Karnataka PDO SDA Recruitment ಕೆಪಿಎಸ್‌ಸಿ ಮೂಲಕ PDO, SDA, ಪಂಚಾಯ್ತಿ ಕಾರ್ಯದರ್ಶಿ ಹುದ್ದೆ ನೇಮಕ: ಆದೇಶ ಬಿಡುಗಡೆ

Karnataka PDO SDA Recruitment: ಅತಿ ಶೀಘ್ರದಲ್ಲಿಯೇ ಅಂದರೆ ಮುಂದಿನ ಆಗಸ್ಟ್‌ ತಿಂಗಳಲ್ಲೇ ಪಂಚಾಯತ್‌ ಪಿಡಿಒ, ಕಾರ್ಯದರ್ಶಿ, ಎಸ್‌ಡಿಎ ಹುದ್ದೆಗಳಿಗೆ ನೇಮಕ ಅಧಿಸೂಚನೆ ಹೊರಬೀಳುವ ಸಾಧ್ಯತೆಗಳಿವೆ. ಈ ಕುರಿತು ಈಗಾಗಲೇ ನೇಮಕಾತಿ ಪ್ರಾಧಿಕಾರವನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಮಾಹಿತಿ ಕೆಳಗಿನಂತಿದೆ.

Karnataka PDO SDA Recruitment

ಹಲವು ವರ್ಷಗಳಿಂದ ಗ್ರಾಮಪಂಚಾಯ್ತಿ ಸರ್ಕಾರಿ ಹುದ್ದೆಗಳಿಗೆ ಸೇರಬೇಕು ಎಂದುಕೊಂಡಿದ್ದವರಿಗೆ ಇದೀಗ ಭರ್ಜರಿ ಗುಡ್‌ ನ್ಯೂಸ್‌ ಒಂದನ್ನು ತಿಳಿಸುತ್ತಿದ್ದೇವೆ. ಅಂತು ಇಂತು ರಾಜ್ಯ ಪಂಚಾಯತ್‌ ರಾಜ್ ಇಲಾಖೆಯಡಿ ಕಾರ್ಯನಿರ್ವಹಿಸುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಪಂಚಾಯ್ತಿ ಕಾರ್ಯದರ್ಶಿ ಗ್ರೇಡ್‌-1, ಪಂಚಾಯ್ತಿ ಕಾರ್ಯದರ್ಶಿ ಗ್ರೇಡ್‌-2, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ನೇಮಕಾತಿ ಮಾಡಲು ಸರ್ಕಾರದಿಂದ ಅಂತಿಮ ಆದೇಶ ಹೊರಬಿದ್ದಿದೆ. ಈ ಕುರಿತು ಕೆಳಗಿನಂತೆ ಅಧಿಸೂಚನೆಗೆ ಆದೇಶ ಹೊರಡಿಸಲಾಗಿದೆ.

” ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್‌-1, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್‌-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದ ನೇರ ನೇಮಕಾತಿ ಕೋಟಾದ ಖಾಲಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಪರೀಕ್ಷೆ ನಡೆಸಿ ನೇಮಕಾತಿ ಮಾಡಲು ಆದೇಶಿಸಿದೆ,” ಎಂದು ಕರ್ನಾಟಕ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.

ಮುಂದುವರೆದು, ‘ 2020ರಂದು ಹೊರಡಿಸಿರುವ ಸರ್ಕಾರದ ಅಧಿಸೂಚನೆ – ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ), ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್‌ 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇಮಕಾತಿ (ವಿಶೇಷ) ನಿಯಮಗಳು 2019 ಅನ್ನು ಹಿಂಪಡೆಯಲಾಗಿದೆ ಎಂದು ಸೂಚಿಸಲಾಗಿದೆ.

ಸರ್ಕಾರವು ಈ ಆದೇಶವನ್ನು ಜುಲೈ 15 ರಂದು ಹೊರಡಿಸಿದ್ದು, ಮುಂದಿನ ಆಗಸ್ಟ್‌ ತಿಂಗಳ ಅಂತ್ಯದೊಳಗೆ ಈ ಸದರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವ ಸಾಧ್ಯತೆಗಳಿವೆ.

south western railway recruitment 2023 
ಎಷ್ಟು ಹುದ್ದೆಗಳಿಗೆ ಅಧಿಸೂಚನೆ?

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವೃಂದದ ನೇರ ನೇಮಕಾತಿ ಕೋಟಾದಲ್ಲಿ ಪ್ರಸ್ತುತ 385 ಹುದ್ದೆಗಳು ಖಾಲಿ ಇದ್ದು, ಈ ಪೈಕಿ 150 ಹುದ್ದೆಗಳಿಗೆ ನೇರ ನೇಮಕಾತಿ ನಡೆಸಲು ಅಧಿಸೂಚನೆ ಸಾಧ್ಯತೆ ಇದೆ. ಇತರೆ ಹುದ್ದೆಗಳ ಸಂಖ್ಯೆ ಕುರಿತು ಅಧಿಸೂಚನೆ ಹೊರಬಿದ್ದ ನಂತರವೇ ತಿಳಿಯಬೇಕಿದೆ.

ಪಂಚಾಯತ್ ರಾಜ್ ಇಲಾಖೆಯಡಿ ಖಾಲಿ ಇರುವ ಹುದ್ದೆಗಳ ವಿವರ
  1. ಪಂಚಾಯತ್ ಅಭಿವೃದ್ಧಿ ಅಧಿಕಾರಿ : 660
  2. ಪಂಚಾಯತ್ ಕಾರ್ಯದರ್ಶಿ ಗ್ರೇಡ್‌-1: 604
  3. ಪಂಚಾಯತ್ ಕಾರ್ಯದರ್ಶಿ ಗ್ರೇಡ್‌-2: 729
  4. ಎಸ್‌ಡಿಎ : 345

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ಎಸ್‌ಡಿಎ, ಕಾರ್ಯದರ್ಶಿ ಹುದ್ದೆಗಳಿಗೆ ಪಿಯುಸಿ ಪಾಸ್‌ ಮಾಡಿರಬೇಕು. ಅರ್ಜಿ ಸಲ್ಲಿಸುವ ಕೊನೆ ದಿನಾಂಕದೊಳಗೆ ಪಾಸ್‌ ಮಾಡಿದ್ದರೆ ಮಾತ್ರ ಅರ್ಜಿಗೆ ಅವಕಾಶ ಇರುತ್ತದೆ. ಅಂತಿಮ ವರ್ಷದಲ್ಲಿ ಯಾವುದೇ ಶಿಕ್ಷಣ ಪಡೆಯುತ್ತಿರುವವರು ಅರ್ಜಿ ಹಾಕಲು ಅವಕಾಶ ಇರುವುದಿಲ್ಲ.

teligram

ನಮ್ಮ WhatsApp Group ಅಲ್ಲಿ ಸೇರಲು 9019 899 822 ಈ ನಂಬರೆ Join ಅಂತಾ ಮೆಸೇಜು ಮಾಡಿ, ನಂತರ ನಿಮ್ಮ ನಂಬರೆಗೆ ಗ್ರೂಪ್ ಲಿಂಕ ಕಳೆಸಲಾಗುತ್ತದೆ ಆ ಲಿಂಕ ಮೂಲಕ ನಿವು ಗ್ರೂಪಗೆ ಸೇರಿಕೊಳ್ಳಿ

Leave a Reply

Your email address will not be published. Required fields are marked *