KPSC CBRT Registration 2022 ಕೆಪಿಎಸ್‌ಸಿ ನೇಮಕಾತಿಯಲ್ಲಿ ಇನ್ಮುಂದೆ ಕಂಪ್ಯೂಟರ್ ಆಧಾರಿತ ಪರೀಕ್ಷೆ apply online now

KPSC CBRT Registration 2022 : ಕರ್ನಾಟಕ ಲೋಕಸೇವಾ ಆಯೋಗವು ಇನ್ನು ಮುಂದೆ ನಡೆಸುವ ನೇಮಕ ಪ್ರಕ್ರಿಯೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ನೇಮಕಾತಿ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅಣಕು ಪರೀಕ್ಷೆ ನಡೆಸಲು ಮುಂದಾಗಿದ್ದು, ಅರ್ಜಿ ಆಹ್ವಾನಿಸಿದೆ.

Applications invited for kpsc Computer Based Recruitment Test mock test
KPSC CBRT Registration 2022

www.udyogmahiti.com

ಹೈಲೈಟ್ಸ್‌:
  • ಕಂಪ್ಯೂಟರ್ ಆಧಾರಿತ ನೇಮಕಾತಿ ಪರೀಕ್ಷೆಗೆ ಮುಂದಾದ ಕೆಪಿಎಸ್‌ಸಿ.
  • ಅಣಕು ಪರೀಕ್ಷೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.
  • ಅರ್ಜಿಗೆ ಡಿಸೆಂಬರ್ 31 ಕೊನೆ ದಿನ.

ಕರ್ನಾಟಕ ಲೋಕಸೇವಾ ಆಯೋಗವು ಇನ್ನು ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಂಪ್ಯೂಟರ್ ಆಧಾರಿತ ನೇಮಕಾತಿ ಪರೀಕ್ಷೆ (Computer Based Recruitment Test – CBRT) ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಥಮ ಹಂತವಾಗಿ ಸದರಿ CBRT ಪರೀಕ್ಷೆಯನ್ನು ನಡೆಸುವ ಸಾಧ್ಯತೆಗಳನ್ನು ಪರಿಶೀಲಿಸಲು ಪ್ರಾಯೋಗಿಕವಾಗಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಒಂದು ಅಣಕು ಪರೀಕ್ಷೆ ಅನ್ನು ಕರ್ನಾಟಕ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ 2023 ರ ಜನವರಿ 07 ರಂದು ನಡೆಸಲು ತೀರ್ಮಾನಿಸಿದೆ.

teligram

ಸಿಬಿಆರ್‌ಟಿ ಪ್ರಾಯೋಗಿಕ ಪರೀಕ್ಷೆಯನ್ನು ಆಸಕ್ತ ಅಭ್ಯರ್ಥಿಗಳು ತೆಗೆದುಕೊಳ್ಳಲು ಅವಕಾಶ ನೀಡಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಪರೀಕ್ಷೆಯು ಪ್ರಾಯೋಗಿಕ ಪರೀಕ್ಷೆ ಆಗಿರುವುದರಿಂದ ಸೀಮಿತ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದರಿಂದ ಮೊದಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆಯನ್ನು ನೀಡಲಾಗುವುದು ಎಂದಿದೆ.

CBRT ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 23-12-2022
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31-12-2022

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವೇಳೆ ತಾವು ಪರೀಕ್ಷೆ ಬರೆಯಲಿಚ್ಚಿಸುವ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಭರ್ತಿ ಮಾಡಿ, ಭಾವಚಿತ್ರ ಮತ್ತು ಸಹಿಯ ಸ್ಕ್ಯಾನ್‌ ಕಾಪಿ ಅನ್ನು ಅಪ್‌ಲೋಡ್ ಮಾಡಬೇಕು.

teligram

ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ : ಕನಿಷ್ಠ ದ್ವಿತೀಯ ಪಿಯುಸಿ / ಡಿಪ್ಲೊಮ ವಿದ್ಯಾರ್ಹತೆ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು. ಅರ್ಜಿ ಶುಲ್ಕ ರೂ.100.

ಕೆಪಿಎಸ್‌ಸಿ ನಡೆಸುವ ಸಿಬಿಆರ್‌ಟಿ ಅಣಕು ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು, ಪರೀಕ್ಷೆ ಪಠ್ಯಕ್ರಮ ಏನು ಎಂದು ತಿಳಿಯಬಹುದಾಗಿದ್ದು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಚೆಕ್‌ ಮಾಡಿಕೊಳ್ಳಬಹುದು.

KPSC CBRT Notification, Syllabus

ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳು ಎದುರಾದಲ್ಲಿ ಸಹಾಯವಾಣಿ – 9310611990 / 8448513269.

Click Here To Apply For Mock Test

Click Here For One Time Registration

Leave a Reply

Your email address will not be published. Required fields are marked *