Indian Army Agniveer  Recruitment 2022: ಭೂಸೇನೆ ಅಗ್ನಿವೀರ ಹುದ್ದೆಗೆ ಅಧಿಸೂಚನೆ ಪ್ರಕಟ , ಅರ್ಜಿಗೆ ಡೀಟೇಲ್ಸ್‌ ಇಲ್ಲಿದೆ..

Indian Army Agniveer  Recruitment 2022 ಕೇಂದ್ರ ಸರ್ಕಾರ ಘೋಷಿಸಿದ್ದ ಅಗ್ನಿಪಥ ಯೋಜನೆಯ ಅಗ್ನಿವೀರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಭೂಸೇನೆ ಅಗ್ನಿವೀರರ ನೇಮಕಾತಿಗೆ ರಕ್ಷಣಾ ಸಚಿವಾಲಯದ ಮಹತ್ವದ ಯೋಜನೆ ‘ಅಗ್ನಿಪಥ’ ದಡಿ ಅಗ್ನಿವೀರರ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಅಧಿಕೃತ ನೋಟಿಫಿಕೇಶನ್‌ ಅನ್ನು ಬಿಡುಗಡೆ ಮಾಡಲಾಗಿದೆ.. ಆಸಕ್ತರು ಭೂಸೇನೆ ಅಗ್ನಿವೀರರ ಹುದ್ದೆಗಳಿಗೆ ವೆಬ್‌ಸೈಟ್‌ JOININIDANARMY.NIC.IN ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗಿದೆ.

ಭೂಸೇನೆ ಅಗ್ನಿವೀರರ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ಮಾಹಿತಿಗಳನ್ನು ಓದಿಕೊಳ್ಳಿ ಮತ್ತು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

www.udyogmahiti.com

teligram
Indian Army Agniveer Recruitment 2022                   
Vacancy Details ಹುದ್ದೆಗಳ ವಿವಿರ :-
  • ಅಗ್ನಿವೀರ್ ಜೆನೆರಲ್ ಡ್ಯೂಟಿ
  • ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ / ಅಮ್ಯುನಿಷನ್ ಎಕ್ಸಾಮಿನರ್)
  • ಅಗ್ನಿವೀರ್ ಕ್ಲರ್ಕ್
  • ಅಗ್ನಿವೀರ್ ಸ್ಟೋರ್ ಕೀಪರ್ ಟೆಕ್ನಿಕಲ್
  • ಅಗ್ನಿವೀರ್ ಟ್ರೇಡ್ಸ್‌ಮನ್
ಅಗ್ನಿವೀರ್ ಹುದ್ದೆಯ ಅವಧಿ : 4 ವರ್ಷ
SALARY ಭೂಸೇನೆ ಅಗ್ನಿವೀರರಿಗೆ ವೇತನ ಮತ್ತು ಭತ್ಯೆಗಳು
  1. ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.
  2. ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.
  3. ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.
  4. ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು.
Agniveer  Recruitment 2022 AGE LIMIT ವಯೋಮಿತಿ ಅರ್ಹತೆ :

ಕನಿಷ್ಠ 17.5 ವರ್ಷ ಆಗಿರಬೇಕು, ಗರಿಷ್ಠ 23 ವರ್ಷವನ್ನು 2022-23ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ ನಿಗಧಿಪಡಿಸಲಾಗಿದೆ. ಮುಂದಿನ ವರ್ಷದಲ್ಲಿ ಗರಿಷ್ಠ ವಯೋಮಿತಿ 21 ವರ್ಷವೇ ಇರಲಿದೆ.

