PDO Recruitment 2023, pdo notification 2023, pdo syllabus and exam pattern, pdo selection process in Karnataka, apply online now

PDO Recruitment 2023: ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ರಾಜ್ಯ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ನೇರ ನೇಮಕಾತಿ, ಸೇವಾ ನಿರತರನ್ನು ಭಡ್ತಿ ಮೂಲಕ, ಪಿಡಿಒ ಹುದ್ದೆಗೆ ನೇಮಕ ಮಾಡುವ ಸಾಧ್ಯತೆಗಳಿದೆ. ಈ ಹುದ್ದೆಗಳಿಗೆ ನೇಮಕಾತಿ ವಿಧಾನಗಳ ಅಂತಿಮ ಆದೇಶವನ್ನು ಮಾರ್ಚ್ 29 ರಂದು ಹೊರಡಿಸಿದೆ. ಪಿಡಿಒ ಹುದ್ದೆಗಳು ಮಾತ್ರವಲ್ಲದೇ ಪಂಚಾಯ್ತಿಯ ಇತರೆ ಹುದ್ದೆಗಳನ್ನು ಭರ್ತಿ ಮಾಡುವ ಅವಕಾಶ ಇದೆ.

PDO Recruitment 2023 ರಾಜ್ಯ ಸರ್ಕಾರವು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡುವ ಕುರಿತಂತೆ ವಿಧಾನದ ಅಂತಿಮ ಆದೇಶವನ್ನು ಮಾರ್ಚ್ 29 ರಂದು ಹೊರಡಿಸಿದೆ. ವೇತನ ಶ್ರೇಣಿ ರೂ.37000-70,850 ರ ಗ್ರೂಪ್‌ ಸಿ ವೃಂದದ 1500 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೇತನ ಶ್ರೇಣಿ ರೂ.40900-78200 (ಗ್ರೂಪ್‌ ಬಿ ಕಿರಿಯ ವೃಂದ) ರಲ್ಲಿ ಉನ್ನತೀಕರಿಸಿ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಮರು ಪದನಾಮೀಕರಿಸಿದೆ.

ಮುಂದುವರೆದು ರಾಜ್ಯದ ಉಳಿದ 4521 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO Recruitment 2023) ಹುದ್ದೆಗಳನ್ನು ವೇತನ ಶ್ರೇಣಿ ರೂ.37000-70,850 (ಗ್ರೂಪ್‌ ಸಿ ವೃಂದದಲ್ಲಿ) ಮುಂದುವರೆಸಿದೆ. ಹೊಸದಾಗಿ ಹೊರಡಿಸುವ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ವಿಧಾನವನ್ನು ಪ್ರತ್ಯೇಕವಾಗಿ ಹೊರಡಿಸುವ ಕುರಿತಂತೆ ಸರ್ಕಾರದ ನಡಾವಳಿಗಳ ಪ್ರಕಟಣೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರವು ರಾಜ್ಯದಲ್ಲಿ ಖಾಲಿ ಇರುವ ಪಿಡಿಒ ಹುದ್ದೆಗಳಿಗೆ ಮುಂದಿನ ದಿನಗಳಲ್ಲಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಆದರೆ ಎಷ್ಟು ಹುದ್ದೆಗಳಿಗೆ ಅಧಿಸೂಚನೆ ಎಂಬುದು ಖಚಿತವಾಗಿಲ್ಲ. ಈ ಹುದ್ದೆಗಳಿಗೆ ಅರ್ಹತೆಗಳೇನು ? ವೇತನ ಎಷ್ಟು? ಪರೀಕ್ಷೆ ಮಾದರಿ ಹೇಗಿರುತ್ತದೆ? ಎಂಬೆಲ್ಲ ಮಾಹಿತಿಗಳನ್ನು ಕೆಳಗಿನಂತೆ ತಿಳಿಯಿರಿ.

PDO Recruitment 2023 ಹುದ್ದೆಗೆ ಶೈಕ್ಷಣಿಕ ಅರ್ಹತೆಗಳೇನು?

