ಯುವನಿಧಿಗೆ ಅರ್ಜಿ ಸ್ವೀಕಾರ ಆರಂಭ, ಮಾಸಿಕ Rs.3000, Karnataka Yuva Nidhi Scheme, ಈ ಕುರಿತು ಹೆಚ್ಚಿನ ಮಾಹಿತಿ

Karnataka Yuva Nidhi Scheme, ಕರ್ನಾಟಕ ರಾಜ್ಯ ಸರ್ಕಾರವು ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿಗೆ ಡಿಸೆಂಬರ್ 26 ರಿಂದ ಅರ್ಜಿ ಸ್ವೀಕಾರ ಮಾಡುವುದಾಗಿ ಘೋಷಣೆ ಮಾಡಿದೆ. ಅರ್ಹರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಇಂದಿನಿಂದ ಅರ್ಜಿ ಸಲ್ಲಿಸಬಹುದಾಗಿದೆ.

  • ಯುವನಿಧಿಗೆ ಅಪ್ಲಿಕೇಶನ್‌ ಡಿಸೆಂಬರ್ 26 ರಿಂದ ಸ್ವೀಕಾರ.
  • ಜನವರಿ 01 ರಂದು ಯೋಜನೆ ಜಾರಿ.
  • ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಮಾಹಿತಿ ಇಲ್ಲಿದೆ.
yuvanidhi
UDYOGMAHITI.COM

Karnataka Yuva Nidhi Scheme

Karnataka Yuva Nidhi Scheme, ಕರ್ನಾಟಕ ಸರ್ಕಾರವು 5 ಗ್ಯಾರಂಟಿಗಳಲ್ಲಿ ಒಂದಾದ ನಿರುದ್ಯೋಗಿ ಪದವೀಧರರಿಗೆ, ಡಿಪ್ಲೊಮ ಪಾಸಾದ ನಿರುದ್ಯೋಗಿಗಳಿಗೆ ನೀಡುವುದಾಗಿ ಘೋಷಣೆ ಮಾಡಿದ್ದ ಯುವನಿಧಿ ಯೋಜನೆ ಜಾರಿಗೆ ಸಕಲ ಸಿದ್ಧತೆ ನಡೆಸಿದೆ. ಅದರ ಭಾಗವಾಗಿ ಇಂದಿನಿಂದ (ಡಿಸೆಂಬರ್ 26) ನಿರುದ್ಯೋಗಿಗಳಿಂದ ಅರ್ಜಿ ಸ್ವೀಕಾರವನ್ನು ಮಾಡಲಿದೆ. ಆಸಕ್ತರು ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಪ್ರಮುಖ ದಿನಾಂಕಗಳು
ಯುವನಿಧಿ ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭ ದಿನಾಂಕ : 26-12-2023
ಯುವನಿಧಿ ಯೋಜನೆ ಜಾರಿ ಹಾಗೂ ಅಭ್ಯರ್ಥಿಗಳ ಖಾತೆ ಹಣ ಜಮಾವಣೆ ದಿನಾಂಕ: 01-01-2024
ಯುವನಿಧಿಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ : https://sevasindhu.karnataka.gov.in
ಪದವೀಧರ ನಿರುದ್ಯೋಗಿಗಳಿಗೆ ಯುವನಿಧಿ ಪ್ರತಿ ತಿಂಗಳು: ರೂ.3000.
ಡಿಪ್ಲೊಮ ಪಾಸ್ ನಿರುದ್ಯೋಗಿಗಳಿಗೆ ಯುವನಿಧಿ ಪ್ರತಿ ತಿಂಗಳು: ರೂ.1500.

ಯುವನಿಧಿಗೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ಉದ್ಯೋಗ ಪಡೆಯುವವರೆಗೆ ಮಾತ್ರ ಅಥವಾ 2 ವರ್ಷ ಗರಿಷ್ಠ ಅವಧಿಯ ವರೆಗೆ ಮಾತ್ರ ಈ ಸೌಲಭ್ಯ ನೀಡಲಾಗುತ್ತದೆ.

ಯುವನಿಧಿ ಯೋಜನೆಗೆ ಅರ್ಜಿ ಹಾಕಲು ಅರ್ಹತೆ
2023 ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಪದವಿ / ಡಿಪ್ಲೊಮ ಪಾಸ್ ಮಾಡಿದ್ದು, ಉತ್ತೀರ್ಣರಾದ ದಿನಾಂಕದಿಂದ 180 ದಿನ ಕಳೆದರೂ ಉದ್ಯೋಗ ಪಡೆಯದವರು ಮಾತ್ರ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಉತ್ತೀರ್ಣರಾದ ದಿನಾಂಕದಿಂದ 6 ತಿಂಗಳ ವರೆಗೆ ತಮ್ಮ ಅಧಿಕೃತ ಬ್ಯಾಂಕ್‌ ಖಾತೆಗಳ ವಹಿವಾಟು ಸ್ಟೇಟ್‌ಮೆಂಟ್‌ ಪ್ರತಿ ಕಡ್ಡಾಯವಾಗಿ ಸಲ್ಲಿಸಬೇಕಾಗಿರುತ್ತದೆ.

ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆದು ಅಧ್ಯಯನ ಮಾಡುತ್ತಿರುವವರು, ಅಪ್ರೆಂಟಿಸ್‌ ಹುದ್ದೆಗಳಿಗೆ ಸೇರಿದವರು, ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಪಡೆದವರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  1. ಆಧಾರ್ ಕಾರ್ಡ್‌
  2. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
  3. ಬ್ಯಾಂಕ್‌ ಖಾತೆ ಪಾಸ್ ಬುಕ್‌ ಪ್ರತಿ
  4. ಪದವಿ / ವೃತ್ತಿಪರ ಕೋರ್ಸ್‌ ಪಡೆದ ಪ್ರಮಾಣ ಪತ್ರ
  5. ಕೋರ್ಸ್‌ ಮುಗಿದು 6 ತಿಂಗಳಾದರು ಉದ್ಯೋಗ ಪಡೆಯದ ಕುರಿತು ಸ್ವಯಂ ದೃಢೀಕೃತ ಪ್ರಮಾಣ ಪತ್ರ ಅಥವಾ ನೋಟರಿ.
UDYOGMAHITI.COM

Leave a Reply

Your email address will not be published. Required fields are marked *