Karnataka Forest Guard Result 2022: ಕರ್ನಾಟಕ ಅರಣ್ಯ ಇಲಾಖೆಯು 2020ನೇ ಸಾಲಿನ 339 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಪ್ರತ್ಯೇಕ ಲಾಗಿನ್ ಮೂಲಕ ರಿಸಲ್ಟ್ ಚೆಕ್ ಮಾಡಬಹುದು.
ಕರ್ನಾಟಕ ಅರಣ್ಯ ಇಲಾಖೆಯು 339 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಅರಣ್ಯ ರಕ್ಷಕ ಹುದ್ದೆಗಳಿಗೆ ವೃತ್ತವಾರು ಪ್ರತ್ಯೇಕ 1:1 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಹಾಗೂ ಕಟ್ ಆಫ್ ಅಂಕಗಳು ಸಹ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದು.
Karnataka Forest Guard Result 2022
339 ಅರಣ್ಯ ರಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ ಕುರಿತು ಅಧಿಸೂಚನೆಯಲ್ಲಿ ಅಧಿಸೂಚಿಸಿದ್ದ ಪರೀಕ್ಷಾ ಕೇಂದ್ರಗಳಲ್ಲಿ ದಿನಾಂಕ 05-12-2021 ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಸದರಿ ಪರೀಕ್ಷೆ ಫಲಿತಾಂಶವನ್ನು ವೆಬ್‌ಸೈಟ್ https://kfdrecruitment.in ನಲ್ಲಿ ಬಿಡುಗಡೆ ಮಾಡಲಾಗಿದೆ.
ತಾತ್ಕಾಲಿಕ ಆಯ್ಕೆಪಟ್ಟಿ ಹಾಗೂ ಕಟ್ ಆಫ್ ಅಂಕಗಳನ್ನು ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಈ ಕೆಳಗಿನಂತೆ ನೀಡಲಾಗಿದೆ.
Forest Guard Provisional list and Cut Off marks
February 2022 2nd Week JOBS
ಅಭ್ಯರ್ಥಿಗಳು ಪ್ರತ್ಯೇಕ ಲಾಗಿನ್ ಮೂಲಕ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ವೆಬ್‌ಸೈಟ್ https://kfdrecruitment.in/_wp_link_placeholder ಗೆ ಭೇಟಿ ನೀಡಿ ಪಡೆಯಬಹುದಾಗಿದೆ.
ಅರಣ್ಯ ಇಲಾಖೆಯ 2020ನೇ ಸಾಲಿನ 339 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಆಯ್ಕೆ ಪ್ರಕ್ರಿಯೆ ಫಲಿತಾಂಶ ಇದಾಗಿದೆ.
