Indian Navy Sailor Recruitment 2022: ಭಾರತೀಯ ನೌಕಾಪಡೆಯು ಆರ್ಟಿಫೀಷರ್ ಅಪ್ರೆಂಟಿಸ್ ಮತ್ತು ಸೀನಿಯರ್ ಸೆಕೆಂಡರಿ ರಿರ್ಕ್ಯೂಯಿಟ್ (ಎಸ್ಎಸ್‌ಆರ್) ಹುದ್ದೆಗಳನ್ನು ಭರ್ತಿ ಮಾಡಲು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ಭಾರತೀಯ ಮಿಲಿಟರಿ ಸೇವೆಗಳಲ್ಲಿ ಒಂದಾಗಿರುವ ಭಾರತೀಯ ನೌಕಾಪಡೆಯಲ್ಲಿ 2500 ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಆರ್ಟಿಫೀಷರ್ ಅಪ್ರೆಂಟಿಸ್ (ಎಎ) ಮತ್ತು ಸೀನಿಯರ್ ಸೆಕೆಂಡರಿ ರಿರ್ಕ್ಯೂಯಿಟ್ (ಎಸ್ಎಸ್‌ಆರ್) ಪದನಾಮಗಳ ನಾವಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಹಾಕಬಹುದು.
ಈ ಹುದ್ದೆಗಳನ್ನು 2022 ರ ಆಗಸ್ಟ್‌ನಲ್ಲಿ ಆರಂಭವಾಗಲಿರುವ ಬ್ಯಾಚ್ ಕೋರ್ಸ್‌ಗೆ, ಅವಿವಾಹಿತ ಪುರುಷ ಅಭ್ಯರ್ಥಿಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಉದ್ಯೋಗ ಸಂಸ್ಥೆ/ ಇಲಾಖೆ: ಭಾರತೀಯ ನೌಕಾಪಡೆ
ಹುದ್ದೆ ಹೆಸರು : ಆರ್ಟಿಫೀಷರ್ ಅಪ್ರೆಂಟಿಸ್ (ಎಎ) ಮತ್ತು ಸೀನಿಯರ್ ಸೆಕೆಂಡರಿ ರಿರ್ಕ್ಯೂಯಿಟ್ (ಎಸ್ಎಸ್‌ಆರ್) / ನಾವಿಕ
ಒಟ್ಟು ಹುದ್ದೆಗಳ ಸಂಖ್ಯೆ : 2500
Indian Navy Sailor Recruitment 2022
ಪ್ರಮುಖ ದಿನಾಂಕಗಳು
- ಅಪ್ಲಿಕೇಶನ್ ಸಲ್ಲಿಸಲು ಆರಂಭ ದಿನಾಂಕ: 29-03-2022
- ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 05-04-2022
- ಪರೀಕ್ಷೆ ದಿನಾಂಕ : ಮೇ / ಜೂನ್ 2022
ವಿದ್ಯಾರ್ಹತೆ
ಆರ್ಟಿಫೀಷರ್ ಅಪ್ರೆಂಟಿಸ್(AA) ಹುದ್ದೆ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯ ಜತೆಗೆ ರಸಾಯನಶಾಸ್ತ್ರ / ಬಯೋಲಜಿ / ಕಂಪ್ಯೂಟರ್ ಸೈನ್ಸ್ ಯಾವುದಾದರು ಒಂದು ವಿಷಯ ಓದಿರಬೇಕು. ಶೇಕಡ.60 ಅಂಕಗಳೊಂದಿಗೆ ಪಾಸಾಗಿರಬೇಕು.
ಸೀನಿಯರ್ ಸೆಕೆಂಡರಿ ರಿರ್ಕ್ಯೂಯಿಟ್ (SSR) : ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯ ಜತೆಗೆ ರಸಾಯನಶಾಸ್ತ್ರ / ಬಯೋಲಜಿ / ಕಂಪ್ಯೂಟರ್ ಸೈನ್ಸ್ ಯಾವುದಾದರು ಒಂದು ವಿಷಯ ಓದಿರಬೇಕು.
ssc mts and havildar notification 2022
ದೈಹಿಕ ಸಾಮರ್ಥ್ಯ ಅರ್ಹತೆಗಳು
ಅರ್ಜಿ ಸಲ್ಲಿಸುವ ಪುರುಷ ಅಭ್ಯರ್ಥಿಗಳು ಕನಿಷ್ಠ 157 ಸೆಂ.ಮೀ ಎತ್ತರವಿರಬೇಕು.
ಅರ್ಜಿ ಶುಲ್ಕ
- ಸಾಮಾನ್ಯ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ ರೂ.215.
- ಇತರೆ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
- ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ರುಪೇ ಕಾರ್ಡ್‌ಗಳ ಮೂಲಕವು ಪಾವತಿಸಬಹುದು.
ಅರ್ಜಿ ಸಲ್ಲಿಕೆ ಹೇಗೆ?
- ಅಭ್ಯರ್ಥಿಗಳು www.joinindiannavy.gov.in ಗೆ ಭೇಟಿ ನೀಡಿ, ಇ-ಮೇಲ್ ಐಡಿ ಮೂಲಕ ರಿಜಿಸ್ಟರ್ ಆಗಬೇಕು.
- ನಂತರ ರಿಜಿಸ್ಟರ್ ಇ-ಮೇಲ್ ಐಡಿ ಮೂಲಕ ಲಾಗಿನ್ ಆಗಿ ‘Current Opportunities’ ಎಂಬುದರ ಮೇಲೆ ಕ್ಲಿಕ್ ಮಾಡಿ.
- ‘Apply’ ಬಟನ್ ಮೇಲೆ ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿಗಳನ್ನು ತಪ್ಪದೇ ಭರ್ತಿ ಮಾಡಿ ಮತ್ತು ಸ್ಕ್ಯಾನ್ ಕಾಪಿಗಳನ್ನು ಅಪ್‌ಲೋಡ್ ಮಾಡಿ.
- ಪೂರ್ಣವಾಗಿ ಸಲ್ಲಿಸಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸಿದವರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಅರ್ಹತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
APPLY NOW
OFFICIAL NOTIFICATION
