Bagalkot DCC Bank Recruitment 2022: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿಯಮಿತವು ಸಾಫ್ಟ್‌ವೇರ್ ಇಂಜಿನಿಯರ್, ಸಿವಿಲ್ ಇಂಜಿನಿಯರ್, ಚಾಲಕ, ಸಿಪಾಯಿ, ಎಸ್‌ಡಿಎ, ಎಫ್‌ಡಿಎ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ.

ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿಯಮಿತವು (Bagalkot DCC Bank Recruitment 2022), ಇಲ್ಲಿ ಖಾಲಿ ಇರುವ 110 ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

Bagalkot DCC Bank Recruitment 2022

ಹುದ್ದೆ ಹೆಸರುಹುದ್ದೆಗಳ ಸಂಖ್ಯೆವೇತನ ಶ್ರೇಣಿ ರೂ.ಗಳಲ್ಲಿ
ಸಾಫ್ಟ್‌ವೇರ್ ಇಂಜಿನಿಯರ್140900-78200
ಸಿವಿಲ್ ಇಂಜಿನಿಯರ್140900-78200
ಗಣಕಯಂತ್ರಗಳ ಸಂಯೋಜಕರು237900-70850
ಪ್ರಥಮ ದರ್ಜೆ ಸಹಾಯಕರು2037900-70850
ದ್ವಿತೀಯ ದರ್ಜೆ ಸಹಾಯಕರು3033450-62600
ಸಿಪಾಯಿ5427650-52650
ವಾಹನ ಚಾಲಕ227650-52650
ಒಟ್ಟು ಹುದ್ದೆಗಳ ಸಂಖ್ಯೆ110
Bagalkot DCC Bank Recruitment 2022

ವಿದ್ಯಾರ್ಹತೆ ಮತ್ತು ಇತರೆ ಅರ್ಹತೆಗಳು

  • ಸಾಫ್ಟ್‌ವೇರ್ ಇಂಜಿನಿಯರ್: ಬಿಇ ಇನ್‌ ಕಂಪ್ಯೂಟರ್‌ ಸೈನ್ಸ್‌, ಬಿಸಿಎ ಪಾಸ್‌. ಬ್ಯಾಂಕಿಂಗ್ ಸಿಬಿಎಸ್ ತಂತ್ರಾಂಶಕ್ಕೆ ಸಂಬಂಧಿಸಿದ ಕನಿಷ್ಠ 5 ವರ್ಷ ತಾಂತ್ರಿಕ ಸಲಹೆಗಾರರಾಗಿ ಸಂಸ್ಥೆಯ ಅನುಭವ ಹೊಂದಿರಬೇಕು. ಹಾಗೂ ಜಾವಾ ಭಾಷೆ ಮತ್ತು ಒರಾಕಲ್ ಜ್ಞಾನ ಹೊಂದಿರಬೇಕು.
  • ಸಿವಿಲ್ ಇಂಜಿನಿಯರ್: ಬಿಇ ಸಿವಿಲ್ ಜತೆಗೆ ಕನಿಷ್ಠ 5 ವರ್ಷ ತಾಂತ್ರಿಕ ಸಲಹೆಗಾರರಾಗಿ ಕರ್ತವ್ಯ ಅನುಭವ ಹೊಂದಿರಬೇಕು.
  • ಗಣಕಯಂತ್ರಗಳ ಸಂಯೋಜಕರು: ಬಿಇ / ಬಿ.ಟೆಕ್ ಕಂಪ್ಯೂಟರ್ ಸೈನ್ಸ್‌ / ಇಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್‌, ಬಿಸಿಎ, ಬಿಎಸ್ಸಿ ನಲ್ಲಿ ಕನಿಷ್ಠ ಶೇಕಡ.60 ಅಂಕಗಳೊಂದಿಗೆ ಪದವಿ ಪಡೆದಿರಬೇಕು.
  • ಪ್ರಥಮ ದರ್ಜೆ ಸಹಾಯಕರು: ಯಾವುದೇ ಪದವಿ ಪಾಸ್‌. ಜತೆಗೆ ಕನ್ನಡ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು. ಹಾಗೂ ಕಂಪ್ಯೂಟರ್ ಜ್ಞಾನ ಇರಬೇಕು.
  • ದ್ವಿತೀಯ ದರ್ಜೆ ಸಹಾಯಕರು : ದ್ವಿತೀಯ ಪಿಯುಸಿ ಪಾಸ್‌. ಜತೆಗೆ ಕನ್ನಡ ಓದಲು , ಬರೆಯಲು, ಮಾತನಾಡಲು ತಿಳಿದಿರಬೇಕು. ಕಂಪ್ಯೂಟರ್ ಆಪರೇಟಿಂಗ್ ತಿಳಿದಿರಬೇಕು.
  • ಸಿಪಾಯಿ: ಎಸ್‌ಎಸ್‌ಎಲ್‌ಸಿ ಪಾಸ್‌. ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
  • ವಾಹನ ಚಾಲಕ:ಎಸ್‌ಎಸ್‌ಎಲ್‌ಸಿ ಪಾಸ್‌. ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. ಲಘು ವಾಹನ ಚಾಲನೆ ಪರವಾನಿಗೆಯೊಂದಿಗೆ 5 ವರ್ಷ ಅನುಭವ ಹೊಂದಿರಬೇಕು.

