ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ 1000 ಸಿಬ್ಬಂದಿಗಳ ನೇಮಕ ಶೀಘ್ರ, KSISF Recruitment 2023, more info

KSISF Recruitment 2023ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಶೀಘ್ರದಲ್ಲೇ 1000 ಸಿಬ್ಬಂದಿಗಳನ್ನು ನೇಮಕ ಮಾಡುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ಮಾಹಿತಿಯೊಂದು ಈಗ ದೊರೆತಿದೆ.

KSISF Recruitment 2023

2023-24ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 426 ರಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ಇನ್ನಷ್ಟು ಬಲಪಡಿಸಲು 1000 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಘೋಷಿಸಲಾಗಿತ್ತು. ಇದನ್ನು ಇದೀಗ ಪರಿಶೀಲಿಸಿ ಕೂಡಲೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲು ನಿರ್ದೇಶನವಾಗಿದೆ.

ರೇಷ್ಮೆ ಇಲಾಖೆ ನೇಮಕಾತಿ Central Silk Board Recruitment 2023

KSISF Recruitment 2023 ಈ ಹಿನ್ನೆಲೆಯಲ್ಲಿ ಕೆಎಸ್‌ಐಎಸ್‌ಎಫ್‌ ಘಟಕದಲ್ಲಿ 1000 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧ, ಪ್ರಸ್ತಾವನೆಯನ್ನು ಪರಿಶೀಲಿಸಿ ಮರು ಟಪಾಲಿನಲ್ಲಿ ಕಳುಹಿಸಿ ಕೊಡಬೇಕು ಎಂದು ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್‌ ಪೊಲೀಸ್ ರವರ ಪರವಾಗಿ ಆಡಳಿತ ವಿಭಾಗದ ಎಡಿಜಿಪಿ ಉಮೇಶ್‌ ಕುಮಾರ್ , ಐಪಿಎಸ್‌ ರವರು ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಈ ಪರಿಶೀಲನೆ ನಡೆದು ಒಂದು ವೇಳೆ ಪ್ರಸ್ತಾವನೆಗೆ ಸರ್ಕಾರ ಒಪ್ಪಿದಲ್ಲಿ / ಆರ್ಥಿಕ ಇಲಾಖೆ ಅನುಮತಿ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಅಧಿಸೂಚನೆ ಬಿಡುಗಡೆ ಆಗುವ ಸಾಧ್ಯತೆಗಳಿವೆ.

KSISF Recruitment 2023 ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಭರ್ತಿ ಮಾಡಲು ಉದ್ದೇಶಿಸಲಾಗಿರುವ 1000 ಸಿಬ್ಬಂದಿಗಳ ಪೈಕಿ ಯಾವೆಲ್ಲ ಹುದ್ದೆಗಳು / ಎಷ್ಟು ಇರುತ್ತವೆ ಎಂದು ಹೇಳಲಾಗಿಲ್ಲ. ಆದರೆ ಸಾಮಾನ್ಯವಾಗಿ ಕಾನ್ಸ್‌ಟೇಬಲ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

Karnataka Food Department Recruitment 2023

ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಸದರಿ ಹುದ್ದೆಗಳಿಗೆ ಸೇರಬೇಕು ಎಂದರೆ ಸ್ಪರ್ಧಾತ್ಮಕ ಪರೀಕ್ಷೆಗೆ ಇಂದಿನಿಂದಲೇ ತಯಾರಿಯನ್ನು ಆರಂಭಿಸಿ.

ಕೆಎಸ್‌ಐಎಸ್‌ಎಫ್‌ ನಲ್ಲಿ ಭರ್ತಿ ಮಾಡುವ ಎಸ್‌ಐ ಹುದ್ದೆಗಳಿಗೆ ಹಾಗೂ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಸಹಿಷ್ಣುತ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಿ, ಅರ್ಹಗೊಂಡ ಅಭ್ಯರ್ಥಿಗಳಿಗೆ ಎಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಕಾನ್ಸ್‌ಟೇಬಲ್‌ ಹುದ್ದೆಗೆ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಎರಡು ಹುದ್ದೆಗಳಿಗೂ ವಯಸ್ಸಿನ ಅರ್ಹತೆ ಬೇರೆ ಬೇರೆ ಇರುತ್ತದೆ.

teligram

ನಮ್ಮ WhatsApp Group ಅಲ್ಲಿ ಸೇರಲು 9019 899 822 ಈ ನಂಬರೆ Join ಅಂತಾ ಮೆಸೇಜು ಮಾಡಿ, ನಂತರ ನಿಮ್ಮ ನಂಬರೆಗೆ ಗ್ರೂಪ್ ಲಿಂಕ ಕಳೆಸಲಾಗುತ್ತದೆ ಆ ಲಿಂಕ ಮೂಲಕ ನಿವು ಗ್ರೂಪಗೆ ಸೇರಿಕೊಳ್ಳಿ

Leave a Reply

Your email address will not be published. Required fields are marked *