ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಿಂದ ನೇಮಕಾತಿ Karnataka veterinary and animal husbandry department recruitment ಅಧಿಸೂಚನೆ ಪ್ರಕಟ ಈ ಕುರಿತು ಮಾಹಿತಿ ನಿಮಗಾಗಿ…

AHF Recruitment 2022: ರಾಜ್ಯ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್’ನಲ್ಲಿ ಅಗತ್ಯ ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗೆ ಅರ್ಹತೆ ಹಾಗೂ ಇತರೆ ಮಾಹಿತಿ ಕೆಳಗಿನಂತಿದೆ.

Karnataka veterinary and animal husbandry department recruitment

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್’ karnataka veterinary and animal husbandry department recruitmentಇಲ್ಲಿಗೆ ಕುಲಪತಿ ಹುದ್ದೆಯನ್ನು ನೇಮಕ ಮಾಡಲು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಅಫೀಶಿಯಲ್ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಸದರಿ ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಬೀದರ್‌ನಲ್ಲಿನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯ ಅವಧಿ ದಿನಾಂಕ 22-02-2022 ಕ್ಕೆ ಅಂತ್ಯಗೊಳ್ಳಲಿದೆ. ಈ ಹುದ್ದೆಯನ್ನು ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಮಾರ್ಗಸೂಚಿಗಳು ಮತ್ತು ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿನಿಯಮ 2004 ರನ್ವಯ ಹಾಗೂ ಷರತ್ತು, ನಿಬಂಧನೆಗಳಡಿ ಭರ್ತಿ ಮಾಡಲು ಉದ್ದೇಶಿಸಲಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆಗಳೇನು?

  • ಅಭ್ಯರ್ಥಿಗಳು ಪಶುವೈದ್ಯಕೀಯ ವಿಜ್ಞಾನ / ಪಶು ವಿಜ್ಞಾನ / ಹೈನು ವಿಜ್ಞಾನ / ಮೀನುಗಾರಿಕೆ ವಿಜ್ಞಾನ / ಹಾಗೂ ಈ ಸಂಬಂಧಿತ ಕ್ಷೇತ್ರದಲ್ಲಿ ಪ್ರಾಧ್ಯಾಪಕ ಅಥವಾ ತತ್ಸಮಾನ ವೃಂದದಲ್ಲಿ 10 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಅವಧಿ ಕರ್ತವ್ಯ ನಿರ್ವಹಿಸಿರಬೇಕು.
  • ಅರ್ಜಿ ಸಲ್ಲಿಸಲು ಆಸಕ್ತಿ ಉಳ್ಳ ಅಭ್ಯರ್ಥಿಗಳು / ಅಧಿಕಾರಿಗಳು ತಮ್ಮ ಸಂಪೂರ್ಣ ಸೇವಾ ವಿವರಗಳುಳ್ಳ ಅರ್ಜಿಗಳನ್ನು , ಅವಶ್ಯವಿರುವ ವಿವರ / ದಾಖಲೆಗಳೊಂದಿಗೆ 5 ಪ್ರತಿಗಳಲ್ಲಿ ಸರ್ಕಾರದ ಕಾರ್ಯದರ್ಶಿಗಳು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, 4ನೇ ಮಹಡಿ, ವಿಕಾಸಸೌಧ, ಬೆಂಗಳೂರು ರವರಿಗೆ ಈ ಪ್ರಕಟಣೆ ಹೊರಡಿಸಿದ 30 ದಿನಗಳೊಳಗಾಗಿ ಸಲ್ಲಿಸತಕ್ಕದ್ದು.
  • ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ www.kvafsu.edu.in ನಲ್ಲಿ ಅರ್ಜಿಯನ್ನು ಪಡೆಯಬಹುದು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಫೆಬ್ರುವರಿ 25, 2022

Notification

Application form

Leave a Reply

Your email address will not be published. Required fields are marked *