Eastern Railway Recruitment 2022: ಪೂರ್ವ ರೈಲ್ವೆಯ ವಿವಿಧ ವಲಯಗಳಲ್ಲಿ ಅಗತ್ಯ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅನ್‌ಲೈನ್ ಮೂಲಕ ಅರ್ಜಿ ಹಾಕಿರಿ.
eastern railway recruitment 2022
ಇಂಡಿಯನ್ ರೈಲ್ವೆಯ ಪೂರ್ವ ರೈಲ್ವೆ ವಿಭಾಗದ ಅಧೀನದಲ್ಲಿ ಬರುವ ವಿವಿಧ ವಲಯಗಳಲ್ಲಿ ಅಗತ್ಯ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಜತೆಗೆ ಐಟಿಐ ಪಾಸ್ ಮಾಡಿದ ಅಭ್ಯರ್ಥಿಗಳು (ವಿವಿಧ ಟ್ರೇಡ್) ಆನ್‌ಲೈನ್ ಮೂಲಕ ಅರ್ಜಿ ಹಾಕಬಹುದು. ಮೇ 10 ರವರೆಗೆ ಅಪ್ಲಿಕೇಶನ್ ಸಲ್ಲಿಸಲು ಅವಕಾಶ ನೀಡಲಾಗಿದೆ.
ಡಿವಿಷನ್‌ವಾರು ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸಲು ಲಿಂಕ್, ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಡಿವಿಷನ್‌ವಾರು ಹುದ್ದೆಗಳ ವಿವರ
- Howrah : 267
- Liluah: 249
- Sealdah : 117
- Kanchrapara : 76
- Malda : 57
- Asansol:167
- Jamalpur: 268
ವಿದ್ಯಾರ್ಹತೆ :-
ಎಸ್‌ಎಸ್‌ಎಲ್‌ಸಿ ಜತೆಗೆ ಐಟಿಐ ನಲ್ಲಿ ವಿವಿಧ ಟ್ರೇಡ್‌ಗಳಾದ ಫಿಟ್ಟರ್ / ವೆಲ್ಡರ್ / ಮೆಕ್ಯಾನಿಕಲ್ / ಮಷಿನಿಸ್ಟ್ / ಕಾರ್ಪೆಂಟರ್ / ಪೇಂಟರ್ / ಲೈನ್‌ಮೆನ್ / ವೈಯರ್‌ಮೆನ್ / ರೆಫ್ರಿಜೆರೇಟರ್ ಮತ್ತು ಎಸಿ ಮೆಕ್ಯಾನಿಕ್ / ಇಲೆಕ್ಟ್ರೀಷಿಯನ್ / ಟೂಲ್ ಮಷಿನಿಸ್ಟ್ ಓದಿರುವವರು ಅರ್ಜಿ ಹಾಕಬಹುದು.
Bidar Revenue Dept Recruitment 2022
ಪ್ರಮುಖ ದಿನಾಂಕಗಳು
- ನೋಟಿಫಿಕೇಶನ್ ಬಿಡುಗಡೆ ದಿನಾಂಕ : 29-03-2022
- ಆನ್‌ಲೈನ್ ಅರ್ಜಿ ಸ್ವೀಕಾರ ಆರಂಭ ದಿನಾಂಕ: 11-04-2022
- ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 10-05-2022
ವಯೋಮಿತಿ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷಗಳು ಆಗಿರಬೇಕು. ಗರಿಷ್ಠ 24 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಶುಲ್ಕ ಮಾಹಿತಿ
ರೂ.100 ಅರ್ಜಿ ಶುಲ್ಕ ಪಾವತಿ ಮಾಡಬೇಕು. ಎಸ್‌ಸಿ / ಎಸ್‌ಟಿ / PWBD / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿ ಮಾಡಬಹುದು.
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಡೈರೆಕ್ಟ್ ಲಿಂಕ್ ಅನ್ನು ಈ ಕೆಳಗಿನಂತೆ ನೀಡಲಾಗಿದೆ. ಇತರೆ ಹೆಚ್ಚಿನ ಮಾಹಿತಿಗಳಿಗೆ ಅಧಿಸೂಚನೆ ಪಿಡಿಎಫ್ ಅನ್ನು ಸಹ ನೀಡಲಾಗಿದ್ದು, ಕ್ಲಿಕ್ ಮಾಡಿ ಓದಬಹುದು.
ಅರ್ಜಿ ಸಲ್ಲಿಕೆಗೆ ಬೇಕಾದ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ವಿದ್ಯಾರ್ಹತೆಗಳ ಅಂಕಪಟ್ಟಿ
- ಕಾರ್ಯಾನುಭವ ಪ್ರಮಾಣ ಪತ್ರ
- ಜನ್ಮ ದಿನಾಂಕ ಪ್ರಮಾಣ ಪತ್ರ (ಇದ್ದಲ್ಲಿ)
- ಭಾವಚಿತ್ರ ಸ್ಕ್ಯಾನ್ ಕಾಪಿ
- ಸಹಿ ಸ್ಕ್ಯಾನ್ ಕಾಪಿ
- ಇತರೆ
APPLY NOW
NOTIFICATION
