತಾ ಸರ್ಕಾರ ಕಳೆದ ಐದಾರು ವರ್ಷಗಳಿಂದ ಹೇಳ್ತಾನೇ ಇದೆ. 2017ರಲ್ಲಿ ಈ ಕುರಿತಾಗಿ ಮೊದಲ ಬಾರಿಗೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿತ್ತು. 2022ರ ಮಾರ್ಚ್ 31ರ ಒಳಗೆ ನಿಮ್ಮ ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್ ಲಿಂಕ್ ಮಾಡಿಸಿ ಅಂತಾ ಕೇಂದ್ರ ಸರ್ಕಾರ ಡೆಡ್‌ಲೈನ್ ಕೊಟ್ಟಿತ್ತು. ಅಂದ್ರೆ ಬರೋಬ್ಬರಿ 5 ವರ್ಷ ಟೈಂ ಕೊಟ್ಟಿತ್ತು. ಈ ಅವಧಿಯಲ್ಲಿ ಬಹುತೇಕ ಜನರು ತಮ್ಮ ಆಧಾರ್ ಕಾರ್ಡ್‌ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಿಸಿದ್ರು. ಆದ್ರೆ, ಒಂದಷ್ಟು ಜನರದ್ದು ಬಾಕಿ ಉಳಿದಿತ್ತು. ಹೀಗಾಗಿ, ಜೂನ್ 2022ರ ಒಳಗಾದ್ರೂ ಲಿಂಕ್ ಮಾಡಿಸಿ ಅಂತಾ ಸರ್ಕಾರ ಹೇಳಿತು. ಜೊತೆಗೆ 500 ರೂಪಾಯಿ ಲೇಟ್ ಫೀಸ್‌ ಕಟ್ಟಬೇಕು ಅಂತಾ ಹೇಳಿತ್ತು. ಇಷ್ಟಾದರೂ ಒಂದಷ್ಟು ಜನ ಇನ್ನೂ ಬಾಕಿ ಉಳಿಸಿಕೊಂಡಿದ್ರು. ಕೊನೆಗೆ ಸರ್ಕಾರ ಅಂತಿಮವಾಗಿ ತೀರ್ಮಾನ ಮಾಡ್ತು. 2023ರ ಮಾರ್ಚ್ 31ರ ಒಳಗೆ ನಿಮ್ಮ ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್ ಲಿಂಕ್ ಮಾಡಿಸಲೇ ಬೇಕು. ಇಲ್ಲವಾದ್ರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯ ಆಗುತ್ತೆ ಅಂತಾ ಹೇಳ್ತು. ಜೊತೆಗೆ 1 ಸಾವಿರ ರೂಪಾಯಿ ಲೇಟ್ ಫೀಸ್ ಕಟ್ಟಲೇ ಬೇಕು ಅಂತಾ ತಾಕೀತು ಮಾಡ್ತು. ಇದೀಗ ಮತ್ತೆ ಡೆಡ್‌ಲೈನ್ ವಿಸ್ತರಣೆ ಮಾಡಿರುವ ಕೇಂದ್ರ ಸರ್ಕಾರ, 2023ರ ಜೂನ್ 30ರ ಒಳಗೆ ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ ಎಂದು ಹೇಳಿದೆ.

2. ಆಧಾರ್ – ಪಾನ್ ಲಿಂಕ್ ಆದ್ರೆ ಏನು ಪ್ರಯೋಜನ?

Aadhaar PAN Link ಕೇಂದ್ರ ಸರ್ಕಾರ ಹಾಗೂ ಆದಾಯ ತೆರಿಗೆ ಇಲಾಖೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಿಸಿ ಅಂತಾ ಹೇಳ್ತಿರೋದಕ್ಕೆ ಬಲವಾದ ಕಾರಣಗಳು ಇವೆ. ಏನಂದ್ರೆ ಕೆಲವರು ತಮ್ಮ ಹೆಸರಲ್ಲಿ 2 ರಿಂದ 3 ಪಾನ್ ಕಾರ್ಡ್‌ಗಳನ್ನ ಮಾಡಿಸಿಕೊಂಡು ಒಂದೊಂದು ಬ್ಯಾಂಕ್ ಅಕೌಂಟ್ ನಂಬರ್‌ಗೆ ಒಂದೊಂದು ಪಾನ್ ಕಾರ್ಡ್ ನಂಬರ್ ಕೊಟ್ಟಿರ್ತಾರೆ. ಹೀಗಾಗಿ, ಅವರು ನಡೆಸೋ ಹಣದ ವಹಿವಾಟು ಇನ್‌ಕಂ ಟ್ಯಾಕ್ಸ್‌ನವರ ಲೆಕ್ಕಕ್ಕೇ ಸಿಗೋದಿಲ್ಲ. ಇದನ್ನು ತಪ್ಪಿಸೋಕೆ ಆದಾಯ ತೆರಿಗೆ ಇಲಾಖೆ ಹಾಗೂ ಕೇಂದ್ರ ಸರ್ಕಾರ ಮಾಡಿರೋ ಪ್ಲಾನ್ ಇದು. ಹಾಗಂತಾ ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಮಾಡಿದ ಕೂಡಲೇ ಎಲ್ಲ ಕಳ್ಳರು ಸಿಕ್ಕಿಬೀಳ್ತಾರೆ ಅಂತೇನೂ ಇಲ್ಲ. ಕೆಲವರು ಒಂದಕ್ಕಿಂತಾ ಹೆಚ್ಚು ಆಧಾರ್ ಕಾರ್ಡ್ ಮಾಡಿಸಿಕೊಂಡಿರಬಹುದು. ಮುಂದಿನ ದಿನಗಳಲ್ಲಿ ಸರ್ಕಾರ ಅದನ್ನೂ ಪತ್ತೆ ಹಚ್ಚುತ್ತೆ. ಮೊದಲಿಗೆ ಆಧಾರ್ ಹಾಗೂ ಪಾನ್ ಲಿಂಕ್ ಆಗಲಿ, ಆ ನಂತರ ಮುಂದಿನ ಸುಧಾರಣೆ.. ಮುಂದಿನ ಹೆಜ್ಜೆ..

