udyoga mela 2023, ಮಹಿಳೆಯರಿಗಾಗಿ ಬೃಹತ್ ಉದ್ಯೋಗ ಮೇಳ

udyoga mela 2023 : ಧಾರವಾಡ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 75ನೇ ಜನ್ಮದಿನದ ಅಂಗವಾಗಿ ಜನತಾ ಶಿಕ್ಷಣ ಸಮಿತಿ ಹಾಗೂ ಲ್ಯಾಪಿಡ್‌ ಸಂಸ್ಥೆಗಳ ಆಶ್ರಯದಲ್ಲಿ ವಿದ್ಯಾಗಿರಿ ಜೆಎಸ್‌ಎಸ್‌ ಕ್ಯಾಂಪಸ್‌ನಲ್ಲಿ ಅ. 29ರಂದು ಬೆಳಗ್ಗೆ 10.30ಕ್ಕೆ ಮಹಿಳೆಯರಿಗಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ ಹೇಳಿದರು.

ಕಾಲೇಜಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಮೂಹ ಸಂಸ್ಥೆಗಳು ಸದಾ ಶ್ರಮಿಸುತ್ತಿವೆ. ಇದೀಗ 3ನೇ ಬಾರಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ವೀರೇಂದ್ರ ಹೆಗ್ಗಡೆ ಅವರ ಜನ್ಮದಿನ ನಿಮಿತ್ತ ಕಳೆದ ವರ್ಷದಿಂದ ಸತತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದು 75ನೇ ಈ ಕಾರ್ಯಕ್ರಮವಾಗಿದೆ ಎಂದರು

➡️ಗ್ರಾಮ ಪಂಚಾಯತಿಯಲ್ಲಿ 5980 ಡೇಟಾ ಎಂಟ್ರಿ ಆಪರೇಟರ್ ನೇರ ನೇಮಕಾತಿ 2023

ರಾಪಿಡ್ ಸಂಸ್ಥೆ ಸಿಇಒ ಮಾಳವಿಕಾ ಕಡಕೋಳ ಮಾತನಾಡಿ, ಈ ಹಿಂದೆ ನಡೆದ ಉದ್ಯೋಗ ಮೇಳಗಳು ಅತ್ಯಂತ ಯಶಸ್ವಿಯಾಗಿ ನಡೆದಿವೆ. ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಈ ಬಾರಿಯ ಮೇಳದಲ್ಲಿ ಸುಮಾರು 40 ಕಂಪನಿಗಳು ಭಾಗವಹಿಸಲಿದ್ದು, ಸುಮಾರು 4,000 ಹುದ್ದೆಗಳ ಭರ್ತಿಗೆ ಸಂದರ್ಶನ ಇರಲಿದೆ. ಬೆಳಗ್ಗೆ 8ರಿಂದ ನೋಂದಣಿ ಆರಂಭವಾಗಲಿದ್ದು,

ಎಸ್‌ಎಸ್‌ಎಲ್‌ಸಿ ಪಾಸ್‌ ಅಥವಾ ಫೇಲ್ ಆದವರಿಂದ ಸ್ನಾತಕೋತ್ತರ ಪದವೀಧರರವರೆಗಿನ ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳಬಹುದು ಎಂದರು. ಮೇಳವನ್ನು ಡಾ. ಅಜಿತ್ ಪ್ರಸಾದ ಉದ್ಘಾಟಿಸುವರು. ಏಕಸ್ ಕಂಪನಿಯ ಡಾ. ರವಿ ಗುತ್ತಲ, ಟಾಟಾ ಮೋಟರ್ಸ್‌ನ ಅಮಿತವ್ ಸಹಾಯ್‌ ಅತಿಥಿಗಳಾಗಿ ಭಾಗಹಿಸುವರು.

ನಮ್ಮ WhatsApp Group ಅಲ್ಲಿ ಸೇರಲು 9019 899 822 ಈ ನಂಬರೆ Join ಅಂತಾ ಮೆಸೇಜು ಮಾಡಿ, ನಂತರ ನಿಮ್ಮ ನಂಬರೆಗೆ ಗ್ರೂಪ್ ಲಿಂಕ ಕಳೆಸಲಾಗುತ್ತದೆ ಆ ಲಿಂಕ ಮೂಲಕ ನಿವು ಗ್ರೂಪಗೆ ಸೇರಿಕೊಳ್ಳಿ

teligram

Leave a Reply

Your email address will not be published. Required fields are marked *