rdwsd karnataka recruitment 2023| ಗ್ರಾಮೀಣ ಕುಡಿಯುವ ನೀರು ಇಲಾಖೆಯಲ್ಲಿ 155 ವಿವಿಧ ಹುದ್ದೆ ನೇಮಕ: 50 ರಿಂದ 75 ಸಾವಿರವರೆಗೆ ವೇತನ

rdwsd karnataka recruitment 2023: ರಾಜ್ಯ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಇಲಾಖೆಯು ಜಿಲ್ಲಾ ಕೇಂದ್ರಗಳಲ್ಲಿ ಅಗತ್ಯ ಇರುವ ವಿವಿಧ ವಿಭಾಗದ ಸಲಹೆಗಾರರು ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ಓದಿಕೊಂಡು ಆನ್‌ಲೈನ್‌ ಮೂಲಕ ಅಪ್ಲಿಕೇಶನ್‌ ಸಲ್ಲಿಸಿ.

rdwsd karnataka recruitment 2023

ಕರ್ನಾಟಕ ಸರ್ಕಾರ ಅಧೀನದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಜಿಲ್ಲಾ ಟೆಕ್ನಿಕಲ್ ಸಪೋರ್ಟ್ ಯುನಿಟ್‌ಗಳಿಗೆ ಈ ಕೆಳಗಿನ ವಿವಿಧ ಹುದ್ದೆಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 155 ಹುದ್ದೆಗಳಿದ್ದು, ಮಾಸಿಕ ರೂ.50,000 ದಿಂದ 75,000 ವರೆಗೆ ವೇತನ ನೀಡಲಾಗುತ್ತದೆ. ಆಸಕ್ತರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ

  1. ಖರೀದಿ / ಸಂಗ್ರಹಣೆ ಸಲಹೆಗಾರರು : 31
  2. ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಲಹೆಗಾರರು: 31
  3. ಪರಿಸರ ಸಲಹೆಗಾರರು : 31
  4. ಸಾಮಾಜಿಕ ಅಭಿವೃದ್ಧಿ ಸಲಹೆಗಾರರು : 31
  5. ಹಣಕಾಸು ಸಲಹೆಗಾರರು : 31

ವೇತನ ಶ್ರೇಣಿ : ರೂ.50,000 – 75,000.

ಹುದ್ದೆವಾರು ವಿದ್ಯಾರ್ಹತೆ

ಖರೀದಿ / ಸಂಗ್ರಹಣೆ ಸಲಹೆಗಾರರು : ಬಿಇ / ಬಿ.ಟೆಕ್ ಜತೆಗೆ ಕನಿಷ್ಠ 5 ವರ್ಷ ಕಾರ್ಯಾನುಭವ.

ಮೇಲ್ಚಿಚಾರಣೆ ಮತ್ತು ಮೌಲ್ಯಮಾಪನ ಸಲಹೆಗಾರರು: ಬಿಸಿಎ / ಬಿಇ ಪಾಸ್ ಜತೆಗೆ ಕನಿಷ್ಠ 5 ವರ್ಷ ಕಾರ್ಯಾನುಭವ.

ಪರಿಸರ ಸಲಹೆಗಾರರು : ಬಿಇ / ಬಿ.ಟೆಕ್/ ಎಂ.ಟೆಕ್ ಪಾಸ್‌ ಜತೆಗೆ ಕನಿಷ್ಠ 5 ವರ್ಷ ಕಾರ್ಯಾನುಭವ.

ಸಾಮಾಜಿಕ ಅಭಿವೃದ್ಧಿ ಸಲಹೆಗಾರರು : ಎಂಎಸ್‌ಡಬ್ಲ್ಯೂ / ಎಂಎ / ಎಂಬಿಎ ಪಾಸ್‌ ಜತೆಗೆ ಕನಿಷ್ಠ 5 ವರ್ಷ ಅನುಭವ.

ಹಣಕಾಸು ಸಲಹೆಗಾರರು : ಎಂಬಿಎ (ಹಣಕಾಸು) / ಎಂ.ಕಾಂ ಪಾಸ್ ಜತೆಗೆ ಕನಿಷ್ಠ 5 ವರ್ಷ ಕಾರ್ಯಾನುಭವ.

