Karnataka Govt Teacher Recruitment 2022 15,000 ಶಿಕ್ಷಕರ ನೇಮಕ: ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಯ ಅರ್ಹತೆಗೆ ತಿದ್ದುಪಡಿ ನಿಯಮ ಪ್ರಕಟ

Karnataka Govt Teacher Recruitment 2022 ಕರ್ನಾಟಕ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಮಾಜ ಪಾಠಗಳು ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಹತೆಗಳನ್ನು ಪರಿಷ್ಕೃತಗೊಳಿಸಿ, ತಿದ್ದುಪಡಿ / ಸೇರ್ಪಡೆ ಅಗಿ ಇದೀಗ ಕರ್ನಾಟಕ ಅಧಿಕೃತ ರಾಜ್ಯಪತ್ರದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.

ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು 6-8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ ಅಧಿಸೂಚನೆಯನ್ನು ಮಾರ್ಚ್‌ 21 ರಂದು ಬಿಡುಗಡೆ ಮಾಡಲಾಗುತ್ತಿದೆ. ಸದರಿ ನೇಮಕಾತಿಯಲ್ಲಿ ನಾಲ್ಕು ವಿಷಯಗಳ ಹುದ್ದೆಗಳಿಗೆ ಅಂದರೆ ಆಂಗ್ಲಭಾಷೆ, ಗಣಿತ ಮತ್ತು ವಿಜ್ಞಾನ, ಜೀವವಿಜ್ಞಾನ (ಮಕ್ಕಳ ಮತ್ತು ಶಿಕ್ಷಕರ ಅನುಪಾತಕ್ಕನುಗುಣವಾಗಿ ಎರಡನೇ ಹುದ್ದೆ) ಮತ್ತು ಸಮಾಜಪಾಠಗಳು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅಂದಹಾಗೆ ಇದೀಗ ಸಮಾಜ ಪಾಠಗಳು ಶಿಕ್ಷಕರ ಹುದ್ದೆಗೆ ಅರ್ಹತೆಗಳನ್ನು ತಿದ್ದುಪಡಿ ಮಾಡಿದ್ದು, ಸೇರ್ಪಡೆ ಅದೇಶವಾಗಿ ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರ ಸಮಾಜ ಪಾಠ ಹುದ್ದೆಗಳಿಗೆ ಈ ಕೆಳಗಿನಂತೆ ಅರ್ಹತೆಗಳನ್ನು ಓದಿಕೊಳ್ಳಲು ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಸಮಾಜ ಪಾಠಗಳು ಹುದ್ದೆಗಳಿಗಾಗಿ – ಸಮಾಜ ಪಾಠ ಸಮೂಹ ವಿಷಯಗಳಾದ ಇತಿಹಾಸ / ಅರ್ಥಶಾಸ್ತ್ರ / ಭೂಗೋಳಶಾಸ್ತ್ರ / ರಾಜ್ಯಶಾಸ್ತ್ರ ಇವುಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಐಚ್ಛಿಕ ವಿಷಯಗಳಾಗಿ ಅಭ್ಯಾಸ ಮಾಡಿರಬೇಕು ಎಂದು ಹೇಳಲಾಗಿದೆ

bmtc recruitment 2022-23

15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಪೈಕಿ ವಿಷಯವಾರು ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ.

  • ಆಂಗ್ಲ ಭಾಷೆ ಶಿಕ್ಷಕರ ಹುದ್ದೆಗಳು : 1500
  • ಗಣಿತ ವಿಜ್ಞಾನ ಶಿಕ್ಷಕರ ಹುದ್ದೆಗಳು: 6500
  • ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳು: 5000
  • ಜೀವ ವಿಜ್ಞಾನ ಶಿಕ್ಷಕರ ಹುದ್ದೆಗಳು: 2000

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆ

  1. ಪದವಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು ಪ್ರಾಥಮಿಕ ಶಿಕ್ಷಣ ತರಬೇತಿಯ 2 ವರ್ಷಗಳ ಡಿಪ್ಲೊಮ ಉತ್ತೀರ್ಣರಾಗಿರಬೇಕು. ಅಥವಾ
  2. ಪದವಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು ಬಿ.ಇಡಿ ಪದವಿ ಪಡೆದಿರಬೇಕು. ಅಥವಾ
  3. ವಿಶೇಷ ಶಿಕ್ಷಣ (ಸ್ಪೆಷಲ್ ಎಜುಕೇಶನ್) ಪದವಿ ಪಡೆದಿರಬೇಕು. ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು 4 ವರ್ಷದ ಬ್ಯಾಚುಲರ್ ಆಫ್‌ ಎಲಿಮೆಂಟರಿ ಎಜುಕೇಷನ್‌ನಲ್ಲಿ ಪದವಿ ಅಥವಾ 4 ವರ್ಷ ವರ್ಷಗಳ ಬ್ಯಾಚುಲರ್ ಆಫ್‌ ಎಜುಕೇಷನ್‌ನಲ್ಲಿ ಉತ್ತೀರ್ಣರಾಗಿರಬೇಕು.
  4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ 45 ಅಂಕಗಳನ್ನು ಗಳಿಸಿರಬೇಕು. ಹಾಗೂ
  5. ಕಾಲ ಕಾಲಕ್ಕೆ ಎನ್‌ಸಿಟಿಇಯು ನಿಗದಿಪಡಿಸಿದ ಯಾವುದಾದರು ಉನ್ನತ ಅಥವಾ ಹೆಚ್ಚುವರಿ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.
  6. ಸಮಾಜ ಪಾಠಗಳು ಹುದ್ದೆಗಳಿಗಾಗಿ – ಸಮಾಜ ಪಾಠ ಸಮೂಹ ವಿಷಯಗಳಾದ ಇತಿಹಾಸ / ಅರ್ಥಶಾಸ್ತ್ರ / ಭೂಗೋಳಶಾಸ್ತ್ರ / ರಾಜ್ಯಶಾಸ್ತ್ರ ಇವುಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಐಚ್ಛಿಕ ವಿಷಯಗಳಾಗಿ ಅಭ್ಯಾಸ ಮಾಡಿರಬೇಕು.
  7. ಬಿಇ ವ್ಯಾಸಂಗದಲ್ಲಿ ಆರ್ಕಿಟೆಕ್ಚರ್ ವಿಭಾಗದಲ್ಲಿ ಮೊದಲ 3 ಅಥವಾ 4 ಸೆಮಿಸ್ಟರ್‌ನಲ್ಲಿ ಗಣಿತ ಹಾಗೂ ಉಳಿದ ಸೆಮಿಸ್ಟರ್‌ನಲ್ಲಿ ಅಪ್ಲೈಡ್ ಮ್ಯಾಥಮೆಟಿಕ್ಸ್‌ ಓದಿರುವವರಿಗೆ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
Karnataka Govt Teacher Recruitment 2022

Leave a Reply

Your email address will not be published. Required fields are marked *