Karnataka excise department recruitment 2023|ಕೆಪಿಎಸ್‌ಸಿ ಮೂಲಕ ಅಬಕಾರಿ ಇಲಾಖೆಯ 1100 ಎಸ್‌ಐ, ಕಾನ್ಸ್‌ಟೇಬಲ್‌ ನೇಮಕ

Karnataka excise department recruitment 2023: ರಾಜ್ಯ ಅಬಕಾರಿ ಇಲಾಖೆಯ ಪೇದೆ ಹಾಗೂ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಕೆಪಿಎಸ್‌ಸಿ ಮೂಲಕ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಬಕಾರಿ ಸಚಿವರು ತಿಳಿಸಿದ್ದಾರೆ.

ರಾಜ್ಯ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 1000 ಕಾನ್ಸ್‌ಟೇಬಲ್‌ ಹಾಗೂ 100 ಸಬ್‌ ಇನ್ಸ್‌ಪೆಕ್ಟರ್‌ ಪೋಸ್ಟ್‌ಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಗೆ ಕಳುಹಿಸಿರುವುದಾಗಿ ಅಬಕಾರಿ ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದುಕೊಂಡುವ ಅಬಕಾರಿ ಇಲಾಖೆಯ ಬಲವರ್ಧನೆಗೆ ರಾಜ್ಯ ಸರ್ಕಾರ ಆಧ್ಯತೆ ನೀಡಿದೆ ಎಂದು ಹೇಳಿದ್ದು, ಲಾಭದ ಅಂಕಿಅಂಶಗಳನ್ನು ನೀಡಿದ್ದಾರೆ. ಅಲ್ಲದೇ ಹೊಸ ಮದ್ಯ ತಯಾರಿಗೆ ಉದ್ಯಮಿಗಳು ಮುಂದೆ ಬಂದರೆ ಮುಖ್ಯ ಮಂತ್ರಿಗಳ ಜತೆ ಚರ್ಚಿಸಿ ಅನುಮೋದನೆ ನೀಡುತ್ತೇವೆ. ಈ ಮೂಲಕ ರಾಜ್ಯದ ಪ್ರಜೆಗಳಿಗೆ ಉದ್ಯೋಗ ಸೃಜನೆ ಹೆಚ್ಚು ಮಾಡಲು ಅವಕಾಶ ಸಿಗಲಿದೆ ಎಂದಿದ್ದಾರೆ.

Karnataka excise department recruitment 2023

ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 1000 ಕಾನ್ಸ್‌ಟೇಬಲ್‌ ಹುದ್ದೆಗಳು, 100 ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಇಂದಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಇತರೆ ನೇಮಕಾತಿ ಹಂತಗಳಿಗೆ ಸಿದ್ಧತೆ ಮಾಡಿಕೊಳ್ಳಿ.

www.udyogmahiti.com

ಅಬಕಾರಿ ಇಲಾಖೆ ಶೀಘ್ರದಲ್ಲೇ ಅಧಿಸೂಚಿಸಲಿರುವ ಹುದ್ದೆಗಳ ವಿವರ
ಸಬ್‌ ಇನ್ಸ್‌ಪೆಕ್ಟರ್ : 100
ಕಾನ್ಸ್‌ಟೇಬಲ್ : 1000

ಯಾವ ಹುದ್ದೆಗೆ ಏನು ವಿದ್ಯಾರ್ಹತೆ?
ಸಬ್‌ ಇನ್ಸ್‌ಪೆಕ್ಟರ್ : ಯಾವುದೇ ಪದವಿ ಪಾಸ್.
ಕಾನ್ಸ್‌ಟೇಬಲ್ : ದ್ವಿತೀಯ ಪಿಯುಸಿ ಪಾಸ್.

ಹುದ್ದೆವಾರು ವೇತನ ಶ್ರೇಣಿ

ಸಬ್‌ ಇನ್ಸ್‌ಪೆಕ್ಟರ್ : Rs.37,900-70,850.
ಕಾನ್ಸ್‌ಟೇಬಲ್ : Rs.21,400- 42,000

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯಸ್ಸಿನ ಮಿತಿಗಳನ್ನು ಅಧಿಕೃತ ಅಧಿಸೂಚನೆ ಬಿಡುಗಡೆ ಆದ ನಂತರದಲ್ಲಿ ತಿಳಿಸಲಾಗುತ್ತದೆ.

teligram

Leave a Reply

Your email address will not be published. Required fields are marked *