KPSC recruitment 2023 | ಕೆಪಿಎಸ್‌ಸಿ ಇಂದ ಡಾಟಾ ಎಂಟ್ರಿ ಆಪರೇಟರ್‌, ಸ್ಟೆನೋಗ್ರಾಫರ್, ಡ್ರೈವರ್, ಗ್ರೂಪ್‌ ಡಿ ಹುದ್ದೆಗಳ ನೇಮಕ

KPSC recruitment 2023 ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಗತ್ಯ ಇರುವ ಬೆರಳಚ್ಚುಗಾರರು / ದತ್ತಾಂಶ ನಮೂದಕರು, ವಾಹನ ಚಾಲಕರು ಮತ್ತು ಗ್ರೂಪ್‌-ಡಿ ಸಿಬ್ಬಂದಿಗಳ ನೇಮಕಾತಿಗೆ ಸಂಕ್ಷಿಪ್ತ ಟೆಂಡರ್ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಹೊರಗುತ್ತಿಗೆ ಮೇಲೆ ಸಿಬ್ಬಂದಿಗಳನ್ನು ನೀಡಲು ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಲೋಕಸೇವಾ ಆಯೋಗದ ಕಛೇರಿಯಲ್ಲಿ ಖಾಲಿ ಇರುವ ಬೆರಳಚ್ಚುಗಾರರು / ದತ್ತಾಂಶ ನಮೂದಕರು, ವಾಹನ ಚಾಲಕರು ಮತ್ತು ಗ್ರೂಪ್‌-ಡಿ ಸಿಬ್ಬಂದಿಗಳ ನೇಮಕಾತಿಗೆ ಸಂಕ್ಷಿಪ್ತ ಅಧಿಸೂಚನೆ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಟೆಂಡರ್ ಆಹ್ವಾನಿಸಲಾಗಿದೆ.

www.udyogmahiti.com

ಅಭ್ಯರ್ಥಿಗಳು ಈ ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಆದರೆ ಟೆಂಡರ್‌ ಮೂಲಕ ಸಿಬ್ಬಂದಿಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಟೆಂಡರ್ ಸಂಖ್ಯೆ: PSC 147ADM/2022-23/674 ಮೇಲಿನ ಸದರಿ ಟೆಂಡರ್‌ಗೆ ಸಂಬಂಧಿಸಿದ ದಾಖಲೆಗಳನ್ನು ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ https://eproc.karnataka.gov.in ನಿಂದ ದಿನಾಂಕ 06-02-2023 ರಿಂದ 16-03-2023ರ ಸಂಜೆ 04-00 ಗಂಟೆಯೊಳಗೆ ಡೌನ್‌ಲೋಡ್‌ ಮಾಡಿಕೊಂಡು, ದಿನಾಂಕ 16-03-2023 ರ ಸಂಜೆ 05-00 ಗಂಟೆಯವರೆಗೆ ಇ-ಟೆಂಡರ್‌ ಅನ್ನು ಸಲ್ಲಿಸಬಹುದು.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಛೇರಿಯ ವೇಳೆಯಲ್ಲಿ ಆಯೋಗದ ದೂರವಾಣಿ ಸಂಖ್ಯೆ 080-30565802 ಮೂಲಕ ಪಡೆಯಬಹುದು.

ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ಮೇಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಆಸಕ್ತರು ಟೆಂಡರ್‌ ಅರ್ಜಿ ಸಲ್ಲಿಸುವ ಮೂಲಕ ಸಿಬ್ಬಂದಿಗಳನ್ನು ನೀಡಬಹುದಾಗಿದೆ.

ಕೆಪಿಎಸ್‌ಸಿ ಕಛೇರಿಯ ಬೆರಳಚ್ಚುಗಾರರು / ದತ್ತಾಂಶ ನಮೂದಕರು, ವಾಹನ ಚಾಲಕರು ಮತ್ತು ಗ್ರೂಪ್‌-ಡಿ ಸಿಬ್ಬಂದಿ ಹುದ್ದೆಗಳಿಗೆ ಕಾರ್ಯಾನುಭವಿಗಳನ್ನು ನೇಮಿಸಬೇಕಾಗುತ್ತದೆ. ಕನಿಷ್ಠ ಅರ್ಹತೆಗಳನ್ನು, ಕೌಶಲಗಳನ್ನು ಹೊಂದಿರುವವರನ್ನು ನೀಡಬೇಕಾಗುತ್ತದೆ. ಈ ಬಗ್ಗೆ ಟೆಂಡರ್‌ ಅರ್ಜಿಯಲ್ಲಿ ಅಗತ್ಯ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಇತರೆ ಹೆಚ್ಚಿನ ಮಾಹಿತಿಗೆ ಕರ್ನಾಟಕ ಲೋಕಸೇವಾ ಆಯೋಗದ ಕಛೇರಿಯ ವೇಳೆಯಲ್ಲಿ ದೂರವಾಣಿ ಸಂಖ್ಯೆ 080-30565802 ಗೆ ಕರೆ ಮಾಡಬಹುದು.

teligram

Leave a Reply

Your email address will not be published. Required fields are marked *