Karnataka Food Department Recruitment 2023, ಕೆಇಎ ಇಂದ 5 ನಿಗಮ, ಮಂಡಳಿ ಹುದ್ದೆಗಳ ಅಧಿಸೂಚನೆಗೆ ತಡವೇಕೆ?., ಇಲ್ಲಿದೆ ಉತ್ತರ

Karnataka Food Department Recruitment 2023 :- ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿ ಇಂದ ಬಿಡುಗಡೆ ಆಗಬೇಕಿದ್ದ 5 ಉದ್ಯೋಗ ನೋಟಿಫಿಕೇಶನ್‌ಗಳು ಇನ್ನು ಹೊರಬೀಳದಿರುವುದಕ್ಕೆ ಇದೀಗ ಕಾರಣ ಸಿಕ್ಕಿದೆ. ಕೆಇಎ ಹೊಸ ಸಾಫ್ಟ್‌ವೇರ್‌ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು ಇನ್ನು ಪ್ರಾಯೋಗಿಕ ಹಂತದಲ್ಲಿದೆ. ಇದು ಮುಂದಿನ 10 ರಿಂದ 15 ದಿನಗಳೊಳಗೆ ಸಿದ್ಧಗೊಳ್ಳಲಿದೆ.

ಯಾವೆಲ್ಲ ನಿಗಮ, ಮಂಡಳಿಗಳಲ್ಲಿ ನೇಮಕ?
  • ಆಹಾರ ಸರಬರಾಜು ನಿಗಮ : 386
  • ಕಟ್ಟಡ ಕಾರ್ಮಿಕರ ಮಂಡಳಿ ಹುದ್ದೆಗಳು: 186
  • ರಾಜೀವ್ ಗಾಂಧಿ ಆರೋಗ್ಯ ವಿವಿ: 88
  • ಎಂಎಸ್‌ಐಎಲ್‌: 71
  • ವಿದ್ಯುನ್ಮಾನ ಅಭಿವೃದ್ಧಿ ನಿಗಮ: 10
➡️Karnataka Food Department Recruitment 2023

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (Karnataka Examination Authority) ಕಳೆದ ಎರಡು ವಾರಗಳ ಹಿಂದೆಯೇ 5 ನಿಗಮ ಹಾಗೂ ಮಂಡಳಿಗಳ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಸಿದ್ಧಪಡಿಸಿಕೊಂಡು, ಇದನ್ನು ಏಪ್ರಿಲ್ 15 ರಂದು ಬಿಡುಗಡೆ ಮಾಡಲಾಗುತ್ತದೆ. ಏಪ್ರಿಲ್‌ 17 ರಿಂದ ಅರ್ಜಿ ಸ್ವೀಕಾರ ಆರಂಭವಾಗುತ್ತದೆ ಎಂದು ವೇಳಾಪಟ್ಟಿಯಲ್ಲಿಯೂ ತಿಳಿಸಿತ್ತು.

Karnataka Food Department Recruitment 2023 ಈ ಹಿನ್ನೆಲೆಯಲ್ಲಿ ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳು ಈ ಹೊಸ ನೇಮಕಾತಿಗೆ ಅರ್ಜಿ ಹಾಕಲು ತುದಿಗಾಲಲ್ಲಿ ಕಾದು ಕುಳಿತ್ತಿದ್ದರು. ಅದರೆ ಈವರೆಗೆ ಯಾವುದೇ ಅಧಿಸೂಚನೆಗಳು ಹೊರಬೀಳಲೇಲಿಲ್ಲ. ಆದ್ದರಿಂದ ಕೆಇಎ ಅನ್ನು ಸಂಪರ್ಕಿಸಲಾಗಿದ್ದು, ಏಕೆ ಇನ್ನೂ ಈ ನಿಗಮ, ಮಂಡಳಿಗಳ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಆಗಿಲ್ಲ ಎಂಬುದನ್ನು ತಿಳಿಸಿದ್ದಾರೆ.

ತಾಂತ್ರಿಕ ಸಮಸ್ಯೆ ಕಾರಣ

ಕೆಇಎ ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ, ಪ್ರಾಧಿಕಾರವು ಹೊಸ ಸಾಫ್ಟ್‌ವೇರ್‌ ಡೆವಲಪ್‌ ಮಾಡುತ್ತಿರುವ ಕಾರಣ, ಅದು ಇನ್ನು ಪ್ರಾಯೋಗಿಕ ಹಂತದಲ್ಲಿದೆ. ಇದೇ ಮೊದಲ ಬಾರಿಗೆ ಈ ಹೊಸ ಸಾಫ್ಟ್‌ವೇರ್ ಒಂದನ್ನು ಅಳವಡಿಸಿಕೊಂಡು, ಹಲವು ಹಂತಗಳಲ್ಲಿ ಟೆಸ್ಟ್‌ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನು ಅಧಿಸೂಚನೆ ಬಿಡುಗಡೆ ಮಾಡಲು ಆಗಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್ ತಿಳಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಈ ಅಧಿಸೂಚನೆಗೆ ಅಡ್ಡಿ ಆಗುವುದಿಲ್ಲವೇ?

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಈ ನೇಮಕದ ಕುರಿತಾಗಿ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ಸಂಕ್ಷಿಪ್ತ ಅಧಿಸೂಚನೆ ಪ್ರಕಟಿಸಲಾಗಿತ್ತು. ಆದ್ದರಿಂದ ಈ ಹುದ್ದೆಗಳ ನೇಮಕಾತಿಗೆ ಯಾವುದೇ ಅಡ್ಡಿ ಆಗುವುದಿಲ್ಲ. ನೀತಿ ಸಂಹಿತೆ ಅನ್ವಯವಾಗುವುದಿಲ್ಲ.

ಹಾಗಿದ್ರೆ ಅಧಿಸೂಚನೆ ಬಿಡುಗಡೆ ಯಾವಾಗ?

ಕೆಇಎ ಮುಂದಿನ 10 ರಿಂದ 15 ದಿನಗಳೊಳಗೆ 5 ನಿಗಮ, ಮಂಡಳಿಗಳ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿ, ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತೇವೆ ಎಂದು ಹೇಳಿದೆ.

teligram

ನಮ್ಮ WhatsApp Group ಅಲ್ಲಿ ಸೇರಲು 9019 899 822 ಈ ನಂಬರೆ Join ಅಂತಾ ಮೆಸೇಜು ಮಾಡಿ, ನಂತರ ನಿಮ್ಮ ನಂಬರೆಗೆ ಗ್ರೂಪ್ ಲಿಂಕ ಕಳೆಸಲಾಗುತ್ತದೆ ಆ ಲಿಂಕ ಮೂಲಕ ನಿವು ಗ್ರೂಪಗೆ ಸೇರಿಕೊಳ್ಳಿ

Leave a Reply

Your email address will not be published. Required fields are marked *