Bangalore HAL Apprentice Jobs 2021 ಬೆಂಗಳೂರು ಹೆಚ್ಎಎಲ್ ಕೇಂದ್ರದಲ್ಲಿ ಐಟಿಐ ಪಾಸಾದವರಿಗೆ ಬೃಹತ್ ಉದ್ಯೋಗಾವಕಾಶ: ಅರ್ಜಿ ಆಹ್ವಾನ

Bangalore HAL Apprentice Jobs 2021: ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್ (ಹೆಚ್‌ಎಎಲ್), ಬೆಂಗಳೂರು, ಇಲ್ಲಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಬೆಂಗಳೂರು ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್ (ಹೆಚ್‌ಎಎಲ್), ತಾಂತ್ರಿಕ ತರಬೇತಿ ಸಂಸ್ಥೆಯು ಅಪ್ರಂಟಿಸ್ ಉದ್ಯೋಗಿಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಐಟಿಐ ಅನ್ನು ವಿವಿಧ ಟ್ರೇಡ್‌ನಲ್ಲಿ ಪಾಸ್ ಮಾಡಿದವರು ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

Bangalore HAL Apprentice Jobs 2021

ಉದ್ಯೋಗ ಸಂಸ್ಥೆ:- ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್

ಹುದ್ದೆಯ ಹೆಸರು:- ಅಪ್ರೆಂಟಿಸ್

ವಿದ್ಯಾರ್ಹತೆ:- ಐಟಿಐ ಪಾಸ್

ಅಪ್ರೆಂಟಿಸ್ ಹುದ್ದೆಯ ಅವಧಿ:- 1 ವರ್ಷ

KMF recruitment 2022

ಐಟಿಐ ಯಾವ್ಯಾವ ಟ್ರೇಡ್‌ನಲ್ಲಿ ಪಾಸ್‌ ಮಾಡಿದವರು ಅರ್ಜಿ ಸಲ್ಲಿಸಬಹುದು?

  1. ಫಿಟ್ಟರ್
  2. ಟರ್ನರ್
  3. ಮೆಕ್ಯಾನಿಕಲ್
  4. ಇಲೆಕ್ಟ್ರೀಷಿಯನ್
  5. ವೆಲ್ಡರ್
  6. ಕೋಪಾ
  7. ಪೌಂಡರಿಮ್ಯಾನ್
  8. ಶೀಟ್ ಮೆಟಲ್ ವರ್ಕರ್

ಈ ಮೇಲಿನ ಯಾವುದೇ ಟ್ರೇಡ್‌ನಲ್ಲಿ ಐಟಿಐ ಪಾಸ್‌ ಮಾಡಿದ ಅಭ್ಯರ್ಥಿಗಳು ಹೆಚ್‌ಎಎಲ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಹಾಕಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಹೆಚ್‌ಎಲ್‌ ಕರಿಯರ್ ಸೆಕ್ಷನ್‌ ವೆಬ್‌ಸೈಟ್‌ ವಿಳಾಸ ಕ್ಕೆ ಭೇಟಿ ನೀಡಿ ಅಥವಾ apprenticeshipindia.org/candidate-registration ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ರಿಜಿಸ್ಟ್ರೇಷನ್‌ ಪಡೆಯಬಹುದು

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 28-12-2021

ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್ ಅಪ್ರೆಂಟಿಸ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.8000 ಸ್ಟ್ರೈಫಂಡ್ ನೀಡಲಾಗುವುದು.

Apply Now

Leave a Reply

Your email address will not be published. Required fields are marked *