PDO Recruitment 2023 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಉತ್ತೀರ್ಣರಾಗಿರಬೇಕು. ಅಥವಾ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಅಂಗೀಕರಿಸಿದ ವಿದ್ಯಾರ್ಹತೆಯನ್ನು ಪಡೆದಿರಬೇಕು.

ಅಂತಿಮ ಪದವಿ ಅಧ್ಯಯನ ಮಾಡುತ್ತಿರುವವರು ಪಿಡಿಒ ಹುದ್ದೆಗೆ ಅರ್ಜಿ ಸಲ್ಲಿಸಬಹುದೇ?

ಪಿಡಿಒ ಹುದ್ದೆಗೆ ಅಧಿಸೂಚನೆ ಪ್ರಕಟಿಸಿ(PDO Recruitment 2023), ಅರ್ಜಿ ಆಹ್ವಾನಿಸಿದ ವೇಳೆ ಅಂತಿಮ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ / ಅರ್ಹತೆ ಇಲ್ಲ. ಆಯ್ಕೆ ಪ್ರಕ್ರಿಯೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತದೆ.

✔yadgir district court recruitment 2023

ಪಿಡಿಒ ಹುದ್ದೆಗೆ ಅರ್ಜಿ ಹಾಕಲು ವಯಸ್ಸಿನ ಅರ್ಹತೆಗಳೇನು?

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ

  1. ಕನಿಷ್ಠ 18 ವರ್ಷ ಆಗಿರಬೇಕು. ವರ್ಗವಾರು ಗರಿಷ್ಠ ವಯೋಮಿತಿ ಅರ್ಹತೆಗಳೆಂದರೆ..
  2. ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮೀರಿರಬಾರದು.
  3. ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು.
  4. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.

​ಕರ್ನಾಟಕ ಪಿಡಿಒ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಹೇಗಿರುತ್ತದೆ?

ಈ ಹುದ್ದೆಗೆ ಹುದ್ದೆಗೆ ಒಟ್ಟು 400 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ.

ಪತ್ರಿಕೆ-1 – ಪರೀಕ್ಷೆ 200 ಅಂಕಗಳಿಗೆ.

  • ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಜ್ಞಾನ ಕುರಿತ 100 ಅಂಕಗಳು ಇರಲಿದ್ದು, ಒಟ್ಟು 200 ಅಂಕಗಳಿಗೆ ಪರೀಕ್ಷೆ ಇರುತ್ತದೆ. ಪರೀಕ್ಷೆ ಅವಧಿ 2 ಗಂಟೆ. ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳು ಇರುತ್ತವೆ.

ಪತ್ರಿಕೆ-2- 200 ಅಂಕಗಳಿಗೆ ಪರೀಕ್ಷೆ ಇರುತ್ತದೆ.

  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಷಯಕ್ಕೆ ಸಂಬಂಧಿಸಿದ 100 ಪ್ರಶ್ನೆಗಳನ್ನು 200 ಅಂಕಗಳಿಗೆ ನಡೆಸಲಾಗುತ್ತದೆ. ಎರಡು ಗಂಟೆಗಳ ಪರೀಕ್ಷೆ ಇರುತ್ತದೆ. ಈ ಪತ್ರಿಕೆಯು ವಸ್ತುನಿಷ್ಠ ಬಹು ಆಯ್ಕೆ ಪತ್ರಿಕೆ ಆಗಿರುತ್ತದೆ.

ಪಿಡಿಒ ಹುದ್ದೆಯ ವೇತನ ಶ್ರೇಣಿ ಎಷ್ಟು?

