Karnataka Govt Jobs: ಮುಂದಿನ ವರ್ಷ 20000 ಶಿಕ್ಷಕರ ನೇರ ನೇಮಕಾತಿ, ವಸತಿ ಶಾಲಾ, ಕಾಲೇಜುಗಳ 808 ಹುದ್ದೆ ಭರ್ತಿಗೆ ಗ್ರೀನ್ ಸಿಗ್ನಲ್

ಶೀಘ್ರದಲ್ಲಿಯೇ ಅಗತ್ಯ 808 ಹುದ್ದೆಗಳನ್ನು ವಸತಿ ಶಾಲೆಗಳಲ್ಲಿ ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮೋದನೆ ನೀಡಿದೆ. ಅಲ್ಲದೇ ಮುಂದಿನ ವರ್ಷದ ಅಂತ್ಯದೊಳಗೆ 20 ಸಾವಿರ ಹೊಸ ಶಿಕ್ಷಕರ ಭರ್ತಿಗೆ ಸಿಎಂ ಜತೆ ಚರ್ಚೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.

13 ಸಾವಿರಕ್ಕೂ ಹೆಚ್ಚಿನ ಶಿಕ್ಷಣ ಇಲಾಖೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಹುದ್ದೆಗಳ ನೇಮಕಾತಿಗೆ ಸಂಬಂಧ ಕಳೆದೆರಡು ದಿನಗಳ ಹಿಂದಷ್ಟೇ ಹೈಕೋರ್ಟ್‌ ಗುಡ್‌ ನ್ಯೂಸ್‌ ನೀಡಿತ್ತು. ಇದರ ಹಿಂದೆಯೇ ಈಗ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯಿಂದ ಮತ್ತಷ್ಟು ಸಿಹಿ ಸುದ್ದಿಗಳು ಉದ್ಯೋಗ ಆಕಾಂಕ್ಷಿಗಳಿಗೆ ಕೇಳಿಬಂದಿವೆ. ಅವುಗಳ ವಿವರ ಕೆಳಗಿನಂತಿದೆ ನೋಡಿ.

ಮುಂದಿನ ವರ್ಷದಲ್ಲಿ 20 ಸಾವಿರ ನೂತನ ಶಿಕ್ಷಕರ ನೇಮಕ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದು, ಈ ಕುರಿತು ಸಿಎಂ ಸಿದ್ಧರಾಮಯ್ಯ ಜತೆ ಚರ್ಚೆ ನಡೆಸಲಾಗುವುದು. ಪ್ರಸ್ತುತ ಶಿಕ್ಷಣ ಇಲಾಖೆಯಡಿ 40 ಸಾವಿರ ಶಿಕ್ಷಕರ ಕೊರತೆ ಇದ್ದು, ಸದ್ಯ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಕಾರ್ಯಭಾರ ನಡೆಸಲಾಗುತ್ತಿದೆ. ಬರುವ ವರ್ಷದಲ್ಲಿಯೇ 20 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಸಿ, 2024 ರ ಅಂತ್ಯದೊಳಗೆ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಲಾಗುವುದು ಎಂದು ಸಚಿವ ಎಸ್‌ ಮಧು ಬಂಗಾರಪ್ಪ ಹೇಳಿದ್ದಾರೆ. ಮುಂದುವರೆದು, ಮುಂದಿನ 3 ವರ್ಷದಲ್ಲಿ 3 ಸಾವಿರ ಕೆಪಿಎಸ್‌ ಶಾಲೆ ಆರಂಭಿಸುತ್ತೇವೆ. ಕೆಪಿಎಸ್‌ ಶಾಲೆಗೆ ಉಚಿತ ಬಸ್ ಸೇವೆ ಕೂಡ ಪ್ರಾರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ವಸತಿ ಶಾಲೆಗಳ 808 ಶಿಕ್ಷಕರ ಭರ್ತಿಗೆ ಅನುಮೋದನೆ
ಮೊರಾರ್ಜಿ ದೇಸಾಯಿ ವಸತಿ ಶಾಲೆ ಉನ್ನತೀಕರಣ, ವಿದ್ಯಾರ್ಥಿಗಳ ದಾಖಲಾತಿ ದ್ವಿಗುಣ, ಹೊಸದಾಗಿ 10 ವಸತಿ ಶಾಲೆ ಆರಂಭ ತೀರ್ಮಾನ ಹಿನ್ನೆಲೆಯಲ್ಲಿ 708 ಹುದ್ದೆ ಹೊರಗುತ್ತಿಗೆ, 100 ಕಾಯಂ ಸೇರಿ 808 ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದನೆ ನೀಡಿದೆ. ಈ ಕುರಿತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಮಾಹಿತಿ ನೀಡಿದ್ದಾರೆ.

808 ಹುದ್ದೆಗಳ ಪೈಕಿ 10 ಪ್ರಿನ್ಸಿಪಾಲ್, 248 ಉಪನ್ಯಾಸಕರು, 60 ಶಿಕ್ಷಕರ ಹುದ್ದೆ ಇವೆ. 10 ಹೊಸ ಮೊರಾರ್ಜಿ ದೇಸಾಯಿ ಶಾಲೆಗೆ 100 ಹುದ್ದೆ ಕೆಪಿಎಸ್‌ಸಿ ಮೂಲಕ ನೇಮಕಕ್ಕೂ ಹಣಕಾಸು ಇಲಾಖೆ ಅನುಮತಿ ನೀಡಿದೆ ಎಂದಿದ್ದಾರೆ.

ನಮ್ಮ WhatsApp Group ಅಲ್ಲಿ ಸೇರಲು 9019 899 822 ಈ ನಂಬರೆ Join ಅಂತಾ ಮೆಸೇಜು ಮಾಡಿ, ನಂತರ ನಿಮ್ಮ ನಂಬರೆಗೆ ಗ್ರೂಪ್ ಲಿಂಕ ಕಳೆಸಲಾಗುತ್ತದೆ ಆ ಲಿಂಕ ಮೂಲಕ ನಿವು ಗ್ರೂಪಗೆ ಸೇರಿಕೊಳ್ಳಿ

Leave a Reply

Your email address will not be published. Required fields are marked *