ಅಂಚೆ ಇಲಾಖೆಯಿಂದ ಪೋಸ್ಟ್‌ಮ್ಯಾನ್‌ ಹುದ್ದೆಗಳಿಗೆ 4ನೇ ಆಯ್ಕೆಪಟ್ಟಿ ಬಿಡುಗಡೆ, GDS 4th Selection List

GDS 4th Selection List : ಇಂಡಿಯನ್ ಪೋಸ್ಟಲ್ ಡಿಪಾರ್ಟ್‌ಮೆಂಟ್ ಎಲ್ಲ ರಾಜ್ಯಗಳ ಗ್ರಾಮೀಣ ಡಾಕ್‌ ಸೇವಕ ಹುದ್ದೆಗಳ ನೇಮಕಾತಿ ಸಂಬಂಧ, ಜುಲೈ ಸೆಷನ್‌ ಹುದ್ದೆಗಳಿಗೆ 4ನೇ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ. ಚೆಕ್‌ ಮಾಡಲು ಲಿಂಕ್, ವಿಧಾನ ಇಲ್ಲಿದೆ.

GDS 4th Selection List
ಹೈಲೈಟ್ಸ್‌:
  • ಜಿಡಿಎಸ್‌ 4ನೇ ಆಯ್ಕೆಪಟ್ಟಿ ಪ್ರಕಟ.
  • ಚೆಕ್‌ ಮಾಡಲು ಲಿಂಕ್, ವಿಧಾನ ಇಲ್ಲಿದೆ.
  • 30,041 ಜಿಡಿಎಸ್ ನೇಮಕಾತಿ ಫಲಿತಾಂಶ.

2023ನೇ ಸಾಲಿನ ಜುಲೈ ನಲ್ಲಿ ಅಧಿಸೂಚಿಸಿ, ನೇಮಕಾತಿ ಪ್ರಕ್ರಿಯೆ ನಡೆಸಲಾದ ಗ್ರಾಮೀಣ ಡಾಕ್‌ ಸೇವಕ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ಇದೀಗ ಅಂಚೆ ಇಲಾಖೆಯು ನಾಲ್ಕನೇ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ. ರಾಜ್ಯಾವಾರು ಲಿಸ್ಟ್‌ ಅನ್ನು ಅಭ್ಯರ್ಥಿಗಳು ಚೆಕ್‌ ಮಾಡಬಹುದಾಗಿದೆ.

ಅಂಚೆ ಇಲಾಖೆಯು ಕಳೆದ ಜುಲೈನಲ್ಲಿ ಅಧಿಸೂಚನೆ ಹೊರಡಿಸಿ ಗ್ರಾಮೀಣ ಡಾಕ್ ಸೇವಕ್, ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್‌ ಸೇರಿದಂತೆ ಒಟ್ಟು 30,041 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಈವರೆಗೆ ಮೂರು ಆಯ್ಕೆಪಟ್ಟಿಗಳನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಖಾಲಿ ಉಳಿದ ಹುದ್ದೆಗಳಿಗೆ 4ನೇ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಚೆಕ್‌ ಮಾಡುವ ವಿಧಾನವನ್ನು ಕೆಳಗಿನಂತೆಗೆ ತಿಳಿಸಲಾಗಿದೆ.

ಆಯ್ಕೆಪಟ್ಟಿಯಲ್ಲಿ ಹೆಸರು ಪಡೆದ ಅಭ್ಯರ್ಥಿಗಳು ದಿನಾಂಕ 25-11-2023 ರೊಳಗೆ ತಮ್ಮ ಅಂಚೆ ವೃತ್ತದ ಡಿವಿಷನಲ್ ಹೆಡ್‌ ರವರ ಕಚೇರಿಗೆ ಭೇಟಿ ನೀಡಿ, ಮೂಲ ದಾಖಲೆಗಳ ಪರಿಶೀಲನೆ ಕಾರ್ಯ ಮುಗಿಸಿಕೊಳ್ಳಬೇಕು. ನಂತರ ಆದೇಶ ಪತ್ರ ನೀಡಲಾಗುತ್ತದೆ.

ಪೋಸ್ಟ್‌ಮ್ಯಾನ್‌ 4ನೇ ಆಯ್ಕೆಪಟ್ಟಿ ಚೆಕ್‌ ಮಾಡುವುದು ಹೇಗೆ?
– ವೆಬ್‌ಸೈಟ್‌ ವಿಳಾಸ https://indiapostgdsonline.gov.in/# ಕ್ಕೆ ಭೇಟಿ ನೀಡಿ.
– ಅಂಚೆ ನೇಮಕಾತಿ ಪ್ರಕ್ರಿಯೆಗಳ ವೆಬ್‌ಪೇಜ್‌ ತೆರೆಯುತ್ತದೆ.
– ವೆಬ್‌ಪೇಜ್‌ ನಲ್ಲಿ ‘Candidates’s Corner’ ಎಂದಿರುವಲ್ಲಿ ಗಮನಿಸಿ.
– ‘GDS 2023 Schedule – II Shortlisted Candidates’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ನಂತರ ಭಾರತೀಯ ಅಂಚೆಯ ಎಲ್ಲ ವೃತ್ತಗಳ ಲಿಸ್ಟ್‌ ಪ್ರದರ್ಶಿತವಾಗುತ್ತದೆ.
– ಅಭ್ಯರ್ಥಿಗಳ ತಮ್ಮ ರಾಜ್ಯದ ಲಿಂಕ್ ಕ್ಲಿಕ್ ಮಾಡಿ. ಅಂಚೆ ವೃತ್ತದ ವೆಬ್‌ ತೆರೆಯುತ್ತದೆ.
– ಈ ಹಂತದಲ್ಲಿ ತಮ್ಮ ಜಿಲ್ಲೆ ಆಯ್ಕೆ ಮಾಡಿ, ಲಿಸ್ಟ್‌ ಚೆಕ್‌ ಮಾಡಿಕೊಳ್ಳಿ.
– ಪಿಡಿಎಫ್‌ ಫೈಲ್‌ ಓಪನ್ ಆಗುತ್ತದೆ. ಹೆಸರು ಇರುವ ಬಗ್ಗೆ ಪರಿಶೀಲಿಸಿಕೊಳ್ಳಿ.

ಅಂಚೆ ಇಲಾಖೆ ಹುದ್ದೆಗಳ ವೇತನ ಮಾಹಿತಿ
ಬ್ರ್ಯಾಂಚ್‌ ಪೋಸ್ಟ್‌ಮಾಸ್ಟರ್‌ (BPM) : Rs.12,000-29,380 ವರೆಗೆ.
ಅಸಿಸ್ಟಂಟ್ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್ (ABPM) : Rs.10,000-24,470.
ಡಾಕ್ ಸೇವಕ್‌ : Rs.10,000-24,470.

Important Links
4ನೇ ಆಯ್ಕೆಪಟ್ಟಿ Click Here
Join Telegram ChannelClick Here
Join WhatsApp ChannelClick Here

Leave a Reply

Your email address will not be published. Required fields are marked *