Indian army recruitment 2022 ಇಂಡಿಯನ್‌ ಮಿಲಿಟರಿಯಲ್ಲಿ ಅಗತ್ಯ ಇರುವ ಹುದ್ದೆಗಳ ನೇಮಕಾತಿ 2022 ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರು ಅರ್ಜಿ ಹಾಕಿ

Indian army recruitment 2022 ಇಂಡಿಯನ್‌ ಮಿಲಿಟರಿಯಲ್ಲಿ ಅಗತ್ಯ ಇರುವ ಬಾರ್ಬರ್, ಚೌಕಿದಾರ್‌ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳ ಬಗ್ಗೆ ಕಂಪ್ಲೀಟ್ ಡೀಟೇಲ್ಸ್‌ ಈ ಕೆಳಗಿನಂತೆ ತಿಳಿದು ಆನ್‌ಲೈನ್ ಅರ್ಜಿ ಹಾಕಿರಿ.

ಇಂಡಿಯನ್ ಮಿಲಿಟರಿಯು ಬಾರ್ಬರ್, ಚೌಕಿದಾರ್, ಎಲ್‌ಡಿಸಿ, ಸಫಾಯಿವಾಲಾ, ಕುಕ್, ಇತರೆ ವಿವಿಧ ಹುದ್ದೆಗಳು ಸೇರಿದಂತೆ, ಒಟ್ಟು 158 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರಗಳನ್ನು, ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿಯಬಹುದು.

Indian army recruitment 2022

ಹುದ್ದೆಗಳ ವಿವರ

  • ಬಾರ್ಬರ್ : 09
  • ಚೌಕಿದಾರ್: 12
  • ಎಲ್‌ಡಿಸಿ : 03
  • ಸಫಾಯಿವಾಲಾ: 35
  • ಹೆಲ್ತ್‌ ಇನ್ಸ್‌ಪೆಕ್ಟರ್: 18
  • ಕುಕ್ : 3
  • ಟಿ/ಮೇಟ್: 8
  • ವಾರ್ಡ್‌ ಸಹಾಯಕ: 53
  • ವಾಷರ್‌ಮೆನ್: 17

ಒಟ್ಟು : 158

ವಿದ್ಯಾರ್ಹತೆ (ಹುದ್ದೆವಾರು)

ಬಾರ್ಬರ್ : ಮೆಟ್ರಿಕ್ಯೂಲೇಷನ್‌ ಪಾಸ್‌ ಜತೆಗೆ, ಒಂದು ವರ್ಷ ಕಾರ್ಯಾನುಭವ.

ಚೌಕಿದಾರ್: ಮೆಟ್ರಿಕ್ಯೂಲೇಷನ್‌ ಪಾಸ್‌ ಜತೆಗೆ, ಒಂದು ವರ್ಷ ಕಾರ್ಯಾನುಭವ.

ಎಲ್‌ಡಿಸಿ : ಪಿಯುಸಿ ಜತೆಗೆ, ಇಂಗ್ಲಿಷ್, ಹಿಂದಿ ಟೈಪಿಂಗ್ ಗೊತ್ತಿರಬೇಕು.

ಸಫಾಯಿವಾಲಾ: ಮೆಟ್ರಿಕ್ಯೂಲೇಷನ್ ಪಾಸ್‌.

ಹೆಲ್ತ್‌ ಇನ್ಸ್‌ಪೆಕ್ಟರ್: ಎಸ್‌ಎಸ್‌ಎಲ್‌ಸಿ ಜತೆಗೆ, ಸ್ಯಾನಿಟರಿ ಇನ್ಸ್‌ಪೆಕ್ಟರ್ ಕೋರ್ಸ್‌ ಪಾಸ್.

ಕುಕ್ : ಎಸ್‌ಎಸ್‌ಎಲ್‌ಸಿ ಪಾಸ್ ಜತೆಗೆ, ಭಾರತೀಯ ಆಹಾರ ಸಂಸ್ಕೃತಿ ತಿಳಿದಿರಬೇಕು.