  • ಪಿಡಿಒ ಹುದ್ದೆಗೆ ವೇತನ ಶ್ರೇಣಿ ರೂ.37000-70,850 ರ (ಗ್ರೂಪ್‌ ಸಿ ವೃಂದ).
  • ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇತನ ಶ್ರೇಣಿ ರೂ.40900-78200 (ಗ್ರೂಪ್‌ ಬಿ ಕಿರಿಯ ವೃಂದ).
  • ಪಿಂಚಣಿ ಸೌಲಭ್ಯ : ಸರ್ಕಾರದ ಆದೇಶ ಸಂಖ್ಯೆ- FD (SPL) 04 ಪಿಇಟಿ 2005, ದಿನಾಂಕ 31-03-2006 ರಂತೆ ನೀಡಲಾಗುತ್ತದೆ.

ಶಾರ್ಟ್‌ಲಿಸ್ಟಿಂಗ್ ನಿಯಮಗಳು / ಪರೀಕ್ಷೆ ಶುಲ್ಕ / ಪಠ್ಯಕ್ರಮ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಜೇಷ್ಠತೆ ಮತ್ತು ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನುಸಾರ ಮತ್ತು ಅಭ್ಯರ್ಥಿಗಳು ನೀಡಿರುವ ಆದ್ಯತೆ ಪರಿಗಣಿಸಿ ಮೊದಲಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

latest government jobs in karnataka


ಪರೀಕ್ಷಾ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.500, ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.250 ಪರೀಕ್ಷಾ ಶುಲ್ಕ ಇರುತ್ತದೆ.

ಪಠ್ಯಕ್ರಮ

ಪತ್ರಿಕೆ-01: ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲೀಷ್‌ ವಿಷಯಗಳ ಮೇಲೆ ಪ್ರಶ್ನೆಗಳನ್ನು ಹೊಂದಿರುತ್ತದೆ.

ಸಾಮಾನ್ಯ ಜ್ಞಾನದ ಪಠ್ಯಕ್ರಮ ಇಂತಿದೆ:

ಚಲಿತ ವಿದ್ಯಮಾನಗಳು, ಸಾಮಾನ್ಯ ವಿಜ್ಞಾನ, ಭೂಗೋಳ ಶಾಸ್ತ್ರ, ಸಾಮಾಜಿಕ ವಿಜ್ಞಾನ , ಭಾರತೀಯ ಸಮಾಜ ಮತ್ತು ಅದರ ಕ್ರಿಯಾಶೀಲತೆ, ಭಾರತೀಯ ಇತಿಹಾಸ , ಭಾರತೀಯ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ, ಪ್ರಾಯೋಗಿಕ ಜ್ಞಾನ ಮತ್ತು ಮಾನಸಿಕ ಸಾಮರ್ಥ್ಯ‌, ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ, ಸ್ವಾತಂತ್ರ್ಯಾ ನಂತರ ಕರ್ನಾಟಕದಲ್ಲಿ ಭೂಸುಧಾರಣೆ ಮತ್ತು ಸಾಮಾಜಿಕ ಬದಲಾವಣೆಗಳು, ಕರ್ನಾಟಕದ ಆರ್ಥಿಕತೆ: ಅದರ ಶಕ್ತಿ ಮತ್ತು ದೌರ್ಬಲ್ಯ, ಪ್ರಸ್ತುತ ಸ್ಥಿತಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರಿ ಸಂಸ್ಥೆಗಳು, ಕರ್ನಾಟಕದ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ, ಕರ್ನಾಟಕದ ಪರಿಸರ ಸಮಸ್ಯೆಗಳು ಮತ್ತು ಅಭಿವೃದ್ಧಿ ಸಮಸ್ಯೆಗಳು.

ಸಾಮಾನ್ಯ ಇಂಗ್ಲಿಷ್‌ ವಿಷಯದ ಪಠ್ಯಕ್ರಮ ಇಂತಿದೆ:

English grammar, Vocabulary, Spelling, Synonyms, Antonyms, Power to understand and comprehend English language and ability to discriminate between correct and incorrect usage.

