Agriculture Department Karnataka 2023 | ಕೃಷಿ ಇಲಾಖೆಯಿಂದ ನೇಮಕಾತಿ: ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

Agriculture Department Karnataka 2023: ರಾಜ್ಯ ಕೃಷಿ ಇಲಾಖೆಯು ಕೇಂದ್ರ ಸರ್ಕಾರಿ ಯೋಜನೆಯೊಂದರಡಿ ಅಗತ್ಯ ಇರುವ ರಾಜ್ಯ ಸಲಹೆಗಾರರು, ತಾಂತ್ರಿಕ ಸಲಹೆಗಾರರು, ಆರ್ಥಿಕ ಸಹಾಯಕರು ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ

ಕೃಷಿ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಯೊಂದರಡಿ ಈ ಕೆಳಗಿನ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಹಾರ ಮತ್ತು ಪೌಷ್ಠಿಕ ಭದ್ರತೆ (ಎಫ್‌ಎನ್‌ಎಸ್‌) ಮತ್ತು ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ (NMEO-OS) ಯೋಜನೆಗಳಡಿ ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇರೆಗೆ ಕಾರ್ಯ ನಿರ್ವಹಿಸಲು ಆಸಕ್ತ ಮತ್ತು ಅರ್ಹತೆ ಹೊಂದಿರುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

Agriculture Department Karnataka
ಹುದ್ದೆಗಳ ವಿವರ
  1. ರಾಜ್ಯ ಸಲಹೆಗಾರರು : 2
  2. ತಾಂತ್ರಿಕ ಸಹಾಯಕರು : 4
  3. ಆರ್ಥಿಕ ಸಹಾಯಕರು : 1

ಆಸಕ್ತ ಮತ್ತು ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಈ ಜಾಹೀರಾತು ಪ್ರಕಟಗೊಂಡ 10 ದಿನಗಳ ಒಳಗಾಗಿ ಕೃಷಿ ನಿರ್ದೇಶಕರು (ಎಫ್‌ಎನ್‌ಎಸ್‌) ಕೃಷಿ ಆಯುಕ್ತರ ಕಾರ್ಯಾಲಯ, ಶೇಷಾದ್ರಿ ರಸ್ತೆ, ಬೆಂಗಳೂರು – 560001 ರವರಿಗೆ ಅಥವಾ ಪೋಸ್ಟ್‌ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.

➡️Karnataka PDO SDA Recruitment

ಅರ್ಜಿ ನಮೂನೆ ಹಾಗೂ ಇತರೆ ಮಾಹಿತಿಗಳಿಗೆ ಈ ಕಛೇರಿಯನ್ನು ಅಥವಾ ಇಲಾಖಾ ವೆಬ್‌ಸೈಟ್

http://raitamitra.kar.nic.in/KAN/Publications.asp/CSS.pdf ನಲ್ಲಿ ಪಡೆಯಲು ತಿಳಿಸಲಾಗಿದೆ.

ವಿದ್ಯಾರ್ಹತೆ : ಪದವಿ / ಸ್ನಾತಕೋತ್ತರ ಪದವಿ ಪಾಸ್‌.

ಕಾರ್ಯಾನುಭವ : ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಇಲಾಖೆ ನಿಗಧಿತ ವರ್ಷಗಳ ಕಾಲ ಕರ್ತವ್ಯ ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಸುವಾಗ ವಿದ್ಯಾರ್ಹತೆ ದಾಖಲೆಗಳು, ಅನುಭವ ದಾಖಲೆಗಳೆಲ್ಲವನ್ನು ಲಗತ್ತಿಸಬೇಕು.

ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಆಕರ್ಷಕ ಮಾಸಿಕ ಸಂಬಳವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಆಗಸ್ಟ್‌ 01, 2023

teligram

ನಮ್ಮ WhatsApp Group ಅಲ್ಲಿ ಸೇರಲು 9019 899 822 ಈ ನಂಬರೆ Join ಅಂತಾ ಮೆಸೇಜು ಮಾಡಿ, ನಂತರ ನಿಮ್ಮ ನಂಬರೆಗೆ ಗ್ರೂಪ್ ಲಿಂಕ ಕಳೆಸಲಾಗುತ್ತದೆ ಆ ಲಿಂಕ ಮೂಲಕ ನಿವು ಗ್ರೂಪಗೆ ಸೇರಿಕೊಳ್ಳಿ

Leave a Reply

Your email address will not be published. Required fields are marked *