Hassan Village Accountant Final Select List 2020 21: ಹಾಸನ ಜಿಲ್ಲಾ ಕಂದಾಯ ಇಲಾಖೆಯು 34 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಅಂತಿಮ ಆಯ್ಕೆಪಟ್ಟಿಯನ್ನು ಇದೀಗ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಚೆಕ್ ಮಾಡಲು ಲಿಂಕ್ ಇಲ್ಲಿ ನೀಡಲಾಗಿದೆ.
ಗ್ರಾಮಲೆಕ್ಕಿಗರ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಯವರ ಕಾರ್ಯಾಲಯ, ಹಾಸನ ಜಿಲ್ಲೆ ಇವರು ಜಿಲ್ಲೆಯ 2020ನೇ ಸಾಲಿನ 34 ಗ್ರಾಮಲೆಕ್ಕಿಗರ ನೇರ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು ಇದೀಗ ಪ್ರಕಟಿಸಿದ್ದಾರೆ
Karnataka forest guard exam key answer 2021
ನೇಮಕ ಪ್ರಾಧಿಕಾರವು ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ 1:10 ಅನುಪಾತದಲ್ಲಿ ಪರಿಶೀಲನಾ ಪಟ್ಟಿಯನ್ನು ತಯಾರಿಸಿ ಪ್ರಕಟಿಸಲಾಗಿತ್ತು. ಸದರಿ ಪರಿಶೀಲನಾ ಪಟ್ಟಿಯಂತೆ ದಿನಾಂಕ 05-06-2020 ರೊಳಗೆ ದಾಖಲಾತಿಗಳನ್ನು ಹಾಜರುಪಡಿಸಲು ಸೂಚಿಸಲಾಗಿತ್ತು. ನಂತರ ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ 03-07-2020, 02-11-2021 ರ ಅಧಿಸೂಚನೆಯಲ್ಲಿ 34 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು.
ತಾತ್ಕಾಲಿಕ ಆಯ್ಕೆಪಟ್ಟಿಗೆ ಒಟ್ಟು 10 ಅಭ್ಯರ್ಥಿಗಳ 18 ಆಕ್ಷೇಪಣಾ ಅರ್ಜಿಗಳನ್ನು ಸ್ವೀಕರಿಸಲಾಗಿ, ಪರಿಶೀಲಿಸಿದ್ದು, ಸದರಿಯವರಿಗೆ ಹಿಂಬರಹವನ್ನು ಪ್ರಾಧಿಕಾರ ನೀಡಿದೆ. ಪ್ರಸ್ತುತ ಅಂತಿಮ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ.
ಅಭ್ಯರ್ಥಿಗಳು ಅಂತಿಮ ಆಯ್ಕೆಪಟ್ಟಿ ಚೆಕ್ ಮಾಡಲು ಹಾಸನ ಜಿಲ್ಲೆಯ ಸರ್ಕಾರಿ ಅಧಿಕೃತ ವೆಬ್‌ಸೈಟ್ http://hassan.nic.in ಗೆ ಭೇಟಿ ನೀಡಿ ಚೆಕ್ ಮಾಡಿ. ಅಥವಾ ಈ ಕೆಳಗಿನ ಡೈರೆಕ್ಟ್ ಲಿಂಕ್ ಅನ್ನು ಕ್ಲಿಕ್ ಮಾಡಿ ಚೆಕ್ ಮಾಡಿರಿ.
Hassan Village Accountant Final Select List 2020 21