ಸಾಮಾನ್ಯ ಕನ್ನಡ ಪತ್ರಿಕೆಯ ಪಠ್ಯಕ್ರಮ ಇಂತಿದೆ :

ಕನ್ನಡ ವ್ಯಾಕರಣ, ಶಬ್ದ ಸಂಪತ್ತು, ಕಾಗುಣಿತ, ಸಮಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು, ಕನ್ನಡ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಅಭ್ಯರ್ಥಿಯ ಶಕ್ತಿಯ ಮತ್ತು ಅದರ ಸರಿಯಾದ ಹಾಗು ತಪ್ಪು ಬಳಕೆ ಇತ್ಯಾದಿಗಳನ್ನು ಪರಿಶೀಲಿಸುವ ಅಭ್ಯರ್ಥಿಯ ಸಾಮರ್ಥ್ಯ‌.

ಪ್ರಚಲಿತ ವಿದ್ಯಮಾನಗಳಿಗಾಗಿ ದಿನಪತ್ರಿಕೆಗಳನ್ನು ಓದಬೇಕು. ಇದರ ಜೊತೆಗೆ ಎನ್‌ಸಿಇಆರ್‌ಟಿ ಮತ್ತು ಡಿಎಸ್‌ಇಆರ್‌ಟಿ ಪುಸ್ತಕಗಳು ಬಹಳ ಉಪಯುಕ್ತವಾಗಿರುತ್ತವೆ. ಇನ್ನುಳಿದಂತೆ ಇತರೆ ವಿಷಯಗಳಿಗೆ ಪದವಿ ಮಟ್ಟದ ಪುಸ್ತಕಗಳನ್ನು ಒಮ್ಮೆ ಗಮನಿಸಿ. ಜೊತೆಗೆ ಹಿಂದಿನ ವರ್ಷದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆ ಗಮನಿಸುವುದರಿಂದ ಪ್ರಶ್ನೆಗಳ ಮಾದರಿಯ ಬಗೆಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ.

ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲಿಷ್‌ ವಿಷಯಗಳಗೆ 10ನೇ ತರಗತಿ ಮಟ್ಟದ ಪುಸ್ತಕಗಳನ್ನು ಗಮನಿಸಿ.

PDO Recruitment 2023 ಪತ್ರಿಕೆ-02ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಷಯದ ಮೇಲೆ ಪ್ರಶ್ನೆಗಳಿರುತ್ತವೆ. ಪಠ್ಯಕ್ರಮ ಇಂತಿದೆ:

ಗ್ರಾಮ ಪಂಚಾಯಿತಿಗಳ ರಚನೆ, ಗ್ರಾಮ ಪಂಚಾಯಿತಿಗಳ ಅಧ್ಯಕ್ಷನ ಮತ್ತು ಉಪಾಧ್ಯಕ್ಷನ ಪ್ರಕಾರ್ಯಗಳು,ಕರ್ತವ್ಯಗಳು ಮತ್ತು ಅಧಿಕಾರಗಳು, ಗ್ರಾಮ ಪಂಚಾಯ್ತಿಗಳ ಸಿಬ್ಬಂದಿ, ಚಿಕ್ಕ ನಗರ ಪ್ರದೇಶ ಅಥವಾ ಪರಿವರ್ತಿತವಾಗಲಿರುವ ಪ್ರದೇಶದ ಪರಿವರ್ತನೆ ಮತ್ತು ಸಂಯೋಜನೆ, ತೆರಿಗೆಗಳು ಮತ್ತು ಫೀಜುಗಳು, ಗ್ರಾಮ ಪಂಚಾಯ್ತಿಗಳ ಅನುದಾನ ಮತ್ತು ನಿಧಿಗಳು, ಹಣಕಾಸು ನಿಯಂತ್ರಣ ಮತ್ತು ಲೆಕ್ಕ ಪರಿಶೋಧನೆ, ತಾಲ್ಲೂಕು ಪಂಚಾಯ್ತಿ ರಚನೆ , ಜಿಲ್ಲಾ ಪಂಚಾಯ್ತಿ ರಚನೆ, ಪರಿವೀಕ್ಷಣೆ ಮತ್ತು ಮೇಲ್ವಿಚಾರಣೆ, ವಿಶೇಷ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು.

official website

Leave a Reply

Your email address will not be published. Required fields are marked *