KPTCL admit card 2022: ಕೆಪಿಟಿಸಿಎಲ್’ನ ಹುದ್ದೆಗಳ ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ? ಡೌನ್‌ಲೋಡ್‌ ಹೇಗೆ?

KPTCL admit card 2022: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ 1492 ಎಇ, ಜೆಇ, ಜೂನಿಯರ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಆಗಿದ್ದು, ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ಆಗಬೇಕಿದೆ. ಅದು ಯಾವಾಗ ಎಂದು ಇಲ್ಲಿ ತಿಳಿಸಲಾಗಿದೆ.

www.udyogmahiti.com

teligram

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಂಸ್ಥೆಯ 1492 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜುಲೈ 23 ರಿಂದ ಪರೀಕ್ಷೆ ನಡೆಸಲಿದೆ. ಜುಲೈ 23, 24 ಹಾಗೂ ಆಗಸ್ಟ್‌ 07 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳು ಪ್ರವೇಶ ಪತ್ರ ಬಿಡುಗಡೆ ಯಾವಾಗ ಎಂದು ಕೇಳಿದ್ದರು. ಅದಕ್ಕೆ ಉತ್ತರ ಈ ಕೆಳಗಿನಂತಿದೆ.


ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಪಿಟಿಸಿಎಲ್ ವಿವಿಧ ಹುದ್ದೆಗಳ ಸಿಇಟಿ’ಗೆ ಒಂದು ವಾರ ಮುಂಚಿತವಾಗಿ ಅಡ್ಮಿಟ್‌ ಕಾರ್ಡ್‌ ಅನ್ನು ಬಿಡುಗಡೆ ಮಾಡಲಿದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗುವ ಮೂಲಕ ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಇದನ್ನು ಹೊರತುಪಡಿಸಿ, ಅಭ್ಯರ್ಥಿಗಳಿಗೆ ನೇರವಾಗಿ ಅಥವಾ ಇತರೆ ಯಾವುದೇ ಮಾರ್ಗದಲ್ಲಿ ಪ್ರವೇಶ ಪತ್ರ ಕಳುಹಿಸಲಾಗುವುದಿಲ್ಲ.

KPTCL admit card 2022 ಕೆಪಿಟಿಸಿಎಲ್ ಪರೀಕ್ಷೆಗೆ ಅಡ್ಮಿಟ್ ಕಾರ್ಡ್‌ ಡೌನ್‌ಲೋಡ್ ಹೇಗೆ?

  • ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿಯ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ.
  • ಓಪನ್ ಆದ ಪೇಜ್‌ನಲ್ಲಿ ನೇಮಕಾತಿ >> ಕೆಪಿಟಿಸಿಎಲ್‌ 2022 ಎಂದಿರುವ ಆಯ್ಕೆಗಳನ್ನು ಕ್ಲಿಕ್ ಮಾಡಬೇಕು.
  • ನಂತರ ಓಪನ್ ಆಗುವ ಪೇಜ್‌ನಲ್ಲಿ ಪ್ರವೇಶ ಪತ್ರ ಡೌನ್‌ಲೋಡ್‌ಗೆ ಲಿಂಕ್‌ ನೀಡಲಾಗಿರುತ್ತದೆ, ಕ್ಲಿಕ್ ಮಾಡಿ.
  • ಕೆಇಎ’ಯ ಮತ್ತೊಂದು ಪೇಜ್‌ ಓಪನ್ ಅಗುತ್ತದೆ. ಇಲ್ಲಿ ಅಪ್ಲಿಕೇಶನ್‌ / ರಿಜಿಸ್ಟರ್ ನಂಬರ್ ಮತ್ತು ಪಾಸ್‌ವರ್ಡ್‌ ನೀಡಿ ಸಬ್‌ಮಿಟ್‌ ಮಾಡಬೇಕು.
  • ಪ್ರವೇಶ ಪತ್ರ ಪ್ರದರ್ಶನವಾಗುತ್ತದೆ ಡೌನ್‌ಲೋಡ್‌ ಮಾಡಿ ಪ್ರಿಂಟ್‌ ತೆಗೆದುಕೊಳ್ಳಬಹುದು.



