ರೈಲ್ವೆ ಇಲಾಖೆಯಿಂದ ಗ್ರೂಪ್ ಡಿ (rrb group d exam) ಹುದ್ದೆಗಳ ನೇಮಕಾತಿಯ ಪರೀಕ್ಷಾ ದಿನಾಂಕ ನಿಗದಿ ಹಾಗೂ ಇತರೆ ಮಾಹಿತಿ ನಿಮಗಾಗಿ.

ಭಾರತೀಯ ಸರ್ಕಾರದ ರೈಲ್ವೆ ಸಚಿವಾಲಯವು 2019ರ ಜನವರಿ ತಿಂಗಳಲ್ಲಿ ದೇಶಾದ್ಯಂತ ಖಾಲಿ ಇರುವ ಲಕ್ಷಾಂತರ ಗ್ರೂಪ್-ಡಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು,

ಸದರಿ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಕಂಪ್ಯೂಟರ್ ಆಧಾರಿತ ಪರೀಕ್ಷೆಗಾಗಿ ಇಲಾಖೆಯು ದಿನಾಂಕವನ್ನು ನಿಗದಿಪಡಿಸಿದ್ದು

ಪರೀಕ್ಷೆಯನ್ನು ದಿನಾಂಕ 23 ಫೆಬ್ರುವರಿ 2022 ರಿಂದ ಹಲವು ವಿಭಾಗಗಳಲ್ಲಿ ನಡೆಸಲಾಗುವುದು ಎಂದು ತನ್ನ ಇಲಾಖಾ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಪರೀಕ್ಷಾ ನಗರ ಹಾಗೂ ದಿನಾಂಕವನ್ನು ಹಾಗೂ SC/ST ಅಭ್ಯರ್ಥಿಗಳ ಪ್ರಯಾಣಭತ್ಯೆ ಕುರಿತ ವಿವರಗಳನ್ನು ಪರೀಕ್ಷೆಗೆ ಹತ್ತು ದಿನ ಮುಂಚಿತವಾಗಿ ಇಲಾಖೆಯ ಜಾಲತಾಣದಲ್ಲಿ ಪುಕಟಿಸಲಾಗುವುದು

ಅಭ್ಯರ್ಥಿಗಳ ಪುವೇಶ ಪತ್ರವನ್ನು ಪರೀಕ್ಷೆಗೆ 4 ದಿನ ಮುಂಚಿತವಾಗಿ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗುವುದು.

ಒಟ್ಟು 4,85,607 ಅಭ್ಯರ್ಥಿಗಳ ಅರ್ಜಿಗಳು ಭಾವಚಿತ್ರ ಹಾಗೂ ಸಹಿಯ ಕಾರಣದಿಂದ ತಿರಸ್ಕೃತಗೊಂಡಿದ್ದು, ಇವರುಗಳಿಗೆ ಅರ್ಜಿ ತಿದ್ದುಪಡಿಗಾಗಿ ನಾಳೆಯಿಂದ ಅಂದರೆ ದಿನಾಂಕ 15 ಡಿಸೆಂಬರ್ 2021 ರಿಂದ ಆರಂಭಗೊಂಡು 26 ಡಿಸೆಂಬರ್ 2021ರವರೆಗೆ ಅವಕಾಶವನ್ನು ನೀಡಲಾಗಿರುತ್ತದೆ.

ಈ ಕುರಿತ ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಇಲಾಖಾ ಪ್ರಕಟಣೆಯನ್ನು ಡೌನೋಡ್ ಮಾಡಿಕೊಂಡು ಮಾಹಿತಿಯನ್ನು ಪಡೆಯಬಹುದಾಗಿದೆ.

official website

Photo/ Signature Modification Link

Leave a Reply

Your email address will not be published. Required fields are marked *