ssc gd constable PET/ PST Admit Card Download ಎಸ್ಎಸ್ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದ್ದು ದೈಹಿಕ ಸಹನಾ ಪರೀಕ್ಷೆ (ಪಿಇಟಿ) ಮತ್ತು ಧೈಹಿಕ ಸಾಮರ್ಥ್ಯ ಪರೀಕ್ಷೆ (ಪಿಎಶ್‌ಟಿ)ಗೆ ಆಯ್ಕೆಯಾಗಿರುವ ಬಗ್ಗೆ ಅಭ್ಯರ್ಥಿಗಳು ಪರಿಶೀಲನೆ ನಡೆಸಬಹುದಾಗಿದೆ.
ssc gd constable result 2022 pdf download
ಸಿಬ್ಬಂದಿ ನೇಮಕಾತಿ ಆಯೋಗ(ಎಸ್‌ಎಸ್‌ಸಿ)ವು ಕಾನ್ಸ್‌ಟೇಬಲ್‌ಗಳ ಹುದ್ದೆಗಳ ಭರ್ತಿಗೆ ನಡೆಸಿದ ಎಸ್‌ಎಸ್‌ಸಿ ಜಿಡಿ ಕಾನ್ಸ್‌ಟೇಬಲ್ 2019 ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಎಸ್ಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದ್ದು ಮುಂದಿನ ಹಂತದ ದೈಹಿಕ ಸಹನಾ ಪರೀಕ್ಷೆ (ಪಿಇಟಿ) ಮತ್ತು ಧೈಹಿಕ ಸಾಮರ್ಥ್ಯ ಪರೀಕ್ಷೆ (ಪಿಎಶ್‌ಟಿ)ಗೆ ಆಯ್ಕೆಯಾಗಿರುವ ಬಗ್ಗೆ ಅಭ್ಯರ್ಥಿಗಳು ಪರಿಶೀಲನೆ ನಡೆಸಬಹುದಾಗಿದೆ.
ಸಧ್ಯ ಅಭ್ಯರ್ಥಿಗಳ ಅಂಕಗಳನ್ನು ಪ್ರಕಟಿಸಿಲ್ಲ. ಶೀಘ್ರದಲ್ಲೇ ಅಂಕಗಳನ್ನು ಪ್ರಕಟಗೊಳಿಸುವ ಸಾಧ್ಯತೆಯಿದೆ. ಸಿಎಪಿಎಫ್, ಎನ್‌ಐಎ, ಎಸ್‌ಎಸ್‌ಎಫ್ ಮತ್ತು ರೈಫಲ್‌ಮನ್ ವಿಭಾಗಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಎಸ್‌ಎಸ್‌ಸಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ನಡುವೆ ಜಿಡಿ ಕಾನ್ಸ್‌ಟೇಬಲ್ ಪರೀಕ್ಷೆ ನಡೆಸಿತ್ತು. ಒಟ್ಟು 30,41,284 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
CUTOFF MARKS MALE CANDIDATES

CUTOFF MARKS FEMALE CANDIDATES

LIST OF MALE CANDIDATES QUALIFIED FOR PET/PST
LIST OF FEMALE CANDIDATES QUALIFIED FOR PET/PST
ಪಿಇಟಿ/ಪಿಎಸ್‌ಟಿ ಶಾರ್ಟ್‌ಲಿಸ್ಟೆಡ್ ಪಟ್ಟಿಯನ್ನು 1:10 ಅನುಪಾತದಲ್ಲಿ ಸಿದ್ಧಗೊಳಿಸಲಾಗುತ್ತದೆ. ಅಂದರೆ 1 ಹುದ್ದೆಗೆ 10 ಅಭ್ಯರ್ಥಿಗಳಂತೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ) ಅಭ್ಯರ್ಥಿಗಳಿಗೆ ಕನಿಷ್ಠ ಶೇ.33 ಅಂಕ ಮತ್ತು ಯುಆರ್ ಮತ್ತು ಇಎಸ್‌ಎಂ ಅಭ್ಯರ್ಥಿಗಳಿಗೆ ಕನಿಷ್ಠ ಶೇ.35 ಅಂಕಗಳ ವಿನಾಯಿತಿ ನೀಡಲಾಗಿದೆ.
ಸಿಬ್ಬಂದಿ ನೇಮಕಾತಿ ಆಯೋಗವು ಕಾನ್ಸ್‌ಟೇಬಲ್ (ಜಿಡಿ) ನೇಮಕಕ್ಕೆ ಸಂಬಂಧಿಸಿದಂತೆ ಆಗಸ್ಟ್ 13 ರಿಂದ ಸೆಪ್ಟೆಂಬರ್ 25 ರವರೆಗೆ ದೇಹದಾಢ್ರ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ ನಡೆಸಲಾಗುವುದು ಎಂದು ಪ್ರಕಟಿಸಿದೆ.
ಒಟ್ಟು 5,34,052 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ನೇಮಕ ಮಾಡಿಕೊಳ್ಳುವ ಅರೆ ಸೇನಾಪಡೆಗಳು ಈ ಪರೀಕ್ಷೆಗಳನ್ನು ನಡೆಸಲಿವೆ. ಶೀಘ್ರದಲ್ಲೇ ಅಭ್ಯರ್ಥಿಗಳು ದೇಹದಾಢ್ರ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗೆ ಸಿದ್ಧರಾಗಬೇಕಿದೆ. ದೈಹಿಕ ಪರೀಕ್ಷೆಯ ನಂತರ ಮುಂದಿನ ಹಂತದ ಪರೀಕ್ಷೆ ಪ್ರಕ್ರಿಯೆಗಳು ನಡೆಯಲಿವೆ.
ದೇಶದಾದ್ಯಂತ ಒಟ್ಟು 100 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಪ್ರವೇಶ ಪತ್ರ, ಸಮಯ ಮತ್ತಿತರ ಮಾಹಿತಿಯನ್ನು ಸಿಆರ್‌ಪಿಎಫ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಒದಗಿಸಲಾಗುತ್ತದೆ ಎಂದು ಆಯೋಗವು ಪ್ರಕಟಣೆಯಲ್ಲಿ ಹೇಳಿದೆ. ಎಸ್‌ಎಸ್‌ಸಿ ಜಿಡಿ ಪಿಇಟಿ/ಪಿಎಸ್‌ಟಿ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್ https://ssc.nic.in/ ಕ್ಲಿಕ್ ಮಾಡಿ.