SSC MTS Recruitment 2023: ಸ್ಟಾಫ್ ಸೆಲೆಕ್ಷನ್ ಕಮಿಷನ್ ಬರೋಬರಿ 11,409 ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹಾಗೂ ಹವಾಲ್ದಾರ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಎಸ್‌ಎಸ್‌ಎಲ್‌ಸಿ ಪಾಸಾದವರಿಂದ ಅರ್ಜಿ ಆಹ್ವಾನಿಸಲಾಗಿದೆ.
SSC MTS Recruitment 2023
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಸಂಸ್ಥೆಗಳು, ಇಲಾಖೆಗಳು, ಕಚೇರಿಗಳಲ್ಲಿ ನೇಮಕ ಮಾಡಲು ಸಿಬ್ಬಂದಿ ನೇಮಕಾತಿ ಆಯೋಗವು ಇದೀಗ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ನಾನ್-ಟೆಕ್ನಿಕಲ್) ಹಾಗೂ ಹವಾಲ್ದಾರ್ ಹುದ್ದೆಗಳ ಪರೀಕ್ಷೆಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. 10880 ಎಂಟಿಎಸ್ ಹುದ್ದೆಗಳಿಗೆ ಹಾಗೂ 529 ಸಿಬಿಐಸಿ ಮತ್ತು ಸಿಬಿಎನ್’ನ ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅರ್ಹತೆ, ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
VACANCY DETAILS ಹುದ್ದೆಗಳ ವಿವಿರ
- ನೇಮಕಾತಿ ಪ್ರಾಧಿಕಾರ : SSC
- ಉದ್ಯೋಗ ಇಲಾಖೆ : SSC -CBIN
- ಹುದ್ದೆ ಹೆಸರು : SSC MTS & Havaldar
- ಹುದ್ದೆಗಳ ಸಂಖ್ಯೆ : 12523
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) : 10,880
ಹವಾಲ್ದಾರ್ ಇನ್ ಸಿಬಿಐಸಿ ಮತ್ತು ಸಿಬಿಎನ್ : 529

QUALIFICATION ವಿದ್ಯಾರ್ಹತೆ
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಮಾಡಿರಬೇಕು
APPLICATION FEE ಅರ್ಜಿಶುಲ್ಕ:-
- ಸಾಮಾನ್ಯ ಅಭ್ಯರ್ಥಿಗಳಿಗೆ 100/-ರೂ
- ಒಬಿಸಿ ಅಭ್ಯರ್ಥಿಗಳಿಗೆ : ರೂ. 100/- ರೂ
- ಎಸ್.ಸಿ, ಎಸ್.ಟಿ ಮಹಿಳಾ ಅಭ್ಯರ್ಥಿಗಳಿಗೆ: ರೂ. 0/- ರೂ
www.udyogmahiti.com
SELECTION PROCESS ಆಯ್ಕೆ ಪ್ರಕ್ರಿಯೆ ಹೇಗೆ?
- ಎಸ್‌ಎಸ್‌ಸಿ ಎಂಟಿಸ್ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಪೇಪರ್-1),
- ಸಹಿಷ್ಣುತಾ ಪರೀಕ್ಷೆ (PET),
- ದೈಹಿಕ ಸಾಮರ್ಥ್ಯ ಪರೀಕ್ಷೆ (PST) (ಹವಾಲ್ದಾರ್ ಹುದ್ದೆಗಳಿಗೆ ಮಾತ್ರ),
- ವಿವರಣಾತ್ಮಕ ಪರೀಕ್ಷೆ (ಪೇಪರ್-2) ಇರುತ್ತದೆ.
AGE LIMIT ವಯೋಮಿತಿ ಅರ್ಹತೆ :-
ಮಿಸಲಾತಿ ವರ್ಗಗಳು | ಕನಿಷ್ಠ | ಗರಿಷ್ಠ |
ಸಾಮಾನ್ಯ | 18 | 25 |
ಒಬಿಸಿ | 18 | 27 |
ಎಸ್.ಸಿ-ಎಸ್.ಟಿ | 18 | 30 |
SALARY ವೇತನ:-
SSC MTS Recruitment 2023 ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. Rs.5200-20200.ವರೆಗೆ.
IMPORTANT DATES ಪ್ರಮುಖ ದಿನಾಂಕಗಳು:-
ಮುಖ್ಯದಿನಾಂಕಗಳು | ದಿನಾಂಕಗಳು |
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ | 18-01-2023 |
ಅರ್ಜಿಸಲ್ಲಿಸಲು ಕೊನೆಯ ದಿನಾಂಕ | 17-02-2023 |
ಅರ್ಜಿಶುಲ್ಕ ಪಾತಿಸಲು ಕೊ ದಿನಾಂಕ | 17-02-2023 |
ಪರೀಕ್ಷಾ ದಿನಾಂಕ | 2023 ರ ಏಪ್ರಿಲ್. |
ಫಲಿತಾಂಶ | ಮುಂದೆ ತಿಳಿಸಲಾಗುವುದು |
HOW TO APPLY ಅರ್ಜಿಸಲ್ಲಿಸುವುದು ಹೇಗೆ?
- ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ ಮೂಲಕ ಆನಲೈನ ಅರ್ಜಿ ಸಲ್ಲಿಸಬೇಕು
SSC MTS Recruitment 2023 ಪೇಪರ್-1 ಪರೀಕ್ಷೆ ಮಾದರಿ ಹೇಗಿರುತ್ತದೆ?
ಈ ಪತ್ರಿಕೆಯನ್ನು 100 ಅಂಕಗಳಿಗೆ, 90 ನಿಮಿಷ ನಡೆಸಲಾಗುತ್ತದೆ. ಆಬ್ಜೆಕ್ಟಿವ್ ಟೈಪ್, ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳು ಇರುತ್ತವೆ. ಪ್ರಶ್ನೆಗಳು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಇರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ.
ಪ್ರಶ್ನೆಗಳನ್ನು ಕೇಳಲಾಗುವ ವಿಷಯ / ಪ್ರಶ್ನೆ ಹಾಗೂ ಅಂಕಗಳು
ಜೆನೆರಲ್ ಇಂಗ್ಲಿಷ್ : 25 ಪ್ರಶ್ನೆ, 25 ಅಂಕಗಳು
ಜೆನೆರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್ : 25 ಪ್ರಶ್ನೆ, 25 ಅಂಕಗಳು
ನ್ಯೂಮೆರಿಕಲ್ ಆಪ್ಟಿಟ್ಯೂಡ್ : 25 ಪ್ರಶ್ನೆ, 25 ಅಂಕಗಳು
ಜೆನೆರಲ್ ಅವಾರ್ನೆಸ್ : 25 ಪ್ರಶ್ನೆ, 25 ಅಂಕಗಳು
ಪೇಪರ್-1 ನಲ್ಲಿ ಆಯ್ಕೆಯಾಗಲು ಪಡೆಯಬೇಕಾದ ಕನಿಷ್ಠ ಅಂಕಗಳು (ವರ್ಗಾವಾರು)
ಸಾಮಾನ್ಯ ಅರ್ಹತಾ ಅಭ್ಯರ್ಥಿ : ಶೇಕಡ.30 ಅಂಕಗಳು
ಒಬಿಸಿ / EWS ಅರ್ಹತಾ ಅಭ್ಯರ್ಥಿ : ಶೇಕಡ.25 ಅಂಕಗಳು
ಇತರೆ ಎಲ್ಲ ಕೆಟಗರಿ ಅಭ್ಯರ್ಥಿಗಳು: ಶೇಕಡ.20 ಅಂಕಗಳು
SSC MTS Recruitment 2023 ಪೇಪರ್-2 ಪರೀಕ್ಷೆ ಮಾದರಿ ಹೇಗಿರುತ್ತದೆ?
ಎಸ್‌ಎಸ್‌ಸಿ ಎಂಟಿಎಸ್ ಪೇಪರ್-2 ವಿವರಣಾತ್ಮಕ ಪರೀಕ್ಷೆ ಆಗಿರುತ್ತದೆ. 50 ಅಂಕಗಳಿಗೆ 45 ನಿಮಿಷ ಪರೀಕ್ಷೆ ಇರುತ್ತದೆ. ಅಂಧ ಅಭ್ಯರ್ಥಿಗಳಿಗೆ 60 ನಿಮಿಷ ಪರೀಕ್ಷೆ ಅವಧಿ ಇರುತ್ತದೆ. ಪೇಪರ್ ಮತ್ತು ಪೆನ್ ಮಾದರಿ ಪರೀಕ್ಷೆ ಇದಾಗಿದೆ.
ವಿಷಯ ಮತ್ತು ಅಂಕಗಳು/ ಪ್ರಶ್ನೆಗಳ ವಿವರ
ಕಿರು ಪ್ರಬಂಧ ಮತ್ತು ಇಂಗ್ಲಿಷ್‌ನಲ್ಲಿ ಲೆಟರ್ ಬರೆಯುವುದು : 50 (25 + 25) ಅಂಕಗಳಿಗೆ ಪರೀಕ್ಷೆ ಇರುತ್ತದೆ.
