bidar court recruitment 2021 ಬೀದರ್ ಜಿಲ್ಲೆಯ ನ್ಯಾಯಾಲಯದಲ್ಲಿ ಅಗತ್ಯ ಇರುವ ಶೀಘ್ರಲಿಪಿಕಾರರು ಮತ್ತು ಬೆರಳಚ್ಚುಕಾರರ ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.
ಬೀದರ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹಿಂಬಾಕಿ ಹುದ್ದೆಗಳಾದ ಸ್ಟೆನೋಗ್ರಾಫರ್ ಗ್ರೇಡ್ III ಮತ್ತು ಟೈಪಿಸ್ಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಬೀದರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು
ಒಟ್ಟು 21 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
ಹುದ್ದೆಯ ಹೆಸರು
ಸ್ಟೆನೋಗ್ರಾಫರ್ 12 ಹುದ್ದೆಗಳು
ಟೈಪಿಸ್ಟ್ 9 ಹುದ್ದೆಗಳು
ಉದ್ಯೋಗ ಸ್ಥಳ
ಬಿದರ ಜಿಲ್ಲೆ
ವಿದ್ಯಾರ್ಹತೆ
1. ದ್ವಿತೀಯ ಪಿಯುಸಿ / ಮೂರು ವರ್ಷದ ಡಿಪ್ಲೊಮ / ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
2. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಹಿರಿಯ ಶ್ರೇಣಿ ಶೀಘ್ರಲಿಪಿ ಮತ್ತು ಬೆರಳಚ್ಚು ಅಥವಾ ಡಿಪ್ಲೊಮ ವಾಣಿಜ್ಯ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ, ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸುವ ಕಡೆಯ ದಿನಾಂಕದೊಳಗೆ ಉತ್ತೀರ್ಣರಾಗಿರಬೇಕು.
ಅರ್ಜಿಶುಲ್ಕ
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 200/-ರೂಗಳು
ಎಸ್.ಸಿ ಎಸ್.ಟಿ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 100/-ರೂಗಳು
ವಯೋಮಿತಿ
ಕನಿಷ್ಠ ವಯೋಮಿತಿ : 18ವರ್ಷ
ಗರಿಷ್ಠ ವಯೋಮಿತಿ:
ಸಾಮಾನ್ಯ ವರ್ಗ 35 ವರ್ಷ
ಒಬಿಸಿ 38 ವರ್ಷ
ಎಸ್.ಸಿ. ಎಸ್.ಟಿ 40 ವರ್ಷ
ಮುಖ್ಯದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ : 09-09-2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 09-10-2021
ಅರ್ಜಿಸಲ್ಲಿಸಲುಬೇಕಾಗುವದಾಖಲೆಗಳು
- 10ನೇ ತರಗತಿ ಅಂಕಪಟ್ಟಿ
- 12ನೇ ತರಗತಿ ಅಂಕಪಟ್ಟಿ
- ಆಧಾರ ಕಾರ್ಡ
- ಅಭ್ಯರ್ಥಿಯ ಪೋಟೋ
- ಅಭ್ಯರ್ಥಿಯ ಮೋಬೈಲ ಸಂಖ್ಯೆ
- ಮೀಸಲಾತಿ ಪ್ರಮಾಣ ಪತ್ರಗಳು