ksp recruitment 2022

ವಯೋಮಿತಿ ಅರ್ಹತೆಗಳು

  1. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ.
  2. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ.
  3. ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.
  4. ಮಾಜಿ ಸೈನಿಕ ಅಭ್ಯರ್ಥಿಗಳು ಕನಿಷ್ಠ 15 ವರ್ಷ ಸೇವೆ ಸಲ್ಲಿಸಿರಬೇಕು. 45 ವರ್ಷ ಗರಿಷ್ಠ ಮೀರಿರಬಾರದು.
  5. ಅಂಗವಿಕಲ / ವಿಧವೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಮೇಲ್ಕಂಡಂತೆ ವರ್ಗವಾರು ನಿಗಧಿಪಡಿಸಿರುವ ವಯೋಮಿತಿಗೆ 10 ವರ್ಷ ಸೇರಿಸಿ ಪರಿಗಣಿಸಲಾಗುವುದು.

ಅರ್ಜಿ ಶುಲ್ಕ ಮಾಹಿತಿ

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.1000.
  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.1000.
  • ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.500.
  • ಅಂಗವಿಕಲ / ವಿಧವೆ ಅಭ್ಯರ್ಥಿಗಳಿಗೆ ರೂ.500.

ಪ್ರಮುಖ ದಿನಾಂಕಗಳು

  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 11-03-2022
  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 04-04-2022

ಆನ್‌ಲೈನ್‌ ಅರ್ಜಿ ವೇಳೆ ಈ ಕೆಳಕಂಡ ಪ್ರಮಾಣ ಪತ್ರಗಳನ್ನು ಸ್ವಯಂ ದೃಢೀಕರಿಸಿ, ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಬೇಕು. ಹಾಗೂ ಮೂಲ ದಾಖಲೆಗಳ ಪರಿಶೀಲನೆ ಸಮಯದಲ್ಲಿ ಸದರಿ ಮೂಲ ದಾಖಲೆಗಳನ್ನು ಹಾಜರುಪಡಿಸುವುದು.

  1. ಪಾಸ್‌ಪೋರ್ಟ್‌ ಅಳಕೆಯ ಭಾವಚಿತ್ರ
  2. ಹುದ್ದೆಗಳಿಗೆ ನಿಗಧಿತ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು
  3. ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ. (ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ / ವರ್ಗಾವಣೆ ಪ್ರಮಾಣ ಪತ್ರ)
  4. ಮೀಸಲಾತಿ ಕೋರಿದ್ದಲ್ಲಿ ಪ್ರಮಾಣ ಪತ್ರಗಳು.
  5. ಸೇವಾ ಅನುಭವ ಪ್ರಮಾಣ ಪತ್ರ.

APPLY NOW

NOTIFICATION

Leave a Reply

Your email address will not be published. Required fields are marked *