ಎನೀದು ಅಗ್ನಿಪಥ ಯೋಜನೆ ಮಾಹಿತಿ ನಿಮಗಾಗಿ?, what is Agnipath Yojana 2022? benefits of agnipath yojana scheme, selection process, eligibility

Agnipath Yojana : ಅಗ್ನಿಪಥ ಯೋಜನೆ ಅಡಿಯಲ್ಲಿ ದೇಶದ ನಿರುದ್ಯೋಗಿಗಳಿಗೆ ಬೃಹತ್ ಉದ್ಯೋಗ ಅವಕಾಶವನ್ನು ನೀಡಲು ಮುಂದಾಗಿದೆ ಕೇಂದ್ರ ಸರ್ಕಾರ. ಈ ಯೋಜನೆ ಕುರಿತ ಪ್ರಶ್ನೆಗಳು, ನೇಮಕಾತಿ ವಿಧಾನ, ಇತರೆ ಮಾಹಿತಿಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.

www.udyogmahiti.com

teligram

ಭಾರತೀಯ ಸೇನೆಯಲ್ಲಿ ಕೆಲಸ ಮಾಡಬೇಕು, ದೇಶ ಸೇವೆಗೆ ಸೇರಬೇಕು ಎಂದು ಕನಸು ಹೊತ್ತ ರಾಷ್ಟ್ರದ ಪ್ರಜೆಗಳಿಗೆ ಇದೀಗ ಕೇಂದ್ರ ಸರ್ಕಾರ ಭರ್ಜರಿ ಗುಡ್‌ ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರ ಒಂದೂವರೆ ವರ್ಷದಲ್ಲಿ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಮಹತ್ವದ ಹೆಜ್ಜೆ ಇಟ್ಟಿದ್ದು, ಇದರ ಪೈಕಿ ದೇಶ ಸೇವೆ ಮಾಡಲು ಬಯಸುವವರಿಗೆ 4 ವರ್ಷ ಸೇವೆ ಮಾಡುವ ಯೋಜನೆ ಎಂದು ‘ಅಗ್ನಿಪಥ’ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆ ಅಡಿಯಲ್ಲಿ 46 ಸಾವಿರ ಅಗ್ನಿವೀರರನ್ನು ನೇಮಕ ಮಾಡಲು ರಕ್ಷಣಾ ಇಲಾಖೆಗೆ ಅನುಮತಿ ನೀಡಿದೆ. ಈ ಹುದ್ದೆಗಳಿಗೆ ಸೇರುವ ಅಭ್ಯರ್ಥಿಗಳಿಗೆ ಆಕರ್ಷಕ ಸಂಬಳ, ಭತ್ಯೆ, ಅತ್ಯುತ್ತಮ ನಿವೃತ್ತಿ ಪ್ಯಾಕೇಜ್, ಅತ್ಯುತ್ತಮ ಪರಿಹಾರಗಳು ಎಲ್ಲವೂ ಇವೆ. ಈ ಅಗ್ನಿಪಥ ಯೋಜನೆ, ಅಗ್ನಿವೀರರ ಹುದ್ದೆ ಬಗ್ಗೆ ಇರುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

What is Agnipath Yojana ಅಗ್ನಿಪಥ ಯೋಜನೆ ಎಂದರೇನು?

ಭಾರತೀಯ ರಕ್ಷಣಾ ಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಸದಾವಕಾಶ ನೀಡುವ, ಕೇಂದ್ರ ಸರ್ಕಾರದ ಹೊಸ ಯೋಜನೆಯೇ ‘ಅಗ್ನಿಪಥ’. ಈ ಯೋಜನೆ ಮೂಲಕ ಪ್ರಜೆಗಳು ಸೇನೆಗೆ ಸೇರುವ ಆಸೆಯನ್ನು ಈಡೇರಿಸುವ ಜತೆಗೆ ದೇಶ ಸೇವೆ ಮಾಡಲು ಅವಕಾಶ ನೀಡಲಾಗುತ್ತದೆ. ಅಲ್ಲದೇ ಪ್ರಜೆಗಳನ್ನು ಸಶಕ್ತಗೊಳಿಸುವ ಜತೆಗೆ, ನೀತಿ ಪಾಠ, ಕೌಶಲಗಳನ್ನು ಕಲಿಸಲಿದೆ.

Agnipath Yojana Age ಅಗ್ನಿಪಥ ಯೋಜನೆಗೆ ಸೇರಲು ವಯಸ್ಸಿನ ಅರ್ಹತೆ ಏನು?

ಅಗ್ನಿಪಥ ಯೋಜನೆ ಅಡಿ ಸೇರಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 17.5 ವರ್ಷ ಆಗಿರಬೇಕು, ಗರಿಷ್ಠ 21 ವರ್ಷ ಮೀರಿರಬಾರದು.

teligram
How to Apply ಅಗ್ನಿಪಥ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?