Aadhaar PAN Link
3.ಲಿಂಕ್ ಮಾಡಿಸದೇ ಇದ್ರೆ ಜೂನ್ 30ರ ನಂತರ ಏನು ಕಥೆ?

Aadhaar PAN Link ಇದುವರೆಗೂ ನೀವು ನಿಮ್ಮ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಿಸದೇ ಇದ್ದರೆ ಜೂನ್ 30ರ ಒಳಗೆ 1 ಸಾವಿರ ರೂಪಾಯಿ ದಂಡ ಕಟ್ಟಿ ಲಿಂಕ್ ಮಾಡಿಸಬೇಕು. ಇಲ್ಲವಾದ್ರೆ, ಜುಲೈ 1 ರಿಂದ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯ ಆಗುತ್ತೆ. ಇದೇ ಪಾನ್ ಕಾರ್ಡ್‌ ನಂಬರ್‌ನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಇದ್ದರೆ ಅದಕ್ಕೆ ಸಮಸ್ಯೆ ಎದುರಾಗುತ್ತೆ. ಆಗ ನೀವು ಹೊಸ ಪಾನ್ ಕಾರ್ಡ್ ಮಾಡಿಸಬೇಕು. ಹೊಸದಾಗಿ ಪಾನ್ ಕಾರ್ಡ್ ಮಾಡಿಸೋಕೆ ಹೋದಾಗ ಆರಂಭದಲ್ಲಿಯೇ ಆ ಪಾನ್ ನಂಬರ್ ಜೊತೆಗೆ ಆಧಾರ್ ನಂಬರ್ ಕೂಡಾ ಲಿಂಕ್ ಮಾಡ್ತಾರೆ. ಒಂದು ವೇಳೆ ನೀವು ಪಾನ್ ನಂಬರ್ ಬೇಕಾಗಿಲ್ಲ ಅಂದ್ರೆ ತುಂಬಾನೇ ಕಷ್ಟ. ಯಾಕಂದ್ರೆ,

  1. ಸರ್ಕಾರದಿಂದ ಸಬ್ಸಿಡಿ ಪಡೆಯೋಕೆ ಆಗಲ್ಲ,
  2. ಹೊಸದಾಗಿ ಬ್ಯಾಂಕ್ ಖಾತೆ ಮಾಡಿಸೋಕೆ ಆಗಲ್ಲ.
  3. ಹಣಕಾಸಿನ ವಹಿವಾಟು ಮಾಡೋಕೆ ಆಗಲ್ಲ.
  4. ಆಮೇಲೆ ಲಿಂಕ ಮಾಡಿದರೂ ಕೂಡಾ ಶೇ. 20ರಷ್ಟು ತೆರಿಗೆ ಕಟ್ಟಬೇಕಾಗುತ್ತೆ..

4.ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್‌ ಲಿಂಕ್ ಮಾಡುವುದು ಹೇಗೆ?

Aadhaar PAN Link
  • ಮೊದಲಿಗೆ ನೀವು www.income tax.gov.in ಜಾಲತಾಣಕ್ಕೆ ಹೋಗಿ,
  • ಅಲ್ಲಿ ಎಡಭಾಗದಲ್ಲಿರುವ ‘ಲಿಂಕ್‌ ಆಧಾರ್‌’ ಎನ್ನುವ ಆಯ್ಕೆ ಕ್ಲಿಕ್‌ ಮಾಡಿ,
  • ಆಗ ಮಾಹಿತಿ ತೆರೆದುಕೊಳ್ಳುತ್ತದೆ. ಅಥವಾ ಡೈರೆಕ್ಟ್‌ ಆಗಿ https://eportal.incometax.gov.in/iec/foservices/#/pre-login/bl-link-aadhaar 1,000 ರೂ. ಶುಲ್ಕ ಪಾವತಿಸಿ ಆಧಾರ್‌ – ಪ್ಯಾನ್‌ ಲಿಂಕ್‌ ಮಾಡಬಹುದು.

Leave a Reply

Your email address will not be published. Required fields are marked *