RRB Group D Admit Card 2019 ಹುದ್ದೆಗಳ ಆನ್‌ಲೈನ್ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ. ಈಗಲೇ ಪ್ರವೇಶಪತ್ರ ಡೌನಲೋಡ ಮಾಡಿಕೊಳ್ಳಿ

RRB Group D Admit Card : ರೈಲ್ವೆ ನೇಮಕಾತಿ ಮಂಡಳಿಯು ಗ್ರೂಪ್‌ ಡಿ ಹುದ್ದೆಗಳ ಫೇಸ್‌ 1 ಆನ್‌ಲೈನ್‌ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದ್ದು, ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.

RRB Group D Admit Card

ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಗ್ರೂಪ್‌ ಡಿ ಲೆವೆಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಗಸ್ಟ್‌ 17 ರಿಂದ 25, 2022 ರವರೆಗೆ ಆನ್‌ಲೈನ್‌ ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಮ್ಮಿಕೊಂಡಿದೆ. ಈ ಸದರಿ ಪರೀಕ್ಷೆಗೆ ನಾಲ್ಕು ದಿನಗಳ ಮುಂಚಿತವಾಗಿ ಅಡ್ಮಿಟ್‌ ಕಾರ್ಡ್‌ ಬಿಡುಗಡೆ ಮಾಡಲಿದೆ. ಈಗಾಗಲೇ ಅಭ್ಯರ್ಥಿಗಳು ತಮ್ಮ ಪರೀಕ್ಷೆ ದಿನಾಂಕ, ಪರೀಕ್ಷೆ ಕೇಂದ್ರ ಮತ್ತು ಸ್ಥಳ ಚೆಕ್‌ ಮಾಡಿಕೊಳ್ಳಲು ಲಿಂಕ್ ಬಿಡುಗಡೆ ಮಾಡಿದೆ.

RRB Group D Admit Card

ಆಗಸ್ಟ್‌ 17 ರಂದು ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಆಗಸ್ಟ್‌ 13 ರಂದು ಅಡ್ಮಿಟ್ ಕಾರ್ಡ್‌ ಬಿಡುಗಡೆ ಮಾಡಲಿದ್ದು ಅಭ್ಯರ್ಥಿಗಳು ತಮ್ಮ ರೀಜನಲ್ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, ಲಾಗಿನ್ ಆಗುವ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.

teligram
ಪರೀಕ್ಷೆ ಕೇಂದ್ರ, ದಿನಾಂಕ ಚೆಕ್‌ ಮಾಡುವುದು ಹೇಗೆ?
  • ಕರ್ನಾಟಕದ ಅಭ್ಯರ್ಥಿಗಳು ವೆಬ್‌ಸೈಟ್‌ rrbbnc.gov.in ಗೆ ಭೇಟಿ ನೀಡುವ ಮೂಲಕ ಪರೀಕ್ಷೆ ಕೇಂದ್ರ ಚೆಕ್‌ ಮಾಡಬಹುದು.
  • ಅಥವಾ ಡೈರೆಕ್ಟ್‌ ವೆಬ್‌ ವಿಳಾಸ https://rrb.digialm.com//EForms/configuredHtml/32341/78081/login.html ಕ್ಕೆ ಭೇಟಿ ನೀಡಿ.
  • ರಿಜಿಸ್ಟ್ರೇಷನ್‌ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ ಲಾಗಿನ್ ಆಗಿ.
  • ಪರೀಕ್ಷೆ ಕೇಂದ್ರ, ದಿನಾಂಕದ ಕುರಿತು ಮಾಹಿತಿ ಪ್ರದರ್ಶನವಾಗುತ್ತದೆ.
ಪ್ರವೇಶ ಪತ್ರ ಡೌನ್‌ಲೋಡ್ ಹೇಗೆ?
  • ವೆಬ್‌ ವಿಳಾಸ rrbbnc.gov.in ಗೆ ಭೇಟಿ ನೀಡಿ.
  • ಓಪನ್ ಆದ ಪೇಜ್‌ನಲ್ಲಿ CEN-1/2019 – CBT Admit Card’ ಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ.
  • ನಂತರ ಓಪನ್ ಆಗುವ ಪೇಜ್‌ನಲ್ಲಿ ರಿಜಿಸ್ಟರ್ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ ಲಾಗಿನ್ ಆಗಿ.
  • ಪ್ರವೇಶ ಪತ್ರ ಪ್ರದರ್ಶಿತವಾಗುತ್ತದೆ. ಡೌನ್‌ಲೋಡ್ ಮಾಡಿಕೊಳ್ಳಿ.
teligram
RRB Group D Admit Card
ಪರೀಕ್ಷೆ ಕುರಿತು

ಆರ್‌ಆರ್‌ಬಿ ಗ್ರೂಪ್‌ ಡಿ ಸಿಬಿಟಿ ಫೇಸ್‌-1 ಪರೀಕ್ಷೆಯು 100 ಅಂಕಗಳಿಗೆ 01-30 ಗಂಟೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಜೆನೆರಲ್ ಸೈನ್ಸ್‌, ಗಣಿತ, ಜೆನೆರಲ್ ಇಂಟೆಲಿಜೆನ್ಸ್‌ ಮತ್ತು ರೀಸನಿಂಗ್, ಜೆನೆರಲ್ ಅವಾರ್ನೆಸ್ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕಗಳನ್ನು ಕಳೆಯಲಾಗುತ್ತದೆ.

ಅಭ್ಯರ್ಥಿಗಳು ಪಾಸಾಗಲು ಈ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 40 ಅಂಕಗಳನ್ನು ಗಳಿಸಬೇಕು. ಎಸ್‌ಸಿ ಅಭ್ಯರ್ಥಿಗಳು ಕನಿಷ್ಠ ಶೇಕಡ.30, ಎಸ್‌ಸಿ ಅಭ್ಯರ್ಥಿಗಳು ಕನಿಷ್ಠ ಶೇಕಡ 35 ಅಂಕಗಳನ್ನು ಗಳಿಸಬೇಕು.

ಆರ್‌ಆರ್‌ಬಿ 1 ಲಕ್ಷಕ್ಕೂ ಅಧಿಕ ಗ್ರೂಪ್‌ ಡಿ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಪ್ರಕಟಿಸಿ, ನೇಮಕ ಪ್ರಿಕ್ರಿಯೆ ನಡೆಸುತ್ತಿದೆ. ಆರ್‌ಆರ್‌ಬಿ ಗ್ರೂಪ್‌ ಡಿ ಸಿಬಿಟಿ ಫೇಸ್‌-1 ಪರೀಕ್ಷೆ ನಂತರ ಫೇಸ್‌-2 ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

www.udyogmahiti.com

Leave a Reply

Your email address will not be published. Required fields are marked *