ಮಿಸಲಾತಿವರ್ಗಗಳುಕನಿಷ್ಠಗರಿಷ್ಠ
ಸಾಮಾನ್ಯ17.523
ಒಬಿಸಿ17.523
ಎಸ್.ಸಿ-ಎಸ್.ಟಿ17.523
teligram
QUALIFICATION ವಿದ್ಯಾರ್ಹತೆ :
  1. ಅಗ್ನಿವೀರ್ ಜೆನೆರಲ್ ಡ್ಯೂಟಿ:- 10 ನೇ ತರಗತಿ ವಿದ್ಯಾರ್ಹತೆಯನ್ನು ಕನಿಷ್ಠ ಶೇ.45 ಅಂಕಗಳೊಂದಿಗೆ, ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
  2. ಅಗ್ನಿವೀರ್ ಟೆಕ್ನಿಕಲ್ (ಏವಿಯೇಷನ್ / ಅಮ್ಯುನಿಷನ್ ಎಕ್ಸಾಮಿನರ್):- ವಿಜ್ಞಾನ (ಫಿಸಿಕ್ಸ್‌, ಮ್ಯಾಥ್ಸ್‌, ಕೆಮಿಸ್ಟ್ರಿ, ಇಂಗ್ಲಿಷ್‌ ) ದ್ವಿತೀಯ ಪಿಯು (12ನೇ ತರಗತಿ) ಶೇ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.40 ಅಂಕಗಳನ್ನು ಗಳಿಸಿರಬೇಕು.
  3. ಅಗ್ನಿವೀರ್ ಕ್ಲರ್ಕ್:- ಯಾವುದೇ ಪಿಯುಸಿ ಅನ್ನು ಶೇ.60 ಅಂಕಗಳೊಂದಿಗೆ (ಸೈನ್ಸ್‌, ಕಲಾ, ಕಾಮರ್ಸ್‌), ಪ್ರತಿ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
  4. ಅಗ್ನಿವೀರ್ ಸ್ಟೋರ್ ಕೀಪರ್ ಟೆಕ್ನಿಕಲ್:- ಯಾವುದೇ ಪಿಯುಸಿ ಅನ್ನು ಶೇ.60 ಅಂಕಗಳೊಂದಿಗೆ (ಸೈನ್ಸ್‌, ಕಲಾ, ಕಾಮರ್ಸ್‌), ಪ್ರತಿ ವಿಷಯದಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
  5. ಅಗ್ನಿವೀರ್ ಟ್ರೇಡ್ಸ್‌ಮನ್:-ಅಗ್ನಿವೀರ್ ಟ್ರೇಡ್ಸ್‌ಮನ್‌ ಹುದ್ದೆಗಳು 8ನೇ ತರಗತಿ ಪಾಸಾದವರಿಗೆ ಹಾಗೂ 10ನೇ ತರಗತಿ ಪಾಸಾದವರಿಗೆ ಇಬ್ಬರಿಗೂ ಲಭ್ಯ ಇವೆ. ಸಿಂಪಲ್‌ ಪಾಸ್‌ ಆಗಿದ್ದರೂ ಪರವಾಗಿಲ್ಲ. ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳನ್ನು ತೆಗೆದಿರಬೇಕು.
IMPORTANT DATES  ಪ್ರಮುಖ ದಿನಾಂಕಗಳು
ಮುಖ್ಯದಿನಾಂಕಗಳುದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ01-07-2022
ಅರ್ಜಿಸಲ್ಲಿಸಲು ಕೊನೆಯ ದಿನಾಂಕ31-07-2022
APPLICATION FEE ಅರ್ಜಿಶುಲ್ಕ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?

ಲಿಖಿತ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

PHIYSICAL STANDERD ದೈಹಿಕ ಸಾಮರ್ಥ್ಯ:-

ಅಭ್ಯರ್ಥಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಗುತ್ತದೆ:

  • ದೈಹಿಕ ಸಾಮರ್ಥ್ಯ ಪರೀಕ್ಷೆ (ರ್ಯಾಲಿ ಸೈಟ್‌ಗಳಲ್ಲಿ)
  • ಭೌತಿಕ ಅಳತೆ (ರ್ಯಾಲಿ ಸೈಟ್‌ನಲ್ಲಿ)
  • ವೈದ್ಯಕೀಯ ಪರೀಕ್ಷೆ
  • ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಮೂಲಕ ಲಿಖಿತ ಪರೀಕ್ಷೆ