ಪೇಪರ್-2 ನಲ್ಲಿ ಆಯ್ಕೆಯಾಗಲು ಪಡೆಯಬೇಕಾದ ಕನಿಷ್ಠ ಅಂಕಗಳು (ವರ್ಗಾವಾರು)
ಸಾಮಾನ್ಯ ಅರ್ಹತಾ ಅಭ್ಯರ್ಥಿ : ಶೇಕಡ.40 ಅಂಕಗಳು
ಒಬಿಸಿ / EWS ಅರ್ಹತಾ ಅಭ್ಯರ್ಥಿ : ಶೇಕಡ.35 ಅಂಕಗಳು
ಇತರೆ ಎಲ್ಲ ಕೆಟಗರಿ ಅಭ್ಯರ್ಥಿಗಳು: ಶೇಕಡ.35 ಅಂಕಗಳು
ಪೇಪರ್ 1 ನಲ್ಲಿ ಉತ್ತಮ ಅಂಕಗಳನ್ನು ಪಡೆದು, ವರ್ಗಾವಾರು ನಿಗಧಿಪಡಿಸಿದ ಕಟ್ ಆಫ್ ಅಂಕಗಳನ್ನು ಪಡೆದು, ಅರ್ಹತೆ ಪಡೆದ ಅಭ್ಯರ್ಥಿಗಳು ಮಾತ್ರ ಪೇಪರ್-2 ಪರೀಕ್ಷೆ ಬರೆಯಬಹುದಾಗಿರುತ್ತದೆ.
ಎಸ್‌ಎಸ್‌ಸಿ ಎಂಟಿಸ್ ಹುದ್ದೆಗಳ ಪೈಕಿ ಸಿಬಿಐಸಿ ಮತ್ತು ಸಿಬಿಎನ್‌ನ ಹವಾಲ್ದಾರ್ ಪೋಸ್ಟ್‌ಗಳಿಗೆ ಈ ಕೆಳಗಿನ ಸಹಿಷ್ಣುತಾ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ.
ಪುರುಷ ಅಭ್ಯರ್ಥಿಗಳಿಗೆ ಸಹಿಷ್ಣುತಾ ಪರೀಕ್ಷೆ
ವಾಕಿಂಗ್ : 15 ನಿಮಿಷದಲ್ಲಿ 1600 ಮೀಟರ್ ನಡಿಗೆ.
ಸೈಕ್ಲಿಂಗ್: 30 ನಿಮಿಷದಲ್ಲಿ 8 ಕಿ.ಮೀ ಸೈಕ್ಲಿಂಗ್ ಮಾಡುವುದು.
ಮಹಿಳಾ ಅಭ್ಯರ್ಥಿಗಳಿಗೆ ಸಹಿಷ್ಣುತಾ ಪರೀಕ್ಷೆ
ವಾಕಿಂಗ್ : 20 ನಿಮಿಷದಲ್ಲಿ 1 km ನಡಿಗೆ.
ಸೈಕ್ಲಿಂಗ್: 25 ನಿಮಿಷದಲ್ಲಿ 3 ಕಿ.ಮೀ ಸೈಕ್ಲಿಂಗ್ ಮಾಡುವುದು
ದೈಹಿಕ ಸಾಮರ್ಥ್ಯ ಪರೀಕ್ಷೆ (ಪುರುಷ ಮತ್ತು ಮಹಿಳಾ)
ಪುರುಷ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ
ಎತ್ತರ: 157.5 ಸೆಂ.ಮೀ
ಎದೆ ಸುತ್ತಳತೆ: 76 ಸೆಂ.ಮೀ (ಕನಿಷ್ಠ ಹಿಗ್ಗುವಿಕೆ 5 ಸೆಂ.ಮೀ)
ಮಹಿಳಾ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ
ಎತ್ತರ: 152 ಸೆಂ.ಮೀ
ತೂಕ: 48 ಕೆ.ಜಿ
REQUIRED DOCUMENTS ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು
- 10ನೇ ತರಗತಿ ಅಂಕಪಟ್ಟಿ
- ಆಧಾರ ಕಾರ್ಡ
- ಜಾತಿ ಪ್ರಮಾಣ ಪತ್ರ (ಲಬ್ಯವಿದ್ದಲ್ಲಿ)
- ಪೋಟೋ ಮತ್ತು ಸಹಿ
- ಮೋಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
- ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು
ಈ ತರಹದ ಹೆಚ್ಚಿನ ಉದ್ಯೋಗ ಮಾಹಿತಿ ಪಡೆಯಲು ಈಗಲೇ ಕೇಳಗೆ ನಿಡಿರುವ ಲಿಂಕ ಮೂಲಕ ಟೇಲಿಗ್ರಾಮ ಚಾನಲ್ಗೆ ಸೇರಿಕೊಳ್ಳಿ. ಉದ್ಯೋಗ ಮಾಹಿತಿ ಪಡೆಯಿರಿ.