ಗುತ್ತಿಗೆ ಹುದ್ದೆಯ ಅವಧಿ : ಆರಂಭದಲ್ಲಿ 2 ವರ್ಷಕ್ಕೆ ಹುದ್ದೆಗೆ ನಿಯೋಜನೆ ಮಾಡಿಕೊಳ್ಳಲಾಗುತ್ತದೆ. ಕಾರ್ಯದಕ್ಷತೆ ಇಷ್ಟವಾದಲ್ಲಿ ಪ್ರತಿ ವರ್ಷವು ಹುದ್ದೆಯ ಅವಧಿ ವಿಸ್ತರಣೆ ಮಾಡಲಾಗುತ್ತದೆ.

ವಯಸ್ಸಿನ ಅರ್ಹತೆ : ಅರ್ಜಿ ಸಲ್ಲಿಸುವವರು ಗರಿಷ್ಠ 45 ವರ್ಷ ವಯಸ್ಸು ಮೀರಿರಬಾರದು.

ಗ್ರಾಮ ಪಂಚಾಯತಿಯಲ್ಲಿ 5980 ಡೇಟಾ ಎಂಟ್ರಿ ಆಪರೇಟರ್ ನೇರ ನೇಮಕಾತಿ 2023,

ಅರ್ಜಿ ಸಲ್ಲಿಸುವ ವಿಧಾನ

  1. ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಓಪನ್ ಆಗುವ ವೆಬ್‌ಪುಟದಲ್ಲಿ ಕೇಳಲಾಗುವ ಮಾಹಿತಿಗಳನ್ನು ನೀಡಿರಿ.
  3. ಅಭ್ಯರ್ಥಿಗಳು ಕನಿಷ್ಠ 3 ಜಿಲ್ಲೆಯನ್ನು ಹುದ್ದೆಗೆ ಆಯ್ಕೆ ಮಾಡಬೇಕು.
  4. ವಿದ್ಯಾರ್ಹತೆ, ಕಾರ್ಯಾನುಭವ, ಖಾಯಂ ವಿಳಾಸ, ಸಂಪರ್ಕ ವಿಳಾಸಗಳನ್ನು ಸರಿಯಾಗಿ ನೀಡಿರಿ.
  5. ಅರ್ಜಿ ಸಲ್ಲಿಸಿದ ನಂತರ, ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದವರನ್ನು ವಿದ್ಯಾರ್ಹತೆ, ಅನುಭವದ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ. ಈ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆ / ಸಂದರ್ಶನಕ್ಕೆ ಹಾಜರಾಗಬೇಕಿರುತ್ತದೆ. ಈ ಕುರಿತು ಇಮೇಲ್‌ ಮೂಲಕ, ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04-11-2023

ಸೂಚನೆ : ಈ ಹುದ್ದೆಗಳು ಕನ್ಸಲ್‌ಟಂಟ್‌ -ಗುತ್ತಿಗೆ ಆಧಾರಿತವಾಗಿವೆ.

ಹುದ್ದೆಯ ಜವಾಬ್ದಾರಿಗಳು ಹಾಗೂ ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಬಯಸುವವರು ಕೆಳಗಿನ ಅಧಿಸೂಚನೆ ಪಿಡಿಎಫ್‌ ಫೈಲ್‌ ಮೇಲೆ ಕ್ಲಿಕ್ ಮಾಡಿ ಓದಿರಿ.

Notification-RDWSD-Karnataka-Various-Posts-2023

ನಮ್ಮ WhatsApp Group ಅಲ್ಲಿ ಸೇರಲು 9019 899 822 ಈ ನಂಬರೆ Join ಅಂತಾ ಮೆಸೇಜು ಮಾಡಿ, ನಂತರ ನಿಮ್ಮ ನಂಬರೆಗೆ ಗ್ರೂಪ್ ಲಿಂಕ ಕಳೆಸಲಾಗುತ್ತದೆ ಆ ಲಿಂಕ ಮೂಲಕ ನಿವು ಗ್ರೂಪಗೆ ಸೇರಿಕೊಳ್ಳಿ

teligram

Leave a Reply

Your email address will not be published. Required fields are marked *