UPSC IAS ಪರೀಕ್ಷೆ ಪಾಸ್‌ ಮಾಡುವವರ ಪೈಕಿ ಇಂಜಿನಿಯರ್‌ಗಳೇ ಹೆಚ್ಚು ಏಕೆ? ಅವರ ಸಕ್ಸಸ್ ಸೀಕ್ರೇಟ್ಸ್‌ ಏನು ಗೊತ್ತಾ?

ಯುಪಿಎಸ್‌ಸಿ ನಾಗರೀಕ ಸೇವೆಗಳ ಪರೀಕ್ಷೆಯನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಪ್ರತಿ ವರ್ಷ ನಡೆಸಲಾಗುವ ಈ ಪರೀಕ್ಷೆಯನ್ನು ಗೆಲ್ಲುವವರ ಪೈಕಿ ಇಂಜಿನಿಯರಿಂಗ್‌ ಬ್ಯಾಂಗ್ರೌಂಡ್‌ನವರೇ ಹೆಚ್ಚು ಎನ್ನುತ್ತವೆ ಅಂಕಿ ಅಂಶಗಳು. ಅವರ ಸಕ್ಸಸ್‌ನ ಟಾಪ್‌ ಸೀಕ್ರೇಟ್ಸ್‌ ಏನು ಎಂದು ಇಲ್ಲಿ ತಿಳಿಸಲಾಗಿದೆ ನೋಡಿರಿ.

ಕೆಲವು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಕಂಡವರೇ ಹೇಳುವ ಪ್ರಕಾರ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬೋರಿಂಗ್ ಸಬ್ಜೆಕ್ಟ್‌ ಓದುವುದರಲ್ಲಿಯೂ ಸಹ ಏಕಾಗ್ರತೆ ವಹಿಸುವುದು, ಓದಿ ಮುಗಿಸಲು ಶ್ರಮ ಹಾಕುವ ಗುಣವನ್ನು ಬೆಳೆಸಿಕೊಂಡಿರುತ್ತಾರಂತೆ. ಅವರು ಸದಾ ಫಲಿತಾಂಶ ಆಧಾರಿತರು. ಬಹುಸಂಖ್ಯಾತ ವಿದ್ಯಾರ್ಥಿಗಳು 40 ಸಬ್ಜೆಕ್ಟ್‌ಗಳನ್ನು ಇಂಜಿನಿಯರಿಂಗ್‌ ಪದವಿಯಲ್ಲಿ ಓದುತ್ತಾರೆ. ಅವೆಲ್ಲವೂ ಅವರ ಆಸಕ್ತಿಯ ಸಬ್ಜೆಕ್ಟ್‌ಗಳಲ್ಲ. ಆದರೆ ಇಂಜಿನಿಯರಿಂಗ್‌ ಆಗಲು ಅವೆಲ್ಲವನ್ನು ಓದುತ್ತಾರೆ.

ಸರ್ಕಾರಿ ನೌಕರಿ ಎಂಬುದು ಕೆಲವರ ಫ್ಯಾಷನ್‌ ಅಲ್ಲ. ಆದರೆ ಸರ್ಕಾರಿ ಹುದ್ದೆಗೆ ದೊಡ್ಡ ಮಟ್ಟದ ಸ್ಪರ್ಧೆ ಇದೆ. ಸರ್ಕಾರಿ ಅಧಿಕಾರಿ ಆಗಬೇಕು, ಅದರಲ್ಲೂ ಕೇಂದ್ರ ಸರ್ಕಾರದ ಗ್ರೂಪ್‌ ಎ ಹುದ್ದೆಗೆ – ದೇಶದ ನಾಗರೀಕ ಸೇವೆಯ ಹುದ್ದೆಗಳಿಗೆ ಸೇರಬೇಕು ಎಂದರೆ ಸಾಕಷ್ಟು ಓದಿಕೊಳ್ಳಬೇಕಾಗುತ್ತದೆ. ಈ ಕಠಿಣತೆಯನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸರಳವಾಗಿ ನಿಭಾಯಿಸಬಲ್ಲರು. ಆದ್ದರಿಂದ ಯುಪಿಎಸ್‌ಸಿ ಸಿಎಸ್‌ಇ, ಸಿಎಪಿಎಫ್‌, ಸಿಡಿಎಸ್‌ ಇತರೆ ಪರೀಕ್ಷೆಗಳನ್ನು ಗೆದ್ದು ಶೇಕಡ 60 ಕ್ಕಿಂತ ಹೆಚ್ಚಿನ ಸೀಟುಗಳನ್ನು ಈ ಕ್ಷೇತ್ರಗಳಲ್ಲಿ ಇಂಜಿನಿಯರ್‌ಗಳೇ ಪಡೆಯುತ್ತಿದ್ದಾರೆ.

