Mysuru VA Recruitment ಮೈಸೂರು ಜಿಲ್ಲೆ ಗ್ರಾಮಲೆಕ್ಕಿಗರ ನೇಮಕ: ದಾಖಲೆ ಪರಿಶೀಲನೆಗೆ ಆಯ್ಕೆಪಟ್ಟಿ, ದಿನಾಂಕ ಪ್ರಕಟ

Mysuru VA Recruitment 2019 Provisional List: 2019-20ನೇ ಸಾಲಿನಲ್ಲಿನ ಅಧಿಸೂಚಿಸಿದ್ದ ಮೈಸೂರು ಗ್ರಾಮಲೆಕ್ಕಿಗರ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಹಾಗೂ ಡಾಕ್ಯುಮೆಂಟ್ ವೆರಿಫಿಕೇಶನ್‌ ಲಿಸ್ಟ್‌ ಅನ್ನು ಬಿಡುಗಡೆ ಮಾಡಲಾಗಿದೆ.

www.udyogmahiti.com

Mysuru VA Recruitment

2019-20ನೇ ಸಾಲಿನಲ್ಲಿ ಮೈಸೂರು ಜಿಲ್ಲಾ ಕಂದಾಯ ಘಟಕದ ಗ್ರಾಮಲೆಕ್ಕಿಗರ ನೇಮಕಾತಿ ಸಂಬಂಧ ಆಯ್ಕೆ ಪಟ್ಟಿಯಲ್ಲಿನ ಅರ್ಹ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆಗೆ ದಿನಾಂಕ ನಿಗದಿಪಡಿಸಿ, ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ 10 ಅಭ್ಯರ್ಥಿಗಳ ಹೆಸರನ್ನು ಮಾತ್ರ ನೀಡಿದ್ದು, ಆಗಸ್ಟ್‌ 10 ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 05-30 ಗಂಟೆವರೆಗೆ ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಸೂಚಿಸಲಾಗಿದೆ.

teligram

ಮೈಸೂರು ಜಿಲ್ಲಾ ಕಂದಾಯ ಘಟಕದ ವಿವಿಧ ತಾಲ್ಲೂಕು ಕಛೇರಿಗಳಲ್ಲಿ ಗ್ರೂಪ್‌ ಸಿ ವೃಂದದ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ, ಅರ್ಹ ಅಭ್ಯರ್ಥಿಗಳ ಆಯ್ಕೆಪಟ್ಟಿಯನ್ನು ವೆಬ್‌ಸೈಟ್‌ https://mysore.nic.in ನಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿದೆ.

BMTC Free Driving Training 2022

ಅಧಿಕೃತ ಜ್ಞಾಪನ ಸಮ ಸಂಖ್ಯೆ ದಿನಾಂಕ:21/07/2022 ರಂದು ಬಿಡುಗಡೆ ಮಾಡಿದ ಎರಡನೇ ಕಾಯ್ದಿರಿಸಿದ ಪಟ್ಟಿಯಲ್ಲಿನ 10 ಅಭ್ಯರ್ಥಿಗಳು ನಿಗಧಿಪಡಿಸಿದ ಎಲ್ಲಾ ಮೂಲ ದಾಖಲಾತಿಗಳನ್ನು ನಿಗಧಿತ ಸ್ಥಳಕ್ಕೆ ಆಗಸ್ಟ್‌ 10 ರಂದು ಕಛೇರಿ ವೇಳೆಯಲ್ಲಿ ತಪ್ಪದೇ ಸಲ್ಲಿಸಬೇಕು. ಒಂದು ವೇಳೆಯಲ್ಲಿ ಹಾಜರಾಗದೇ ಇರುವ ಅಭ್ಯರ್ಥಿಗಳ ಅರ್ಜಿಗಳನ್ನು ಆಯ್ಕೆಪಟ್ಟಿಯಿಂದ ಕೈಬಿಡಲಾಗುವುದು ಎಂದು ಸೂಚಿಸಲಾಗಿದೆ.

ಮೂಲ ದಾಖಲೆಗಳ ಪರಿಶೀಲನೆ ದಿನಾಂಕ : ಆಗಸ್ಟ್‌ 10 ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 05-30 ಗಂಟೆವರೆಗೆ.

ದಾಖಲೆಗಳನ್ನು ಸಲ್ಲಿಸಬೇಕಾದ ವಿಳಾಸ : ಸದಸ್ಯ ಕಾರ್ಯದರ್ಶಿ, ಆಯ್ಕೆ ಪ್ರಾಧಿಕಾರ ಹಾಗೂ ನೇಮಕಾತಿ ಪ್ರಾಧಿಕಾರ ಮತ್ತು ಅಪರ ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ, ಮೈಸೂರು.

VA Selection List for Document Verification List
teligram

ಅಗತ್ಯ ದಾಖಲೆಗಳು

  1. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
  2. ಜನ್ಮ ದಿನಾಂಕ ಪ್ರಮಾಣ ಪತ್ರ
  3. ದ್ವಿತೀಯ ಪಿಯುಸಿ ಪ್ರಮಾಣ ಪತ್ರ
  4. ಜಾತಿ ಪ್ರಮಾಣ ಪತ್ರ
  5. ಮೀಸಲಾತಿ ಕೋರಿದ್ದಲ್ಲಿ ಪ್ರಮಾಣ ಪತ್ರ
  6. ಮಾಜಿ ಸೈನಿಕರಾಗಿದ್ದಲ್ಲಿ ಪ್ರಮಾಣ ಪತ್ರ.
  7. ಅಂಗವಿಕಲರಾಗಿದ್ದಲ್ಲಿ ಪ್ರಮಾಣ ಪತ್ರ
  8. ಅರ್ಜಿಯ ಒಂದು ಪ್ರತಿ
  9. ಆಧಾರ್ ಕಾರ್ಡ್‌
  10. ಪಾಸ್‌ಪೋರ್ಟ್‌ ಅಳತೆಯ ಎರಡು ಭಾವಚಿತ್ರ

Leave a Reply

Your email address will not be published. Required fields are marked *