ಹೈಕೋರ್ಟ್‌ SDA ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಏನೇನು ಓದಬೇಕು? ಪಠ್ಯಕ್ರಮ ಏನು? high court sda exam syllabus

ಕರ್ನಾಟಕ ಹೈಕೋರ್ಟ್‌ ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆಗೆ ಪಠ್ಯಕ್ರಮ ಏನು, ಏನೇನು ಓದಬೇಕು ಎಂದು ಇಲ್ಲಿ ತಿಳಿಸಲಾಗಿದೆ. high court sda exam syllabus ಹಾಗೆಯೇ ಪರೀಕ್ಷೆ ಮಾದರಿ, ಪ್ರಮುಖ ದಿನಾಂಕಗಳು, ವಯೋಮಿತಿ ಅರ್ಹತೆಗಳನ್ನು ಸಹ ಈ ಪೋಸ್ಟ್‌ಗೆ ಅರ್ಜಿ ಸಲ್ಲಿಸಲು ನೀಡಲಾಗಿದೆ.

​ಪ್ರಮುಖ ದಿನಾಂಕಗಳು

ಹೈಕೋರ್ಟ್‌ ಎಸ್‌ಡಿಎ ಪೋಸ್ಟ್‌ಗಳ ನೇಮಕಕ್ಕೆ ಸಂಬಂಧಿಸಿದಂತೆ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 24-08-2021

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 24-09-2021

high court sda exam syllabus

​ವಯೋಮಿತಿ ಅರ್ಹತೆಗಳು

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.

ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ.

ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ.

ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ.

ಕರ್ನಾಟಕ ಹೈಕೋರ್ಟ್‌ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳ ಆಯ್ಕೆಗೆ 100 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು, ಪಠ್ಯಕ್ರಮ ಏನು, ಪರೀಕ್ಷೆಗೆ ಏನೇನು ಓದಬೇಕು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ ಆಂಗ್ಲ ಭಾಷೆಯ ಪ್ರಬಂಧಕ್ಕೆ ಸಂಬಂಧಿಸಿದಂತೆ 30 ಅಂಕಗಳಿಗೆ, ಕನ್ನಡದಿಂದ ಆಂಗ್ಲ ಭಾಷೆಗೆ ಅನುವಾದ- 30 ಅಂಕಗಳಿಗೆ, ಸಾಮಾನ್ಯ ಜ್ಞಾನ ಪರೀಕ್ಷೆ – 20 ಅಂಕಗಳಿಗೆ, ಮೌಖಿಕ ಪರೀಕ್ಷೆ -20 ಅಂಕಗಳಿಗೆ ಸೇರಿ ಒಟ್ಟು 100 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಈ ಪ್ರತಿ ಸೆಕ್ಷನ್‌ಗಳಿಗೆ ಸಂಬಂಧಿಸಿದಂತೆ ಏನೇನು ಓದಬೇಕು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

​ಸಾಮಾನ್ಯ ಜ್ಞಾನ ಪರೀಕ್ಷೆ

ಜೆನೆರಲ್ ನಾಲೆಡ್ಜ್‌ ಗೆ ಸಂಬಂಧಿಸಿದಂತೆ 20 ಅಂಕಗಳಿಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಬಹುಆಯ್ಕೆ ಪ್ರಶ್ನೆಗಳು ಇವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಸಾಮಾನ್ಯ ಜ್ಞಾನ ಪೇಪರ್‌ಗೆ ಏನು ಓದುತ್ತಿರುವಿರೋ ಈ ಎಲ್ಲ ತಯಾರಿಯೂ ಸಹ ಈ ಸೆಕ್ಷನ್‌ ಪರೀಕ್ಷೆಗೆ ಅಗತ್ಯ. ಅಂದರೆ ಮಾಸಿಕ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಿಯತಕಾಲಿಕೆಗಳು, ದಿನಪತ್ರಿಕೆಗಳನ್ನು ಓದುವುದು ಸಹ ಅಗತ್ಯ. ಅಲ್ಲದೇ ಹೈಕೋರ್ಟ್ ಎಸ್‌ಡಿಎ ಹುದ್ದೆಗಳಾದ್ದರಿಂದ ಕೋರ್ಟ್‌ ನಿಯಮಗಳು, ಕಾನೂನುಗಳು, ಇತ್ತೀಚಿನ ವಿದ್ಯಮಾನಗಳ ಕುರಿತು ಸಹ ಈ ಸೆಕ್ಷನ್‌ನಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಕನ್ನಡದಿಂದ ಆಂಗ್ಲ ಭಾಷೆಗೆ ಅನುವಾದ