ಟ್ರೇಡ್ಸ್‌ಮೆನ್ ಮೇಟ್: ಮೆಟ್ರಿಕ್ಯೂಲೇಷನ್‌ ಜತೆಗೆ ಒಂದು ವರ್ಷ ಕಾರ್ಯಾನುಭವ.

ವಾರ್ಡ್‌ ಸಹಾಯಕ: ಎಸ್ಎಸ್‌ಎಲ್‌ಸಿ ಜತೆಗೆ, ಸಂಬಂಧಿಸಿದ ಟ್ರೇಡ್‌ನಲ್ಲಿ ಮೂರು ವರ್ಷ ಕಾರ್ಯಾನುಭವ.

ವಾಷರ್‌ಮೆನ್: ಮೆಟ್ರಿಕ್ಯೂಲೇಷನ್ ಪಾಸ್ ಜತೆಗೆ, ಮಿಲಿಟರಿ/ ಸಿವಿಲಿಯನ್ ಬಟ್ಟೆಗಳನ್ನು ವಾಷ್‌ ಮಾಡಲು ತಿಳಿದಿರಬೇಕು.

ಈ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಸಂದರ್ಶನ ನಡೆಸಲಿದ್ದು, ಪರೀಕ್ಷೆ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ನೋಟಿಫಿಕೇಶನ್‌ನಲ್ಲಿ ಹೇಳಲಾಗಿದೆ.

150 ಅಂಕಗಳಿಗೆ ಎರಡು ಗಂಟೆಗಳ ಕಾಲ ಪರೀಕ್ಷೆ ನಡೆಸಲಾಗುತ್ತದೆ.

ಈ ಮೇಲಿನ ವಿವಿಧ ಹುದ್ದೆಗಳಿಗೆ ಪೇ ಮೆಟ್ರಿಕ್‌ ಲೆವೆಲ್-1, ಲೆವೆಲ್-2, ಲೆವೆಲ್-4 ವೇತನ ಶ್ರೇಣಿ ರೂ.18,000-81,100 ವರೆಗೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ಮೀರರಬಾರದು. ಹೆಲ್ತ್‌ ಇನ್ಸ್‌ಪೆಕ್ಟರ್ ಹುದ್ದೆಗೆ ಮಾತ್ರ ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿಯನ್ನು ರಿಜಿಸ್ಟರ್ ಪೋಸ್ಟ್‌ ಅಥವಾ ಸ್ಪೀಡ್ ಪೋಸ್ಟ್‌ ಮೂಲಕ ಮಾತ್ರ ಸಲ್ಲಿಸಬಹುದು. ಇತರೆ ಯಾವುದೇ ಮಾದರಿಯಲ್ಲಿ ಅರ್ಜಿ ಸ್ವೀಕಾರ ಮಾಡಲಾಗುವುದಿಲ್ಲ. ಅರ್ಜಿ ನಮೂನೆಯನ್ನು ಈ ಕೆಳಗಿನ ಪಿಡಿಎಫ್‌ ಫೈಲ್‌ ಅನ್ನು ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ : The Commandant, Command Hospital (EC), Alipore, Kolkata-700027.

ಭಾರತೀಯ ಮಿಲಿಟರಿ ವೆಬ್‌ಸೈಟ್‌ ವಿಳಾಸ : https://joinindianarmy.nic.in/default.aspx

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಆಧಾರ್ ಕಾರ್ಡ್
  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
  • PUC ಅಂಕಪಟ್ಟಿ
  • ಕಾರ್ಯಾನುಭವ ಸರ್ಟಿಫಿಕೇಟ್
  • ಇತ್ತೀಚೆಗೆ ತೆಗೆಸಿದ ಭಾವಚಿತ್ರ
  • ಮೀಸಲಾತಿ ಕೋರಿದ್ದಲ್ಲಿ ಸಂಬಂಧಿಸಿದ ದಾಖಲೆಗಳು

Notification and Application Form

Indian army recruitment 2022
Indian army recruitment 2022

Leave a Reply

Your email address will not be published. Required fields are marked *