ಕೇಂದ್ರ ರಕ್ಷಣಾ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://www.mygov.in/campaigns/agniveer ಗೆ ಭೇಟಿ ನೀಡುವ ಮೂಲಕ, ರಿಜಿಸ್ಟ್ರೇಷನ್‌ ಆರಂಭವಾದಾಗ ಅರ್ಜಿ ಸಲ್ಲಿಸಬೇಕು. ಅಗತ್ಯ ಮಾಹಿತಿಗಳನ್ನು ಸ್ವಯಂಕೃತವಾಗಿ ತಪ್ಪಾಗದ ರೀತಿ ನೀಡಿ, ಎನ್‌ರೋಲ್‌ ಮಾಡಿಕೊಳ್ಳಬಹುದು.

Qualification ಅಗ್ನಿಪಥ ಯೋಜನೆ ಅಗ್ನಿವೀರರ ವಿದ್ಯಾರ್ಹತೆ ಏನು?

ಕನಿಷ್ಠ 10ನೇ ತರಗತಿ ಪಾಸ್, 12 ನೇ ತರಗತಿ ಪಾಸ್‌ ವಿದ್ಯಾರ್ಹತೆ ಯುಳ್ಳವರು ಅಗ್ನಿಪಥ ಯೋಜನೆ ಅಗ್ನಿವೀರರ ಹುದ್ದೆಗೆ ಅರ್ಜಿ ಹಾಕಬಹುದು.

Agnipath Yojana eligibility ಅಗ್ನಿಪಥ ಸ್ಕೀಮ್ ಅರ್ಜಿಗೆ ಅರ್ಹತೆಗಳೇನು?

ಕನಿಷ್ಠ 17.5 ವರ್ಷ ಆಗಿರಬೇಕು, ಗರಿಷ್ಠ 21 ವರ್ಷ ಮೀರಿರಬಾರದು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾಗಿರಬೇಕು.

Agnipath Yojana Official website ಅಗ್ನಿಪಥ ಸ್ಕೀಮ್ ಕುರಿತ ಮಾಹಿತಿಯನ್ನು ಪಡೆಯುವುದು ಎಲ್ಲಿ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಅಗ್ನಿಪಥ ಯೋಜನೆ ಬಗ್ಗೆ ತಿಳಿಯಲು ವೆಬ್‌ಸೈಟ್‌ ವಿಳಾಸ https://www.mygov.in/campaigns/agniveer ಕ್ಕೆ ಭೇಟಿ ನೀಡಬಹುದು.

Selection Process ಯುಪಿಎಸ್‌ಸಿ ಅಗ್ನಿಪಥ ಸ್ಕೀಮ್‌ ಹುದ್ದೆಗಳನ್ನು ನೇಮಕ ಮಾಡುತ್ತದೆಯೇ?

ಎನ್‌ಡಿಎ ಮತ್ತು ಎನ್‌ಎ ಕೋರ್ಸ್‌ಗಳಿಗೆ ನೇಮಕ ಪ್ರಕ್ರಿಯೆ ನಡೆಸುವಂತೆ ಯುಪಿಎಸ್‌ಸಿ ನೇಮಕ ಪ್ರಕ್ರಿಯೆ ನಡೆಸಲಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಭಾಗಶಃ ಯುಪಿಎಸ್‌ಸಿ’ಯೇ ಅಗ್ನಿಪಥ ಯೋಜನೆಯ ಅಗ್ನಿವೀರರನ್ನು ಮೆರಿಟ್‌ ಆಧಾರದ ಮೇಲೆ ನೇಮಕ ಮಾಡಲಿದೆ.

Agnipath Yojana Salary ಅಗ್ನಿಪಥ ಸ್ಕೀಮ್ ವೇತನ ಎಷ್ಟು?

ಮೊದಲನೇ ವರ್ಷದ ವಾರ್ಷಿಕ ವೇತನ ಪ್ಯಾಕೇಜ್ ರೂ.4.76 ಲಕ್ಷ ಇರಲಿದೆ.

ಹಾಗೂ ನಾಲ್ಕನೇ ವರ್ಷದಲ್ಲಿ ರೂ.6.92 ಲಕ್ಷ ವೇತನವನ್ನು ಹೆಚ್ಚಿಸಿ ನೀಡಲಾಗುತ್ತದೆ.

teligram
Application form ಅಗ್ನಿಪಥ ಸ್ಕೀಮ್‌ ಅಪ್ಲಿಕೇಶನ್‌ ಫಾರ್ಮ್‌ ಎಲ್ಲಿ ಲಭ್ಯ?