30 ಅಂಕಗಳಿಗೆ ಕನ್ನಡದಿಂದ ಆಂಗ್ರ ಭಾಷೆಗೆ ಭಾಷಾಂತರ ಮಾಡಲು ಕೇಳಲಾಗುತ್ತದೆ. ಯಾವುದಾದರೂ ಒಂದು ವಿಷಯದ ಕುರಿತು ಕನ್ನಡದಲ್ಲಿ ಮಾಹಿತಿ ಇರುತ್ತದೆ. ಅದೇ ಮಾಹಿತಿಯನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಬೇಕು. ಈ ಭಾಷಾಂತರದಲ್ಲಿ ಸ್ಪೆಲ್ಲಿಂಗ್ ತಪ್ಪುಗಳಿರಬಾರದು, ವಾಕ್ಯ ರಚನೆ ಶುದ್ಧವಾಗಿರಬೇಕು. ಪದಗಳ ಬಳಕೆ ಹೊಂದಿಕೆಯಾಗಬೇಕು. ಒಟ್ಟಾರೆ ಹೇಳುವುದಾರೆ ಗ್ರ್ಯಾಮರ್ ಮಿಸ್‌ಟೇಕ್‌ ಸಹ ಇರಬಾರದು. ಹೀಗಿದ್ದಲ್ಲಿ ಮಾತ್ರ ಪೂರ್ಣ ಅಂಕಗಳನ್ನು ಗಳಿಸಬಹುದು. ಈ ಭಾಷಾಂತರ ಪ್ರಶ್ನೆಯು ಸಹ ಭಾಗಶಃ ಪ್ರಚಲಿತ ವಿದ್ಯಮಾನಗಳದ್ದೇ ಬರುವ ಅವಕಾಶ ಇದೆ. ಆದ್ದರಿಂದ ಅಭ್ಯರ್ಥಿಗಳು ದೈನಂದಿನ ಆಗು-ಹೋಗುಗಳ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್‌ ನಲ್ಲಿ ಎರಡರಲ್ಲೂ ಓದಿಕೊಂಡರೆ ಅನುಕೂಲವಾಗಲಿದೆ.

​ಆಂಗ್ಲ ಭಾಷೆಯ ಪ್ರಬಂಧ

ಇಂಗ್ಲಿಷ್‌ನಲ್ಲಿ ಯಾವುದಾದರೂ ಒಂದು ವಿಷಯವನ್ನು ನೀಡಿ 30 ಅಂಕಗಳಿಗೆ ಪ್ರಬಂಧ ಬರೆಯಲು ಕೇಳಲಾಗುತ್ತದೆ. ಈ ವಿಷಯ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ್ದು ಇರಬಹುದು ಅಥವಾ ಯಾವುದೇ ಕ್ಷೇತ್ರದ ಪ್ರಮುಖ ಬೆಳವಳಿಗೆ, ರಿಮಾರ್ಕ್ಸ್‌ ಇರಬಹುದು. ಅಥವಾ ಒಂದು ವಿಷಯದ ಬಗ್ಗೆ ನಿಮ್ಮದೇ ಅನಿಸಿಕೆ, ಅಭಿಪ್ರಾಯ, ದೂರದೃಷ್ಟಿಯ ಅಂಶಗಳನ್ನು ಕೇಳಬಹುದು. ನಿಮ್ಮ ಜ್ಞಾನವನ್ನು ಅಂತಹ ವಿಷಯದ ಕುರಿತು ಆಂಗ್ಲ ಭಾಷೆಯಲ್ಲಿ ಪ್ರಬಂಧವಾಗಿ ಬರೆಯಬಹುದು. ಈ ಪ್ರಬಂಧಕ್ಕೆ ಸಿದ್ಧತೆ ನಡೆಸಲು ದಿನಪತ್ರಿಕೆಗಳು (ಆಂಗ್ಲ ಭಾಷೆ, ಕನ್ನಡ ಭಾಷೆ), ಮಾಸಿಕ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಿಯತಕಾಲಿಕೆಗಳನ್ನು ರೆಫರ್‌ ಮಾಡುವುದು ಉತ್ತಮ.

ಮೌಖಿಕ ಪರೀಕ್ಷೆ

ಮೌಖಿಕ ಪರೀಕ್ಷೆ ಎಂದರೆ ಸಂದರ್ಶನ ಇರುತ್ತದೆ. ಸಂದರ್ಶನದಲ್ಲಿ ಸಾಮಾನ್ಯವಾಗಿ ಯಾವುದೇ ಪ್ರಶ್ನೆಗಳನ್ನು ಕೇಳಬಹುದು. ಆದರೆ ಸಂಭಾವ್ಯ ಪ್ರಶ್ನೆಗಳೆಂದರೆ ಕೋರ್ಟ್‌ ನಿಯಮಗಳು, ಕಾನೂನುಗಳು, ಹೈಕೋರ್ಟ್‌ನಲ್ಲಿನ ಎಸ್‌ಡಿಎ ಹುದ್ದೆಯ ಸಾಮಾನ್ಯ ಕರ್ತವ್ಯದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಬಹುದು.

ಈ ಮೇಲೆ ತಿಳಿಸಿದಂತೆ ಆಯಾ ಸೆಕ್ಷನ್‌ ಪ್ರಶ್ನೆಗಳಿಗೆ ತಿಳಿಸಲಾದ ಮಾಹಿತಿಗಳನ್ನು ಓದಿಕೊಳ್ಳಿ.

ದಾಖಲೆಗಳ ಪರಿಶೀಲನೆ

ಹೈಕೋರ್ಟ್‌ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರತಿ ಸೆಕ್ಷನ್‌ನಲ್ಲಿ ನಿಗದಿಪಡಿಸಿದ ಕನಿಷ್ಠ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಿ ಮೂಲ ದಾಖಲೆಗಳ ಪರಿಶೀಲನೆಗೆ ಕರೆದು ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

APPLY ONLINE

Leave a Reply

Your email address will not be published. Required fields are marked *