RRB GROUP D EXAM, ರೈಲ್ವೆ ಇಲಾಖೆಯಿಂದ RRC ಗ್ರೂಪ್-ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿ ಇದೀಗ ಪ್ರಕಟ ಕೂಡಲೇ ವೀಕ್ಷಿಸಿ.

ಭಾರತ ಸರ್ಕಾರದ ರೈಲ್ವೆ ಸಚಿವಾಲಯವು 2019 ಜನೆವರಿ ತಿಂಗಳಿನಲ್ಲಿ ದೇಶಾದ್ಯಂತ ಖಾಲಿ ಇರುವ ಲಕ್ಷಾಂತರ ಗ್ರೂಪ್-ಡಿ ಹುದ್ದೆಗಳ( RRB GROUP D EXAM) ನೇಮಕಾತಿಗಾಗಿ Railway Recruitment Cell ನಿಂದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಸದರಿ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಭಾವಚಿತ್ರ ಹಾಗೂ ಸಹಿಯನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.

RRB GROUP D EXAM

ಈ ಅವಕಾಶವು ಯಾವ ಅಭ್ಯರ್ಥಿಗಳ ಅರ್ಜಿ ಸ್ಥಿತಿಯು ತಿರಸ್ಕೃತ (Reject) ಎಂದು ಇರುತ್ತದೆಯೋ ಅವರಿಗೆ ಮಾತ್ರ ಅನ್ವಯಿಸುತ್ತದೆ.

  • ಅರ್ಜಿಯ ಸ್ಥಿತಿ ಸ್ವೀಕೃತಗೊಂಡ(Accepted) ಅಭ್ಯರ್ಥಿಗಳು ಯಾವುದೇ ರೀತಿಯ ಬದಲಾವಣೆ ಮಾಡುವ ಅವಶ್ಯಕತೆ ಇರುವುದಿಲ್ಲ ಹಾಗು ಅವರು ಈಗಾಗಲೇ ಪರೀಕ್ಷೆಗೆ ಅರ್ಹರಾಗಿರುತ್ತಾರೆ.
  • ಅರ್ಜಿಯಲ್ಲಿನ ಭಾವಚಿತ್ರ ಹಾಗೂ ಸಹಿ ತಿದ್ದುಪಡಿಯೂ ದಿನಾಂಕ 15 ಡಿಸೆಂಬರ್ 2021ರಿಂದ ಅಧಿಕೃತ RRB ಜಾಲತಾಣಗಳಲ್ಲಿ ಲಭ್ಯವಿರಲಿದೆ.

ಪ್ರಮುಖ ಸೂಚನೆ : ಅದೇ ರೀತಿ ರೈಲ್ವೆ ಇಲಾಖೆಯು ಈ ನೇಮಕಾತಿಯು ಸಂಪೂರ್ಣ ಪಾರದರ್ಶಕವಾಗಿ ಘನೀಕೃತಗೊಂಡ ವಿಧಾನದಲ್ಲಿ ನಡೆಸಲಿದ್ದು, ಯಾವುದೇ ಅಕ್ರಮಗಳು ನಡೆಯಲು ಸಾಧ್ಯವಿರುವುದಿಲ್ಲ ಹಾಗಾಗಿ ಯಾರೇ ವ್ಯಕ್ತಿ ನಿಮಗೆ ಆಮಿಷ ಒಡ್ಡಿದಲ್ಲಿ ಇಂಥ ಆಮಿಷಗಳಿಂದ ದೂರವಿರಲು ಪ್ರಕಟಣೆಯಲ್ಲಿ ತಿಳಿಸಿದೆ.

ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಮೆರಿಟ್ (ಅರ್ಹತೆ) ಆಧಾರದ ಮೇಲೆ ಘನೀಕೃತ ವಿಧಾನದಿಂದ ನಡೆಯಲಿದ್ದು ಯಾವುದೇ ಅಕ್ರಮ ಜರುಗಲು ಸಾಧ್ಯವಿರುವುದಿಲ್ಲ.

ಅದೇ ರೀತಿ ಅಭ್ಯರ್ಥಿಗಳು ಅಧಿಕೃತ ಜಾಲತಾಣಗಳಲ್ಲಿ ಪೂರೈಸಿದ ಮಾಹಿತಿಗನುಸಾರವಾಗಿ ಮಾತ್ರ ತಮ್ಮ ಅಧಿಸೂಚನೆಯ ಮಾಹಿತಿಯನ್ನು ಪಡೆಯಬಹುದಾಗಿದ್ದು ಸಾಮಾಜಿಕ ಜಾಲತಾಣದಗಳಲ್ಲಿ ಹಾಗೂ ಇತರೆ ಅನಧಿಕೃತ ಜಾಲತಾಣಗಳಲ್ಲಿ ಬರುವ ಮಾಹಿತಿಗಳಿಂದ ದೂರವಿರಲು ಸೂಚಿಸಿದೆ.

Official Notification

Link Available soon

webaskit joi telegram channel

Leave a Reply

Your email address will not be published. Required fields are marked *