ಎತ್ತರ:- 165 ಸೆಂ

ಎದೆ:- 78 – 82 ಸೆಂ

1.6 ಕಿಮೀ ಓಟ

ಗುಂಪು – I – 5 ನಿಮಿಷ 30 ಸೆಕೆಂಡುಗಳವರೆಗೆ

ಗುಂಪು– II 5 ನಿಮಿಷ 31 ಸೆಕೆಂಡ್‌ನಿಂದ 5 ನಿಮಿಷ 45 ಸೆಕೆಂಡುಗಳು

ಬೀಮ್ (ಪುಲ್ ಅಪ್ಸ್)

ಗುಂಪು – I – 40 ಅಂಕಗಳಲ್ಲಿ 10

ಗುಂಪು– II – 33 ರಲ್ಲಿ 9 ಅಂಕಗಳು, 27 ರಲ್ಲಿ 8 ಅಂಕಗಳು, 21 ರಲ್ಲಿ 7 ಅಂಕಗಳು, 16 ರಲ್ಲಿ 6 ಅಂಕಗಳು

ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ joinindianarmy.nic.in ನಲ್ಲಿ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗೆ ಪ್ರತ್ಯೇಕ ಪತ್ರವನ್ನು ಕಳುಹಿಸಲಾಗುವುದಿಲ್ಲ. ತನ್ನ ಫಲಿತಾಂಶವನ್ನು ಪರಿಶೀಲಿಸುವುದು ಮತ್ತು ದಾಖಲಾತಿಗಾಗಿ ARO ಗೆ ವರದಿ ಮಾಡುವುದು ಅಭ್ಯರ್ಥಿಯ ಜವಾಬ್ದಾರಿಯಾಗಿದೆ.

teligram
ಇತರೆ ಅರ್ಹತೆಗಳು:-
  • ಎನ್‌ಸಿಸಿ ಕೋಟಾ ಪರಿಗಣಿಸಲಾಗುತ್ತದೆ.
  • ಕ್ರೀಡಾ ಕೋಟಾ ಪರಿಗಣಿಸಲಾಗುತ್ತದೆ.
  • ಅರ್ಜಿ ಸಲ್ಲಿಸುವಾಗ ನಿಗಧಿತ ವಿದ್ಯಾರ್ಹತೆಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
ರಜೆಗಳ ಮಾಹಿತಿ
  • ಅಗ್ನಿವೀರ್ ಹುದ್ದೆಗೆ ಸೇರಿದ ಅಭ್ಯರ್ಥಿಗಳಿಗೆ ವಾರ್ಷಿಕ 30 ರಜೆಗಳು ಸಿಗುವ ಅವಕಾಶ ಇರುತ್ತದೆ. ಮೆಡಿಕಲ್ ರಜೆಗಳು ವೈದ್ಯರ ಸಲಹೆ ಮೇರೆಗೆ ನಿರ್ಧರಿತವಾಗುತ್ತವೆ.

ಅಗ್ನಿವೀರ್ ಹುದ್ದೆಯಿಂದ ನಿವೃತ್ತಿ ಪಡೆದ ಸಂದರ್ಭದಲ್ಲಿ ಸೇವಾನಿಧಿ ಪ್ಯಾಕೇಜ್‌ ಅನ್ನು ಅಭ್ಯರ್ಥಿಗೆ ನೀಡಲಾಗುತ್ತದೆ.

