Tumakuru NHM Recruitment 2022: ನ್ಯಾಷನಲ್ ಹೆಲ್ತ ಮಿಷನ್ ಅಡಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನಕ್ಕೆ ಕರೆಯಲಾಗಿದೆ. ಹುದ್ದೆಗಳ ಹೆಸರು, ಸಂಖ್ಯೆ, ವಿದ್ಯಾರ್ಹತೆ, ಇತರೆ ಮಾಹಿತಿಗಳನ್ನು ಕೆಳಗಿನಂತೆ ತಿಳಿಯಬಹುದು.
Tumakuru NHM Recruitment 2022
ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಈ ಕೆಳಕಂಡ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ನಿಗದಿತ ದಿನಾಂಕದಂದು ಭಾಗವಹಿಸಲು ತಿಳಿಸಲಾಗಿದೆ.
ಈ ಕೆಳಗಿನ ಹುದ್ದೆಗಳನ್ನು ಮೆರಿಟ್ ಕಂ ರೋಸ್ಟರ್ ಅನ್ವಯ ಆಯ್ಕೆ ಮಾಡಲಾಗುತ್ತದೆ.
ಜಿಲ್ಲಾ ಪಂಚಾಯತಿ ನೇಮಕಾತಿ Gadag Zilla Panchayat Recruitment 2022
ನೇರ ಸಂದರ್ಶನ ದಿನಾಂಕ :- 27-01-2022 (ಅರ್ಜಿಗಳನ್ನು ಬೆಳಿಗ್ಗೆ 10-12 ರವರೆಗೆ ಸಲ್ಲಿಸಬೇಕು)
ನೇರ ಸಂದರ್ಶನ ಸ್ಥಳ : ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಗಳ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿಗಳ ಸಂಕೀರ್ಣ, ಅಮಾನಿಕೆರೆ ಮುಂಭಾಗ, ತುಮಕೂರು.
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ಮಾಸಿಕ ಸಂಚಿತ ವೇತನ |
ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳು | 03 | Rs.25,000-45,000 |
ಆಯುಷ್ ವೈದ್ಯಾಧಿಕಾರಿ | 02 | Rs.25,000 |
ಆಶಾ ಮೇಲ್ವಿಚಾರಕರು | 01 | Rs.11500 |
ಶುಶ್ರೂಷಕಿಯರು | 01 | Rs.13,225 |
ಆಪ್ತಸಮಾಲೋಚಕರು | 01 | Rs.15,939 |
ಮನಃಶಾಸ್ತ್ರ ಸಾಮಾಜಿಕ ಕಾರ್ಯಕರ್ತ | 01 | Rs.25,000 |
ಡೆಂಟಲ್ ಸರ್ಜನ್ | 01 | Rs.30,000 |
ಅಡಿಯೋ ಮೆಟ್ರಿಕ್ ಇನ್‌ಸ್ಟ್ರಕ್ಟರ್ | 01 | Rs.15,000 |
ಎನ್‌ಪಿಸಿಡಿಸಿಎಸ್ ಕಾರ್ಯಕ್ರಮ ಶುಶ್ರೂಷಕರು | 06 | Rs.13225 |
ಎನ್‌ಪಿಪಿಸಿ ಕಾರ್ಯಕ್ರಮ ಶುಶ್ರೂಷಕರು | 03 | Rs.14,000 |
ಎನ್‌ಪಿಹೆಚ್‌ಸಿಇ ಕಾರ್ಯಕ್ರಮ ಶುಶ್ರೂಷಕರು | 02 | Rs.13,225 |
ಕಿರಿಯ ಮಹಿಳಾ ಸಹಾಯಕಿಯರು | 01 | Rs.11,500 |
ಮೇಲ್ಕಂಡ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಮೀಸಲಾತಿ ಅನ್ವಯ ರೋಸ್ಟರ್ ಕಂ ಮೆರಿಟ್ ಪ್ರಕಾರ ಸೂಕ್ತ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಎಲ್ಲ ಹುದ್ದೆಗಳಿಗೆ ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ ನೀಡಲಾಗುವುದು.
ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕೆಳಗಿನ ಅಗತ್ಯ ದಾಖಲೆಗಳನ್ನು / ಹುದ್ದೆಗೆ ಸಂಬಂಧಿಸಿ ಅರ್ಹತಾ ದಾಖಲೆಗಳನ್ನು ತೆಗೆದುಕೊಂಡು ಬರಬೇಕು.
- ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
- ಹುದ್ದೆಗೆ ಅಗತ್ಯ ವಿದ್ಯಾರ್ಹತೆಗಳ ದಾಖಲೆಗಳು
- ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ.
- ಜಾತಿ ಪ್ರಮಾಣ ಪತ್ರ
- ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ
- ಯೋಜನಾ ನಿರಾಶ್ರಿತರು ಪ್ರಮಾಣ ಪತ್ರ
- ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಇತರೆ
ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ, ಪ್ರತ್ಯೇಕ ಅರ್ಜಿ ಸಲ್ಲಿಸುವುದು. ಹುದ್ದೆವಾರು ವಿದ್ಯಾರ್ಹತೆ, ಇತರೆ ಹೆಚ್ಚಿನ ಮಾಹಿತಿಗಳಿಗೆ ಕೆಳಗಿನ ನೋಟಿಫಿಕೇಶನ್ ಅನ್ನು ಓದಿರಿ.
Notification
