Karnataka pdo recruitment 2023 | PDO Recruitment 2023 | ಶೀಘ್ರದಲ್ಲೇ ಅಧಸೂಚನೆ ಬಿಡುಗಡೆ ಈ ಕುರಿತು ಮಾಹತಿ ನಿಮಗಾಗಿ

Karnataka pdo recruitment 2023 Notifications & syllabus Details: ಕರ್ನಾಟಕ ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ದ್ವಿತೀಯ ದರ್ಜೆ ಸಹಾಯಕರು, ಗ್ರೇಡ್‌ 1, ಗ್ರೇಡ್‌ 2 ಹುದ್ದೆಗಳನ್ನು 3 ರಿಂದ 4 ತಿಂಗಳೊಳಗೆ ಭರ್ತಿ ಮಾಡುವ ಎಲ್ಲಾ ಸಾಧ್ಯತೆ ಇದೆ. ಈ ಕುರಿತು ನೇಮಕಾತಿ ಶೀಘ್ರದಲ್ಲಿ ನಡೆಸಲಾಗುವುದು ಎಂದು ವಿಧಾನ ಪರಿಷತ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಭರವಸೆ ನೀಡಿದ್ದಾರೆ

ವಿದ್ಯಾರ್ಹತೆ:

ಈ ನೇಮಕಾತಿಗೆ ಬೇಕಾಗಿರುವ ವಿದ್ಯಾರ್ಹತೆ

karnataka pdo recruitment 2023
  • ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ): ಪದವಿ ಪಾಸ್
  • ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ): ದ್ವಿತೀಯ ಪಿಯುಸಿ ಪಾಸ್
  • ಕಾರ್ಯದರ್ಶಿ ಗ್ರೇಡ್‌ 1: ದ್ವಿತೀಯ ಪಿಯುಸಿ ಪಾಸ್
  • ಕಾರ್ಯದರ್ಶಿ ಗ್ರೇಡ್‌ 2 : ದ್ವಿತೀಯ ಪಿಯುಸಿ ಪಾಸ್

ನೇರ ನೇಮಕಾತಿ ನಡೆಸುವ ಎಲ್ಲ ಹುದ್ದೆಗಳಿಗೂ ಸಹ ಕಡ್ಡಾಯ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಇರುತ್ತದೆ.

XEROX ADDA 1
ಆರ್ಥಿಕ ಇಲಾಖೆ ಮುಂದೆ ಪ್ರಸ್ತಾವನೆ

ಗ್ರಾಮ ಪಂಚಾಯ್ತಿಗಳಿಗೆ 30 ಕ್ಕೂ ಹೆಚ್ಚು ಇಲಾಖೆಗಳ ಸೇವೆ ಒದಗಿಸುವ ಅಧಿಕಾರ ನೀಡಿದ್ದು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ 326 ಹುದ್ದೆಗಳ ಭರ್ತಿಗೆ ಅನುಮತಿ ಕೋರಿದ ಪ್ರಸ್ತಾವನೆ ಆರ್ಥಿಕ ಇಲಾಖೆ ಮುಂದಿದೆ ಎಂದು ಸಿಎಂ ತಿಳಿಸಿದ್ದಾರೆ.

ಕಾರ್ಯದರ್ಶಿ ಹುದ್ದೆಗಳ ವಿವರ

487 ಕಾರ್ಯದರ್ಶಿ ಗ್ರೇಡ್ 1 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ ಬಡ್ತಿ ಮೂಲಕ ಭರ್ತಿಗೆ ಕ್ರಮಕೈಗೊಳ್ಳಲಾಗುತ್ತದೆ.

556 ಕಾರ್ಯದರ್ಶಿ ಗ್ರೇಡ್‌ 2 ಹುದ್ದೆಗಳು ಖಾಲಿ ಇವೆ. ಈ ಪೈಕಿ 343 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಉಳಿದ ಹುದ್ದೆಗಳನ್ನು ಹಾಲಿ ಸಿಬ್ಬಂದಿಗೆ ಬಡ್ತಿ ನೀಡಿ ತುಂಬಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.

teligram
ಎಸ್‌ಡಿಎ ಹುದ್ದೆಗಳ ವಿವರ

ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 625 ದ್ವಿತೀಯ ದರ್ಜೆ ಹುದ್ದೆಗಳು ಖಾಲಿ ಇವೆ. ಇವುಗಳ ಪೈಕಿ 124 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಒಟ್ಟಾರೆ ಶೇಕಡ.90 ಹುದ್ದೆಗಳನ್ನು ಮುಂದಿನ ನಾಲ್ಕು ತಿಂಗಳ ಒಳಗಾಗಿ ಭರ್ತಿ ಮಾಡಲಾಗುತ್ತದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಉದ್ಯೋಗಾಕಾಂಷಿಗಳು ಪರೀಕ್ಷೆಗೆ ಸಿದ್ದರಾಗಿ

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ), ಕಾರ್ಯದರ್ಶಿ ಗ್ರೇಡ್‌ 1, ಕಾರ್ಯದರ್ಶಿ ಗ್ರೇಡ್‌ 2 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ. ಆದ್ದರಿಂದ ಈ ಉದ್ಯೋಗಗಳ ಆಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಇಂದಿನಿಂದಲೇ ತಯಾರಿ ನಡೆಸಿ.

www.udyogmahiti.com

karnataka pdo recruitment 2023
teligram

Leave a Reply

Your email address will not be published. Required fields are marked *