ಕೆಇಎ ಕೆಪಿಟಿಸಿಎಲ್‌ವಿವಿಧ ಹುದ್ದೆಗೆ ಕೆಳಗಿನ ದಿನಾಂಕಗಳಂದು ಪರೀಕ್ಷೆ ನಡೆಸಲಿದೆ.
ಸಹಾಯಕ ಇಂಜಿನಿಯರ್ (ವಿದ್ಯುತ್), (ಸಿವಿಲ್) ಹುದ್ದೆಗಳಿಗೆ ಪರೀಕ್ಷೆ ದಿನಾಂಕ : 23-07-2022 (ಮಧ್ಯಾಹ್ನ 2-30 ರಿಂದ 4-30 ರವರೆಗೆ)
100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಬೆಂಗಳೂರು ಮಾತ್ರ ಪರೀಕ್ಷೆ ಕೇಂದ್ರವಾಗಿರುತ್ತದೆ.

ಕಿರಿಯ ಇಂಜಿನಿಯರ್ (ವಿದ್ಯುತ್)ಹುದ್ದೆಗಳಿಗೆ ಪರೀಕ್ಷೆ ದಿನಾಂಕ : 24-07-2022 (ಬೆಳಿಗ್ಗೆ 10-30ರಿಂದ 12-30 ಗಂಟೆವರೆಗೆ)
ಕಿರಿಯ ಇಂಜಿನಿಯರ್ ( ಸಿವಿಲ್) ಹುದ್ದೆಗಳಿಗೆ ಪರೀಕ್ಷೆ ದಿನಾಂಕ : 24-07-2022 (ಮಧ್ಯಾಹ್ನ 2-30 ರಿಂದ 4-30 ರವರೆಗೆ)
100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಬೆಂಗಳೂರು ಮಾತ್ರ ಪರೀಕ್ಷೆ ಕೇಂದ್ರವಾಗಿರುತ್ತದೆ.

ಕಿರಿಯ ಸಹಾಯಕ ಹುದ್ದೆಗಳಿಗೆ ಪರೀಕ್ಷೆ ದಿನಾಂಕ: 07-08-2022 ( (ಬೆಳಿಗ್ಗೆ 10-30ರಿಂದ 12-30 ಗಂಟೆವರೆಗೆ)
100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.


ಕನ್ನಡ ಭಾಷಾ ಪರೀಕ್ಷೆಯ ದಿನಾಂಕ : 07-08-2022 (ಮಧ್ಯಾಹ್ನ 2-00 ರಿಂದ 05-00 ಗಂಟೆ ರವರೆಗೆ)
ಈ ಪರೀಕ್ಷೆಯನ್ನು 150 ಅಂಕಗಳಿಗೆ ನೀಡಲಾಗುತ್ತದೆ.

www.udyogmahiti.com

teligram



ಕೆಪಿಟಿಸಿಎಲ್‌ ನ ಈ ಕೆಳಗಿನ ಸಂಖ್ಯೆ ಹುದ್ದೆಗಳ ಭರ್ತಿಗೆ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತದೆ.

ಸಹಾಯಕ ಇಂಜಿನಿಯರ್ ( ವಿದ್ಯುತ್ ): 505

ಸಹಾಯಕ ಇಂಜಿನಿಯರ್ ( ಸಿವಿಲ್) : 28

ಕಿರಿಯ ಇಂಜಿನಿಯರ್ (ವಿದ್ಯುತ್) : 570

ಕಿರಿಯ ಇಂಜಿನಿಯರ್ ( ಸಿವಿಲ್): 29

ಕಿರಿಯ ಸಹಾಯಕ : 360

ಒಟ್ಟು ಹುದ್ದೆಗಳ ಸಂಖ್ಯೆ : 1492

KPTCL admit card 2022

ADMIT CARD DIRECT LINK

Leave a Reply

Your email address will not be published. Required fields are marked *