Indian Navy SSC Executives Recruitment 2022 ಭಾರತೀಯ ನೌಕಾಪಡೆ ಎಸ್‌ಎಸ್‌ಸಿ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Indian Navy SSC Executives Recruitment 2022: ಭಾರತೀಯ ನೌಕಾ ಪಡೆಯು ಶಾರ್ಟ್‌ ಸರ್ವೀಸ್ ಕಮಿಷನ್‌ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಹಾಕಿ.

Indian Navy SSC Executives Recruitment 2022:

ಭಾರತೀಯ ನೌಕಾಪಡೆಯು ಮಾಹಿತಿ ತಂತ್ರಜ್ಞಾನ ವಿಭಾಗದ ಶಾರ್ಟ್‌ ಸರ್ವೀಸ್ ಕಮಿಷನ್‌ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಕೇರಳದ ಈಝಿಮಾಲಾದಲ್ಲಿನ ಇಂಡಿಯನ್ ನೇವಲ್ ಅಕಾಡೆಮಿಯಲ್ಲಿ ವಿಶೇಷ ನೇವಲ್ ಓರಿಯಂಟೇಶನ್ ಕೋರ್ಸ್ ಅಡಿಯಲ್ಲಿ ನೇಮಕ ಮಾಡಲಾಗುತ್ತದೆ.

ಹುದ್ದೆಯ ಹೆಸರು : ಇಂಡಿಯನ್ ನೇವಿ ಎಸ್‌ಎಸ್‌ಸಿ ಎಕ್ಸಿಕ್ಯೂಟಿವ್

ಒಟ್ಟು ಹುದ್ದೆಗಳು : ಒಟ್ಟು 50 ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ನೇಮಕಾತಿ ಸಂಸ್ಥೆ / ಪ್ರಾಧಿಕಾರ : ಭಾರತೀಯ ನೌಕಾಪಡೆ

ಅರ್ಜಿ ಸಲ್ಲಿಸುವುದು ಹೇಗೆ?

  • ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್‌ joinindiannavy.gov.in ಗೆ ಭೇಟಿ ನೀಡಿ.
  • ಓಪನ್‌ ಆದ ಪೇಜ್‌ನಲ್ಲಿ ‘Executive’ ಟ್ಯಾಬ್ ಆಯ್ಕೆ ಮಾಡಿ.
  • ಹೊಸ ಪುಟ ತೆರೆಯುತ್ತದೆ. ಇಲ್ಲಿ ರಿಜಿಸ್ಟ್ರರ್ ಮಾಡಿ, ಲಾಗಿನ್‌ ಆಗುವ ಮೂಲಕ ಅಪ್ಲಿಕೇಶನ್ ಪ್ರಕ್ರಿಯೆ ಆರಂಭಿಸಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಅರ್ಜಿ ಪೂರ್ಣಗೊಳಿಸಿ.
  • ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.

ಅರ್ಜಿಸಲ್ಲಿಸಲು ಅರ್ಹತೆಗಳು

  1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು.
  2. ಅಭ್ಯರ್ಥಿ ಜುಲೈ 02, 1997 ಮತ್ತು ಜನವರಿ 01, 2003 ರ ನಡುವೆ ಜನಿಸಿರಬೇಕು.
  3. ಇಂಜಿನಿಯರಿಂಗ್‌ ಡಿಗ್ರಿ ಅನ್ನು ಶೇಕಡ.60 ಅಂಕಗಳೊಂದಿಗೆ ಪಾಸ್‌ ಮಾಡಿದ ಹಾಗೂ ಅಂತಿಮ ಬಿಇ ಪದವಿ ಓದುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಹಾಕಬಹುದು.

ಪ್ರಮುಖ ದಿನಾಂಕಗಳು

ನೋಟಿಫಿಕೇಶನ್‌ ಬಿಡುಗಡೆ ದಿನಾಂಕ : 27-01-2022

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-02-2022

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ ಆಯ್ಕೆ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ ಹಾಗೂ ಇತರೆ ಹೆಚ್ಚಿನ ಸಂಪೂರ್ಣ ಮಾಹಿತಿಗಳಿಗಾಗಿ ಈ ಕೆಳಗಿನ ನೋಟಿಫಿಕೇಶನ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿ ಓದಿರಿ.

APPLY NOW

NOTIFICATION

ssc cgl key answer 2021 and question paper download

Leave a Reply

Your email address will not be published. Required fields are marked *