ಇಂಜಿನಿಯರ್‌ಗಳೇ ಈ ಯುಪಿಎಸ್‌ಸಿ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಹಲವು ಕಾರಣಗಳಿವೆ. ಅವುಗಳು ಯಾವುವು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ ನೋಡಿರಿ.

ತುಂಬಾ ವಿಶೇಷತೆ ಎಂದರೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಇಂಜಿನಿಯರ್ ಆದವರಿಗೆ ಈ ಫೇಲ್ಯೂರ್ / ಬ್ಯಾಕ್‌ಲಾಗ್, KTs / ಪೂರಕ ಪರೀಕ್ಷೆಗಳು ಇವೆಲ್ಲ ತುಂಬಾ ಪರಿಚಿತವಾದವುಗಳು. ಅವರಿಗೆ ಇವೆಲ್ಲವನ್ನು ಅರಗಿಸಿಕೊಳ್ಳುವ, ಮತ್ತೆ ಹೇಗೆ ಫೇಲ್ಯೂರ್‌ನಿಂದ ಹೊರಬರಬೇಕು ಎಂಬುದು ತಿಳಿದಿರುತ್ತದೆ. ಕೇವಲ ಯುಪಿಎಸ್‌ಸಿ ಪರೀಕ್ಷೆಗೆ ಮಾತ್ರವಲ್ಲ, ಯಾವುದೇ ಪರೀಕ್ಷೆಗಳು ಬೇಡುವ ಬೇಡಿಕೆಗಳಿಗೆ ತಕ್ಕಂತೆ ಶ್ರಮ ವಹಿಸಲು ಸಿದ್ಧರಿರುತ್ತಾರೆ. ಅದಕ್ಕೆ ಬಹುಬೇಗ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನಿರ್ಧರಿಸುವ ಸಾಮರ್ಥ್ಯ ಅವರಿಗಿರುತ್ತದೆಯಂತೆ. ಇಂಜಿನಿಯರಿಂಗ್ ಪದವಿಗೆ ಸೇರುವ ಮುನ್ನವೇ ಎಲ್ಲ ವಿಜ್ಞಾನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಡಿಪ್ಲೊಮ ವಿದ್ಯಾರ್ಥಿಗಳು ತಮ್ಮ 15-16 ನೇ ವಯಸ್ಸಿಗೆ ಕಠಿಣ ಪರೀಕ್ಷೆಗಳಾದ ಜೆಇಇ, BITSAT, ಕೆಲವರು ನೀಟ್, ಕೆಸಿಇಟಿ, ಎನ್‌ಡಿಎ ಅಂತಹ ಪರೀಕ್ಷೆಗಳನ್ನು ಎದುರಿಸಿರುತ್ತಾರೆ. ಅವರು ಪಾಸಾಗುತ್ತಾರೋ ಫೇಲ್‌ ಆಗುತ್ತಾರೋ ಎಂಬುದು ಮುಖ್ಯವಲ್ಲ. ಆದರೆ ಸ್ಪರ್ಧೆಗೆ ಪರಿಚಿತರಾಗಿರುತ್ತಾರೆ. ಇತರೆ ಸಬ್ಜೆಕ್ಟ್‌ಗಳನ್ನು ಓದುವ ವಿದ್ಯಾರ್ಥಿಗಳು ಅಖಿತ ಭಾರತ ಪರೀಕ್ಷೆಗಳಿಗೆ ಚಿಕ್ಕ ವಯಸ್ಸಿಗೆ ಅಷ್ಟೊಂದು ಪರಿಚಿತರಾಗಿರುವುದಿಲ್ಲ.

Leave a Reply

Your email address will not be published. Required fields are marked *