952 ಅಬಕಾರಿ ರಕ್ಷಕರ ಹುದ್ದೆಗಳು Excise Guard recruitment ಈ ಕುರಿತು ಮಾಹಿತಿ ನಿಮಗಾಗಿ…

Excise Guard recruitment Final Selection list: ಅಬಕಾರಿ ಇಲಾಖೆಯ ಅಬಕಾರಿ ರಕ್ಷಕ (ಪುರುಷರು) 952 ( 945+7) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಚೆಕ್‌ ಮಾಡಲು ಲಿಂಕ್‌ ಇಲ್ಲಿದೆ.

ಕರ್ನಾಟಕ ಲೋಕಸೇವಾ ಆಯೋಗವು 952 ಅಬಕಾರಿ ರಕ್ಷಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ. ಅಲ್ಲದೇ ಸದರಿ ಅಂತಿಮ ಪಟ್ಟಿಗೆ ಪರಿಗಣಿಸಲಾದ ವರ್ಗಾವಾರು ಕೊನೆ ಅಭ್ಯರ್ಥಿಗಳ ಶೇಕಡವಾರು ಅಂಕಗಳನ್ನು (ಕಟ್‌ ಆಫ್‌ ಅಂಕ) ಸಹ ಬಿಡುಗಡೆ ಮಾಡಲಾಗಿದೆ.

ksp recruitment 2022 ಪೊಲೀಸ್ ಇಲಾಖೆ ಗ್ರೂಪ್‌ ಎ ಹುದ್ದೆ

ಕೆಪಿಎಸ್‌ಸಿ’ಯು ದಿನಾಂಕ 28-02-2017 ರಲ್ಲಿ ಅಬಕಾರಿ ರಕ್ಷಕರು (ಪುರುಷರು) 952 ( 945+7) ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿತ್ತು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಂತಿಮ ಆಯ್ಕೆಪಟ್ಟಿ ಚೆಕ್‌ ಮಾಡಬಹುದು.

ಕೆಪಿಎಸ್‌ಸಿ’ಯು ಇದೀಗ ಹೈಕೋರ್ಟ್‌ ರಿಟ್‌ ಪಿಟಿಷನ್‌ ಮತ್ತು ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಅರ್ಜಿ ಸಂಖ್ಯೆ 3343-44/2019 ರಲ್ಲಿ ದಿನಾಂಕ 04-03-2020 ರಂದು ನೀಡಲಾದ ಆದೇಶದನ್ವಯ ಆಯ್ಕೆಪಟ್ಟಿ ಪರಿಷ್ಕೃತಗೊಳಿಸಲಾಗಿದೆ. ಅಲ್ಲದೇ ಕೆಲವು ಜಿಲ್ಲಾವಾರು ಪಟ್ಟಿಗಳು ಬದಲಾವಣೆಗೆ ಒಳಪಟ್ಟಿರುತ್ತವೆ ಎಂದು ಆಯ್ಕೆಪಟ್ಟಿಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳು ಅಬಕಾರಿ ರಕ್ಷಕರ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು ಚೆಕ್‌ ಮಾಡಲು ಕೆಪಿಎಸ್‌ಸಿ ವೆಬ್‌ಸೈಟ್‌ www.kpsc.kar.nic.in ಗೆ ಭೇಟಿ ನೀಡಿ. ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿರಿ.

ಕೆಪಿಎಸ್‌ಸಿ ಸದರಿ ಹುದ್ದೆಗಳಿಗೆ ಪರಿಗಣಿಸಲಾದ ವರ್ಗಾವಾರು ಕಟ್‌ ಆಫ್‌ ಅಂಕಗಳನ್ನು ಸಹ ಬಿಡುಗಡೆ ಮಾಡಿದ್ದು, ಚೆಕ್‌ ಮಾಡಲು ಲಿಂಕ್ ಈ ಕೆಳಗಿನಂತಿದೆ.

952 Excise Guard Revised Final Selection list

952 Excise Guard Revised Final Selection list’s cut off marks

Leave a Reply

Your email address will not be published. Required fields are marked *