SSC CGL 2020 Tier 1 Result: ಸ್ಟಾಫ್ ಸೆಲೆಕ್ಷನ್ ಕಮಿಷನ್ 2020 ನೇ ಸಾಲಿನ ಸಿಜಿಎಲ್ ಟೈಯರ್ 1 ಪರೀಕ್ಷೆಯ ಸರಿ ಉತ್ತರಗಳು ಮತ್ತು ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಿದೆ. ಚೆಕ್ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ಸಿಬ್ಬಂದಿ ನೇಮಕಾತಿ ಆಯೋಗವು, 2020ನೇ ಸಾಲಿನ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆ (ಟೈಯರ್ 1) ಯ ಅಂತಿಮ ಸರಿ ಉತ್ತರಗಳು ಮತ್ತು ಪ್ರಶ್ನೆಪತ್ರಿಕೆಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಸರಿ ಉತ್ತರಗಳೊಂದಿಗೆ ತಮ್ಮ ಪಲಿತಾಂಶ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಎಸ್‌ಎಸ್‌ಸಿ ಸಿಜಿಎಲ್ ಟೈಯರ್ 1 ಫಲಿತಾಂಶವನ್ನು ನವೆಂಬರ್ 26, 2021 ರಂದು ಬಿಡುಗಡೆ ಮಾಡಲಾಗಿತ್ತು. ಈ ಫಲಿತಾಂಶವನ್ನು ಅಂತಿಮ ಸರಿಯುತ್ತರಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಅಭ್ಯರ್ಥಿಗಳು ಒಮ್ಮೆ ಪರಿಶೀಲನೆ ಮಾಡಿಕೊಳ್ಳಬಹುದು.
ಎಸ್‌ಎಸ್‌ಸಿ ಸಿಜಿಎಲ್ ಟೈಯರ್ 1 ಪರೀಕ್ಷೆ ಬರೆದ ಅಭ್ಯರ್ಥಿಗಳು ಜನವರಿ 07, 2022 ರ ಸಂಜೆ 6 ಗಂಟೆವರೆಗೆ ಅಂತಿಮ ಸರಿಯುತ್ತರಗಳನ್ನು ಮತ್ತು ಪ್ರಶ್ನೆ ಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಇರುತ್ತದೆ.
SSC CGL 2020 ಸರಿ ಉತ್ತರಗಳು: ಮತ್ತು ಪ್ರಶ್ನೆ ಪತ್ರಿಕೆ ಚೆಕ್ ಮಾಡುವುದು ಹೇಗೆ?
1) ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್ ssc.nic.in ಗೆ ಭೇಟಿ ನೀಡಿ.
2) ಓಪನ್ ಆದ ಪೇಜ್‌ನಲ್ಲಿ ‘Combined Graduate Level Examination (Tier -1) 2020 : Uploading of Final Answer Keys along with Question Paper’ ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
3) ನಂತರ ಓಪನ್ ಆಗುವ ಪೇಜ್‌ನಲ್ಲಿ ರೋಲ್ ನಂಬರ್ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಬೇಕು.
3) ಸರಿ ಉತ್ತರಳೊಂದಿಗೆ ನಿಮ್ಮ ಪಲಿತಾಂಶ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಥವಾ ಆನ್ಲೈನ್‌ನಲ್ಲೇ ಚೆಕ್ ಮಾಡಿಕೊಳ್ಳಬಹುದು.
SSC CGL 2020- Final Answer Keys along with Question Paper
ಎಸ್‌ಎಸ್‌ಸಿ ಸಿಜಿಎಲ್ ಟೈಯರ್ 1 ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಟೈಯರ್ 2 ಪರೀಕ್ಷೆ ಬರೆಯಬೇಕಾಗುತ್ತದೆ. ಈ ಪರೀಕ್ಷೆಯನ್ನು 2022 ರ ಜನವರಿ 28, 29 ರಂದು ನಡೆಸಲಾಗುತ್ತದೆ. ಅಭ್ಯರ್ಥಿಗಳು ಆಗಾಗ ಎಸ್‌ಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಲೇಟೆಸ್ಟ್ ಅಪ್‌ಡೇಟ್‌ಗಳನ್ನು ಚೆಕ್ ಮಾಡಬಹುದು.
