Free Coaching 2023 Apply Online 2023

Free Coaching 2023 Apply Online 2023 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಯುಪಿಎಸ್‌ಸಿ, ಕೆಎಎಸ್‌, ಬ್ಯಾಂಕಿಂಗ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು, ಇದೀಗ ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗೆ ನವೆಂಬರ್ 29 ರವರೆಗೆ ಅವಕಾಶ ನೀಡಲಾಗಿದೆ.

Free Coaching 2023 Apply Online 2023

ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಮತ್ತು ವಸತಿಯುತ ಸಂಯೋಜಿತ ಪದವಿಯೊಂದಿಗೆ ಯುಪಿಎಸ್‌ಸಿ / ಕೆಎಎಸ್ ತರಬೇತಿಗೆ ನಿಯೋಜಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಯುಪಿಎಸ್‌ಸಿ, ಕೆಎಎಸ್ ಪರೀಕ್ಷೆಗಳು, ಬ್ಯಾಂಕಿಂಗ್, ಎಸ್‌ಎಸ್‌ಸಿ, ಆರ್ಆರ್‌ಬಿ, ಗ್ರೂಪ್ ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಇಲಾಖೆಯಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-11-2023

ಉಚಿತ ಸ್ಪರ್ಧಾತ್ಮಕ ಪರೀಕ್ಷೆ ಕೋಚಿಂಗ್ ಪಡೆಯಲು ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಶಿಷ್ಯವೇತನವನ್ನು, ಅವರು ಕೋಚಿಂಗ್ ಪಡೆಯುವ ನಗರ/ ಸಿಟಿಗಳ ಆಧಾರದಲ್ಲಿ ಕೆಳಗಿನಂತೆ ನೀಡಲಾಗುತ್ತದೆ.

  • ದೆಹಲಿ : 10,000
  • ಹೈದೆರಾಬಾದ್ : ರೂ.8000
  • ಕರ್ನಾಟಕ : ರೂ.6000
  • ಚೆನ್ನೈ : ರೂ.5000

ಯಾವ ಸ್ಪರ್ಧಾತ್ಮಕ ಪರೀಕ್ಷೆಗೆ ಎಷ್ಟು ತಿಂಗಳು ತರಬೇತಿ ಸೌಲಭ್ಯ ನೀಡಲಾಗುತ್ತದೆ ಎಂದು ಕೆಳಗಿನಂತೆ ತಿಳಿಸಲಾಗಿದೆ.

  • ಯುಪಿಎಸ್‌ಸಿ : 9 ತಿಂಗಳು
  • ಕೆಎಎಸ್ : 7 ತಿಂಗಳು
  • ಎಸ್‌ಎಸ್‌ಸಿ : 3 ತಿಂಗಳು
  • ಬ್ಯಾಂಕಿಂಗ್:3 ತಿಂಗಳು
  • ಆರ್‌ಆರ್‌ಬಿ: 3 ತಿಂಗಳು
  • ಗ್ರೂಪ್‌ ಸಿ: 3 ತಿಂಗಳು

ಅರ್ಜಿ ಸಲ್ಲಿಸಲು ಬಯಸುವವರಿಗೆ ಮಾರ್ಗಸೂಚಿಗಳು

  • ಅಭ್ಯರ್ಥಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿರಬೇಕು.
  • ಕೆಇಎ ನಡೆಸುವ ಸಿಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಸೆಲೆಕ್ಟ್‌ ಮಾಡಲಾಗುತ್ತದೆ.
  • ಈ ಹಿಂದೆ ಇದೇ ಇಲಾಖೆ ಸೌಲಭ್ಯ ಪಡೆದವರು ಮತ್ತೆ ಅರ್ಜಿ ಹಾಕಲು ಅರ್ಹರಲ್ಲ.
  • ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.
  • ಸಾಮಾನ್ಯ ಪ್ರವೇಶ ಪರೀಕ್ಷಾ ದಿನಾಂಕವನ್ನು ಇಲಾಖಾ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ.
  • ತರಬೇತಿಯನ್ನು ದೆಹಲಿ, ಹೈದೆರಾಬಾದ್, ಬೆಂಗಳೂರು, ಚೆನ್ನೈ ಮೊದಲಾದ ನಗರಗಳಲ್ಲಿರುವ ಪ್ರತಿಷ್ಠಿತ ತರಬೇತಿ ಸಂಸ್ಥೆಯಿಂದ ಕೊಡಿಸಲಾಗುತ್ತದೆ.

ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ ವಿಳಾಸ : www.sw.kar.nic.in

Leave a Reply

Your email address will not be published. Required fields are marked *