RRB NTPC ಹುದ್ದೆಗಳ ನೇಮಕ: ಸಿಬಿಟಿ 1 ಫಲಿತಾಂಶ ದಿನಾಂಕ, ಸಿಬಿಟಿ 2 ವೇಳಾಪಟ್ಟಿ ಪ್ರಕಟ

RRB NTPC Result 2021: ರೈಲ್ವೆ ನೇಮಕಾತಿ ಮಂಡಳಿಯು ಎನ್‌ಟಿಪಿಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿಬಿಟಿ 1 ಫಲಿತಾಂಶ ದಿನಾಂಕ ಮತ್ತು ಸಿಬಿಟಿ 2 ವೇಳಾಪಟ್ಟಿ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದೆ.

RRB NTPC

ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆ ಸಂಖ್ಯೆ CEN 01/2019 ಯ ನಾನ್‌ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರಮುಖ ಪ್ರಕಟಣೆಯೊಂದನ್ನು ಇದೀಗ ಬಿಡುಗಡೆ ಮಾಡಿದೆ. ಎನ್‌ಟಿಪಿಸಿ ಹುದ್ದೆಗಳಿಗೆ ನಡೆಸಿದ್ದ ಸಿಬಿಟಿ 1 ಪರೀಕ್ಷೆ ಫಲಿತಾಂಶದ ಸಂಭಾವ್ಯ ದಿನಾಂಕ ಮತ್ತು ಸಿಬಿಟಿ 2 ಸಂಭಾವ್ಯ ವೇಳಾಪಟ್ಟಿ ಕುರಿತ ಪ್ರಕಟಣೆ ಇದಾಗಿದೆ.

ಆರ್‌ಆರ್‌ಬಿ ಎನ್‌ಟಿಪಿಸಿ ಸ್ಟೇಜ್ 1 ಕಂಪ್ಯೂಟರ್ ಬೇಸ್ಡ್‌ ಟೆಸ್ಟ್‌ (CBT-1) ಅನ್ನು 2020 ರ ಡಿಸೆಂಬರ್ 28 ರಿಂದ 2021 ರ ಜುಲೈ 31 ರವರೆಗೆ 7 ಹಂತಗಳಲ್ಲಿ ನಡೆಸಲಾಗಿತ್ತು. ಸದರಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಫಲಿತಾಂಶ ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿದ್ದು, ಆರ್‌ಆರ್‌ಬಿ’ಯು 2022 ರ ಜನವರಿ 15 ರೊಳಗೆ ಬಿಡುಗಡೆ ಮಾಡಲಿದೆ ಎಂದು ತಿಳಿಸಲಾಗಿದೆ.

ಸಿಬಿಟಿ-1 ನಲ್ಲಿ ಶಾರ್ಟ್‌ಲಿಸ್ಟ್‌ ಆದ ಅಭ್ಯರ್ಥಿಗಳಿಗೆ ಎನ್‌ಟಿಪಿಸಿ ಸಿಬಿಟಿ-2 ಪರೀಕ್ಷೆಯನ್ನು 2022 ರ ಫೆಬ್ರುವರಿ 14-18 ರವರೆಗೆ ನಡೆಸಲು ಉದ್ದೇಶಿಸಲಾಗಿದೆ. ಈ ಸಂಭಾವ್ಯ ವೇಳಾಪಟ್ಟಿಯು ಭಾರತ ಸರ್ಕಾರದ ಆದೇಶಗಳಿಗೆ, ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ ಎಂದು ಆರ್‌ಆರ್‌ಬಿ ಪ್ರಕಟಣೆಯಲ್ಲಿ ಹೇಳಿದೆ.

official website

Leave a Reply

Your email address will not be published. Required fields are marked *