CSG Karnataka Recruitment 2022 ಕರ್ನಾಟಕ ಸರ್ಕಾರ ಅಧೀನದ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ನಲ್ಲಿಉದ್ಯೋಗಾವಕಾಶ: ಅರ್ಜಿ ಆಹ್ವಾನ

CSG Karnataka Recruitment 2022 ಕರ್ನಾಟಕ ಸರ್ಕಾರ ಅಧೀನದ ಸೆಂಟರ್‌ ಫಾರ್ ಸ್ಮಾರ್ಟ್‌ ಗವರ್ನೆನ್ಸ್ (ಸಿಎಸ್‌ಜಿ) ನಲ್ಲಿ ವಿವಿಧ ಪೋಸ್ಟ್‌ಗಳನ್ನು ನೇಮಕ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ಹೆಸರು, ಸಂಖ್ಯೆ, ಅರ್ಜಿ ಸಲ್ಲಿಕೆ ವಿಧಾನ, ಇತರೆ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

CSG Karnataka Recruitment 2022

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಪ್ರಾಜೆಕ್ಟ್‌ ಮ್ಯಾನೇಜರ್3
ಪ್ರಾಜೆಕ್ಟ್‌ ಲೀಡ್2
ಬಿಸಿನೆಸ್ ಅನಲಿಸ್ಟ್4
ಸೊಲ್ಯೂಷನ್ ಆರ್ಕಿಟೆಕ್ಟ್‌2
ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್6
ಸಾಫ್ಟ್‌ವೇರ್ ಇಂಜಿನಿಯರ್42
ಡೇಟಾಬೇಸ್ ಡಿಸೈನರ್5
ಡಾಟಾಬೇಸ್ ಅಡ್ಮಿನಿಸ್ಟ್ರೇಟರ್4
ಸಿಸ್ಟಮ್ ಅಡ್ಮಿನಿಸ್ಟ್ರೇಟರ್2
ಟೆಸ್ಟ್‌ ಲೀಡ್2
ಟೆಸ್ಟ್‌ ಇಂಜಿನಿಯರ್5
ಆಪರೇಷನ್ಸ್‌ ಮ್ಯಾನೇಜರ್4
CSG Karnataka Recruitment 2022

15000 Teacher post in Karnataka in 2022

ಉದ್ಯೋಗ ಸಂಸ್ಥೆ : ಸೆಂಟರ್ ಫಾರ್ ಸ್ಮಾರ್ಟ್‌ ಗವರ್ನೆನ್ಸ್

ಉದ್ಯೋಗ ಸ್ಥಳ : ಬೆಂಗಳೂರು

ಸೆಂಟರ್ ಫಾರ್ ಸ್ಮಾರ್ಟ್‌ ಗವರ್ನೆನ್ಸ್ ವೆಬ್‌ಸೈಟ್‌ : https://csg.karnataka.gov.in

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-01-2022

ಅರ್ಜಿ ಸಲ್ಲಿಸಲು ಇ-ಮೇಲ್‌ ವಿಳಾಸ : careerscsg@karnataka.gov.in

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತ ಅಭ್ಯರ್ಥಿಗಳು ತಮ್ಮ ಲೇಟೆಸ್ಟ್‌ ಅಪ್‌ಡೇಟೆಡ್‌ ರೆಸ್ಯೂಮ್‌ ಅನ್ನು ಅಧಿಕೃತ ಇ-ಮೇಲ್‌ ವಿಳಾಸ careerscsg@karnataka.gov.in ಗೆ 2022 ರ ಜನವರಿ 31 ರೊಳಗೆ ಸಲ್ಲಿಸಬೇಕು.

ರೆಸ್ಯೂಮ್‌ನಲ್ಲಿ ಅಭ್ಯರ್ಥಿಯ ಹೆಸರು, ಜನ್ಮ ದಿನಾಂಕ, ಲಿಂಗ, ಸಂವಹನಕ್ಕಾಗಿ ವಿಳಾಸ, ಮೊಬೈಲ್‌ ನಂಬರ್, ಇಮೇಲ್ ವಿಳಾಸ, ಕಾರ್ಯಾನುಭವ, ಪ್ರಸ್ತುತ ಸ್ಯಾಲರಿ ಸೇರಿದಂತೆ ಇತರೆ ಎಲ್ಲ ಅಗತ್ಯ ಮಾಹಿತಿಗಳನ್ನು ಒಳಗೊಂಡಿರಬೇಕು.

ಆಯ್ಕೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನಿಗದಿತ ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿದ ಅಂಕಗಳು ಮತ್ತು ಕಾರ್ಯಾನುಭವದ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ಸಂದರ್ಶನಕ್ಕೆ ಆಹ್ವಾನಿಸಿ ಆಯ್ಕೆ ಮಾಡಲಾಗುತ್ತದೆ.

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಬಿಇ / ಬಿ.ಟೆಕ್ / ಎಂಸಿಎ / ಎಂಎಸ್ಸಿ/ ಡಿಪ್ಲೊಮ ಉತ್ತೀರ್ಣರಾಗಿರಬೇಕು.

ಸೆಂಟರ್ ಫಾರ್ ಸ್ಮಾರ್ಟ್‌ ಗವರ್ನೆನ್ಸ್‌ (CSG), ಈ-ಆಡಳಿತ ಸಚಿವಾಲಯ, ಸಿಆಸುಇ (ಇ-ಆಡಳಿತ) ಇದರ ಅಧೀನದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸ್ಥಾಪಿಸಿರುವ ಮತ್ತು ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಅಧಿನಿಯಮ 1960 ರ ಅನ್ವಯ ನೋಂದಣಿಯಾಗಿರುವ ಒಂದು ಸಂಸ್ಥೆ.

Leave a Reply

Your email address will not be published. Required fields are marked *