ಅಗ್ನಿವೀರ್ ಹುದ್ದೆಗೆ ನೀಡುವ ಸೇವಾ ನಿಧಿ ಪ್ಯಾಕೇಜ್, ಇತರೆ ಭತ್ಯೆಗಳ ವಿವರ:-

ರಿಸ್ಕ್‌ ಅಂಡ್ ಹಾರ್ಡ್‌ಶಿಪ್, ರೇಷನ್, ಡ್ರೆಸ್, ಪ್ರಯಾಣ ಭತ್ಯೆಗಳನ್ನು ನೀಡಲಾಗುತ್ತದೆ.ರೂ.48 ಲಕ್ಷ ಮೊತ್ತದ ಜೀವ ವಿಮೆ ಇರುತ್ತದೆ. ಅಗ್ನಿವೀರರಿಂದ 9 ಸಾವಿರ ರೂ ಮತ್ತು ಸರ್ಕಾರದ 9 ಸಾವಿರ ರೂ ಗಳ ವಂತಿಗೆಯಿಂದ ಪ್ರತಿ ತಿಂಗಳು 18 ಸಾವಿರ ರೂ.ಗಳ ಪಿಎಫ್‌ ಸೌಲಭ್ಯ ಇರಲಿದೆ. ಒಟ್ಟಾರೆ ವಾರ್ಷಿಕ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ಇದೆ. 48 ಲಕ್ಷ ರೂಪಾಯಿವರೆಗಿನ ವಿಮಾ ಸೌಲಭ್ಯ ಇರಲಿದ್ದು, ಇದಕ್ಕೆ ಸೈನಿಕರು ವಂತಿಕೆ ಕಟ್ಟಬೇಕಿಲ್ಲ. ನಿವೃತ್ತಿ ಸಮಯದಲ್ಲಿ ಒಟ್ಟು 11.70 ಲಕ್ಷ ರೂ ನಿವೃತ್ತಿಯ ಪ್ಯಾಕೇಜ್ ಸಿಗಲಿದೆ. ಆದರೆ, ಪಿಂಚಣಿ ಸೌಲಭ್ಯವಿರುವುದಿಲ್ಲ. ಸೇವಾ ಸಮಯದಲ್ಲಿ ಜೀವಹಾನಿಯಾದರೆ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ಜತೆಗೆ ಉಳಿದ ಸೇವಾ ಅವಧಿಯ ಸಂಬಳ ಪ್ರಾಪ್ತವಾಗಲಿದೆ. ಒಂದು ವೇಳೆ ಸೇವೆ ಸಮಯದಲ್ಲಿ ಅಂಗವೈಕಲ್ಯವಾದರೆ ಅದರ ಗಂಭೀರತೆ ಆಧಾರದಲ್ಲಿ ಪರಿಹಾರ ಸಿಗಲಿದೆ. ಸಾಮಾನ್ಯವಾಗಿ ಇದು 44 ಲಕ್ಷ ರೂಪಾಯಿವರೆಗೆ ಇರಲಿದೆ. ಜತೆಗೆ ಸೇವೆಯ ಉಳಿದ ಭಾಗದ ಸಂಬಳ ದೊರೆಯಲಿದೆ.

teligram
REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
  • 8ನೇ ತರಗತಿ ಅಂಕಪಟ್ಟಿ
  • 10ನೇ ತರಗತಿ ಅಂಕಪಟ್ಟಿ
  • 12ನೇ ತರಗತಿ ಅಂಕಪಟ್ಟಿ
  • ಅರ್ಹತಾ ಪ್ರಮಾಣ ಪತ್ರ
  • ಆಧಾರ ಕಾರ್ಡ
  • ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
  • ಪೋಟೋ ಮತ್ತು ಸಹಿ
  • ಇಮೇಲ್-ಐಡಿ ಮತ್ತು ಮೊಬೈಲ್ ನಂಬರ್
  • ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
teligram
HOW TO APPLY ಅರ್ಜಿಸಲ್ಲಿಸುವುದು ಹೇಗೆ?

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಅರ್ಜಿ ಸಲ್ಲಿಸಬೇಕು.

Apply Now

Indian Army Agniveer Recruitment Notification 2022

ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ.ಉದ್ಯೋಗ ಮಾಹಿತಿ ಪಡೆಯಿರಿ.

teligram

Leave a Reply

Your email address will not be published. Required fields are marked *