ai airport services limited recruitment 2023: ಡಿಪ್ಲೊಮ, ಐಟಿಐ, ಡಿಗ್ರಿ ಆದವರಿಗೆ ಉದ್ಯೋಗ

ai airport services limited recruitment 2023 : ಏರ್‌ ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸೆಸ್ ಲಿಮಿಟೆಡ್ ನಲ್ಲಿ ಅಗತ್ಯ ಇರುವ ವಿವಿಧ 828 ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್‌ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ai airport services limited recruitment 2023 ಏರ್‌ ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸೆಸ್ ಲಿಮಿಟೆಡ್ (AIATSL) ಅಥವಾ ಏಐ ಏರ್‌ಪೋರ್ಟ್‌ ಸರ್ವೀಸ್ ಲಿಮಿಟೆಡ್‌ ನಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಎಕ್ಸಿಕ್ಯೂಟಿವ್, ಮ್ಯಾನೇಜರ್, ಡ್ರೈವರ್, ಆಫೀಸರ್ ಸೇರಿದಂತೆ ಒಟ್ಟು 828 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ. ಹುದ್ದೆಗಳ ಪದನಾಮ, ಅರ್ಹತೆ, ನೇರ ಸಂದರ್ಶನ ದಿನಾಂಕವನ್ನು ಕೆಳಗಿನಂತೆ ತಿಳಿಸಿದ್ದು, ಆಸಕ್ತರು ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ.

UDYOGMAHITI.COM

ಹುದ್ದೆಗಳ ವಿವರ
ಡೆಪ್ಯೂಟಿ ಮ್ಯಾನೇಜರ್ ರ್ಯಾಂಪ್ / ಮೇಂಟೆನೆನ್ಸ್‌ : 07
ಡೆಪ್ಯೂಟಿ ಮ್ಯಾನೇಜರ್-ರ್ಯಾಂಪ್ : 28
ಜೂನಿಯರ್ ಆಫೀಸರ್ ಟೆಕ್ನಿಕಲ್ : 24
ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್ : 138
ಯುಟಿಲಿಟಿ ಏಜೆಂಟ್ ಕಮ್ ರ್ಯಾಂಪ್ ಡ್ರೈವರ್ : 167
ಡ್ಯೂಟಿ ಮ್ಯಾನೇಜರ್ – ಪ್ಯಾಸೆಂಜರ್ : 19
ಡ್ಯೂಟಿ ಆಫೀಸರ್- ಪ್ಯಾಸೆಂಜರ್ : 30
ಡ್ಯೂಟಿ ಮ್ಯಾನೇಜರ್ – ಕಾರ್ಗೊ : 03
ಡ್ಯೂಟಿ ಆಫೀಸರ್- ಕಾರ್ಗೊ: 08
ಜೂನಿಯರ್ ಆಫೀಸರ್- ಕಾರ್ಗೊ : 09
ಸೀನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : 178
ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : 217

ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 55 ವರ್ಷ ಮೀರಿರಬಾರದು.
ಹುದ್ದೆಗಳಿಗೆ ಅನುಗುಣವಾಗಿ ಡಿಪ್ಲೊಮ, ಐಟಿಐ, ಪದವಿ, ಇಂಜಿನಿಯರಿಂಗ್, ಇತರೆ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.
ಹುದ್ದೆವಾರು ವಯಸ್ಸಿನ ಅರ್ಹತೆ / ಶೈಕ್ಷಣಿಕ ಅರ್ಹತೆಗಳನ್ನು ತಿಳಿಯಲು ಕೆಳಗಿನ ನೋಟಿಫಿಕೇಶನ್‌ ಅನ್ನು ಓದಿರಿ.

ಆಯ್ಕೆ ವಿಧಾನ : ನೇರ ಸಂದರ್ಶನ
ಸಂದರ್ಶನ ದಿನಾಂಕ : ಡಿಸೆಂಬರ್ 18-23, 2023

ಅಪ್ಲಿಕೇಶನ್‌ ಶುಲ್ಕ ರೂ.500.

ಅರ್ಜಿ ಶುಲ್ಕವನ್ನು ಏರ್‌ ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್‌ ಸರ್ವೀಸೆಸ್ ಲಿಮಿಟೆಡ್ ಹೆಸರಿನಲ್ಲಿ ಡಿಡಿ ತೆಗೆಯುವ ಮೂಲಕ ಪಾವತಿಸಬೇಕು. ರಶೀದಿಯಲ್ಲಿ ನೇರ ಸಂದರ್ಶನ ದಿನಾಂಕದಂದು ಅರ್ಜಿಯೊಂದಿಗೆ ಹಾಜರುಪಡಿಸಬೇಕು.

ನೇರ ಸಂದರ್ಶನಕ್ಕೆ ಹಾಜರಾಗುವವರು ತಮ್ಮ ವಿದ್ಯಾರ್ಹತೆ ದಾಖಲೆಗಳು, ಕಾರ್ಯಾನುಭವ ದಾಖಲೆಗಳು, ಆಧಾರ್‌ ಕಾರ್ಡ್‌, ಅಪ್‌ಡೇಟ್‌ ಮಾಡಲಾದ ಇತ್ತೀಚಿನ ರೆಸ್ಯೂಮ್‌, ಅರ್ಜಿ ಶುಲ್ಕ ಪಾವತಿಸಿದ ಡಿಡಿ ರಶೀದಿ ತೆಗೆದುಕೊಂಡು ಹೋಗಬೇಕು.

NOTIFICATION CLICK HERE
APPLY ONLINECLICK HERE
Telegram Join LinkClick Here
WhatsApp Channel LinkClick Here

Leave a Reply

Your email address will not be published. Required fields are marked *