ಅಗ್ನಿಪಥ ಸ್ಕೀಮ್‌ ಅಡಿ ಅಗ್ನಿವೀರರನ್ನು ನೇಮಿಸಿಕೊಳ್ಳಲು ಮೂರು ತಿಂಗಳ ಒಳಗೆ ನೇಮಕ ಪ್ರಕ್ರಿಯೆ ಮುಗಿಸುವ ಉದ್ದೇಶ ಇದ್ದು, ವೆಬ್‌ಸೈಟ್‌ https://www.mygov.in/campaigns/agniveer ಗೆ ಭೇಟಿ ನೀಡಿ ರಿಜಿಸ್ಟ್ರೇಷನ್‌ ಪಡೆಯಬೇಕಾಗುತ್ತದೆ.

Vacancy ಅಗ್ನಿಪಥ ಯೋಜನೆ ಅಡಿ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ?

46 ಸಾವಿರ ಅಗ್ನಿವೀರ ಹುದ್ದೆಗಳನ್ನು ಅಗ್ನಿಪಥ ಯೋಜನೆ ಅಡಿ ಭೂಸೇನೆ, ನೌಕಾ ಪಡೆ, ವಾಯುಪಡೆಗಳಲ್ಲಿ ನೇಮಕ ಮಾಡಲಾಗುತ್ತದೆ.

Service year ನೇಮಕಾತಿ ಅವಧಿ ಎಷ್ಟು?

ಅಗ್ನಿಪಥ ಯೋಜನೆ ಅಡಿ ನೇಮಕಗೊಳ್ಳುವ ಅಗ್ನಿವೀರರ ಹುದ್ದೆಗಳ ಅವಧಿ 4 ವರ್ಷ ಇರುತ್ತದೆ ಅಷ್ಟೆ.

 4 ವರ್ಷ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದವರು ಕಾಯಂ ಸೇನಾ ಸಿಬ್ಬಂದಿಗೆ ಶೇಕಡ.25 ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಖಾಯಂ ಸೇನಾ ಹುದ್ದೆಗಳನ್ನು ಪಡೆಯಬಹುದು.

teligram
ಅಗ್ನಿಪಥ ಯೋಜನೆಯ ಭತ್ಯೆಗಳು ಯಾವುವು?

ರಿಸ್ಕ್‌ ಅಂಡ್ ಹಾರ್ಡ್‌ಶಿಪ್, ರೇಷನ್, ಡ್ರೆಸ್, ಪ್ರಯಾಣ ಭತ್ಯೆಗಳನ್ನು ನೀಡಲಾಗುತ್ತದೆ.

benefits of agnipath yojana scheme ಅಗ್ನಿಪಥ ಯೋಜನೆ ಅಡಿ ನೀಡಲಾಗುವ ಪರಿಹಾರಗಳು ಯಾವುವು?
  • ರೂ.48 ಲಕ್ಷ ಮೊತ್ತದ ಜೀವ ವಿಮೆ ಇರುತ್ತದೆ.
  • ಅಗ್ನಿವೀರರಿಂದ 9 ಸಾವಿರ ರೂ ಮತ್ತು ಸರ್ಕಾರದ 9 ಸಾವಿರ ರೂ ಗಳ ವಂತಿಗೆಯಿಂದ ಪ್ರತಿ ತಿಂಗಳು 18 ಸಾವಿರ ರೂ.ಗಳ ಪಿಎಫ್‌ ಸೌಲಭ್ಯ ಇರಲಿದೆ.
  • ಒಟ್ಟಾರೆ ವಾರ್ಷಿಕ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ಇದೆ.
  • 48 ಲಕ್ಷ ರೂಪಾಯಿವರೆಗಿನ ವಿಮಾ ಸೌಲಭ್ಯ ಇರಲಿದ್ದು, ಇದಕ್ಕೆ ಸೈನಿಕರು ವಂತಿಕೆ ಕಟ್ಟಬೇಕಿಲ್ಲ.
  • ನಿವೃತ್ತಿ ಸಮಯದಲ್ಲಿ ಒಟ್ಟು 11.70 ಲಕ್ಷ ರೂ ನಿವೃತ್ತಿಯ ಪ್ಯಾಕೇಜ್ ಸಿಗಲಿದೆ.
  • ಆದರೆ, ಪಿಂಚಣಿ ಸೌಲಭ್ಯವಿರುವುದಿಲ್ಲ.
  • ಸೇವಾ ಸಮಯದಲ್ಲಿ ಜೀವಹಾನಿಯಾದರೆ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ.
  • ಒಂದು ವೇಳೆ ಸೇವೆ ಸಮಯದಲ್ಲಿ ಅಂಗವೈಕಲ್ಯವಾದರೆ ಅದರ ಗಂಭೀರತೆ ಆಧಾರದಲ್ಲಿ ಪರಿಹಾರ ಸಿಗಲಿದೆ. ಸಾಮಾನ್ಯವಾಗಿ ಇದು 44 ಲಕ್ಷ ರೂಪಾಯಿವರೆಗೆ ಇರಲಿದೆ. ಜತೆಗೆ ಸೇವೆಯ ಉಳಿದ ಭಾಗದ ಸಂಬಳ ದೊರೆಯಲಿದೆ.

Leave a Reply

Your email address will not be published. Required fields are marked *