KPSC PDO, SDA, Secretary Notification Date : ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಡಿಪಾರ್ಟ್‌ಮೆಂಟ್ ಅಧೀನದಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಪೈಕಿ 700 ಕ್ಕೂ ಹೆಚ್ಚು ಹುದ್ದೆಗೆ ಇನ್ನೊಂದು ತಿಂಗಳೊಳಗಾಗಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿ, ನೇಮಕ ಪ್ರಕ್ರಿಯೆ ನಡೆಸಲಿದೆ.
ಹೈಲೈಟ್ಸ್:
- ಪಂಚಾಯತ್ ರಾಜ್ ಇಲಾಖೆಯಡಿ ಭರ್ಜರಿ ಉದ್ಯೋಗಾವಕಾಶ.
- 733 ವಿವಿಧ ಹುದ್ದೆಗೆ ನೋಟಿಫಿಕೇಶನ್ ಶೀಘ್ರ.
- ಕೆಪಿಎಸ್‌ಸಿ ಮೂಲಕ ನೇಮಕ ಪ್ರಕ್ರಿಯೆ.

ಕರ್ನಾಟಕ ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ರಾಜ್ಯದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಖಾಲಿ ಇರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸೇರಿ ಒಟ್ಟು 733 ಹುದ್ದೆಗಳ ಭರ್ತಿಗೆ ಅಧಿಸೂಚಿಸುವ ಕುರಿತು ಮಾಹಿತಿ ನೀಡಿದೆ.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಖಾಲಿ ಇರುವ ಒಟ್ಟು ಹುದ್ದೆಗಳ ಪೈಕಿ, ಪ್ರಸ್ತುತ 733 ಹುದ್ದೆಗಳಿಗೆ ಮಾತ್ರ ಅಧಿಸೂಚನೆಯನ್ನು ನವೆಂಬರ್ ಅಂತ್ಯಕ್ಕೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಅಧಿಕೃತವಾಗಿ ಹೊರಡಿಸಲಾಗುತ್ತದೆ ಎಂದು ಕರ್ನಾಟಕ ಡಿಐಪಿಆರ್ ಇಲಾಖೆ ತಿಳಿಸಿದೆ.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳ ಭರ್ತಿಗೆ ಈಗಾಗಲೇ ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೃಹತ್ ಸಂಖ್ಯೆಯಲ್ಲಿ ಖಾಲಿ ಹುದ್ದೆಗಳು ಇರುವುದರಿಂದ ಹಾಲಿ ಇರುವ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಹುದ್ದೆ ಭರ್ತಿಯಾದರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲಿರುವ ಹುದ್ದೆಗಳ ವಿವರ
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ): 150
ಕಾರ್ಯದರ್ಶಿ ಗ್ರೇಡ್ 1 : 135
ಕಾರ್ಯದರ್ಶಿ ಗ್ರೇಡ್ 2 : 343
ದ್ವಿತೀಯ ದರ್ಜೆ ಲೆಕ್ಕ ಸಹಾಯಕ : 105
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೇಲಿನ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯಿಂದ ಸಹಮತಿ ಪಡೆದು, ಮೀಸಲಾತಿ ವಾರು ಎಲ್ಲ ಸಿದ್ಧತೆ ಮಾಡಿಕೊಂಡು ನಂತರ ಕೆಪಿಎಸ್‌ಸಿಗೆ ನೇಮಕಾತಿ ಪ್ರಕ್ರಿಯೆ ನಡೆಸಲು ಪ್ರಸ್ತಾವನೆ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಶೀಘ್ರದಲ್ಲಿ ಅನುಮತಿ ನೀಡಿ, ನವೆಂಬರ್ ಅಂತ್ಯದೊಳಗೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಅಧಿಕೃತ ನೋಟಿಫಿಕೇಶನ್ ಜಾರಿ ಮಾಡುವ ಅವಕಾಶಗಳಿವೆ.
ಇಲಾಖೆಯಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳ ವಿವರ
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ): 660
ಕಾರ್ಯದರ್ಶಿ ಗ್ರೇಡ್ 1 : 350
ಕಾರ್ಯದರ್ಶಿ ಗ್ರೇಡ್ 2 : 415
ಹುದ್ದೆವಾರು ವಿದ್ಯಾರ್ಹತೆ
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ): ಯಾವುದೇ ಪದವಿ.
ಕಾರ್ಯದರ್ಶಿ ಗ್ರೇಡ್ 1 : ದ್ವಿತೀಯ ಪಿಯುಸಿ.
ಕಾರ್ಯದರ್ಶಿ ಗ್ರೇಡ್ 2 : ದ್ವಿತೀಯ ಪಿಯುಸಿ.
ದ್ವಿತೀಯ ದರ್ಜೆ ಲೆಕ್ಕ ಸಹಾಯಕ : ದ್ವಿತೀಯ ಪಿಯುಸಿ.
Important Links
Official Website | Click Here |
Join Telegram Channel | Click Here |
Join WhatsApp Channel | Click Here |
