UPI cash withdrawal | ಫೋನ್‌ಪೇ, ಗೂಗಲ್‌ಪೇ ಮೂಲಕ ATM ನಲ್ಲಿ ಹಣ ವಿಥ್‌ಡ್ರಾ ಮಾಡಿ ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ

UPI cash withdrawal :UPI ಬಳಸಿಕೊಂಡು ಕಾರ್ಡ್‌ರಹಿತ ನಗದು ಹಿಂಪಡೆಯುವ ಸೌಲಭ್ಯವು ಪ್ರಸ್ತುತ ಆಯ್ದ ಬ್ಯಾಂಕ್‌ಗಳಿಗೆ ಮಾತ್ರ ಲಭ್ಯವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), HDFC ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಗ್ರಾಹಕರು UPI ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಹಣ ವಿಥ್‌ಡ್ರಾ ಮಾಡಲು ಅವಕಾಶ ಕಲ್ಪಿಸಿವೆ.

UPI cash withdrawal

ಭಾರತೀಯರು ಇನ್ಮುಂದೆ Google Pay, Paytm, PhonePe ನಂತಹ UPI ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಇಲ್ಲದೆಯೇ ATM ಗಳಿಂದ ಹಣ ಪಡೆಯಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಸ್ತಾವನೆಯ ನಂತರ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ಹಿಂಪಡೆಯುವಿಕೆ (ಐಸಿಸಿಡಬ್ಲ್ಯು) ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದ್ದು, ಜನರು ತಮ್ಮ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಎಟಿಎಂಗಳಿಂದ ಹಿಂಪಡೆಯಲು ಅನುವು ಮಾಡಿಕೊಡಲಾಗಿದೆ. ಇದೀಗ ಈ ಸೇವೆ ಲಭ್ಯವಾಗಿದೆ.!

www.udyogmahiti.com

ಹೌದು, ದೇಶದಾದ್ಯಂತ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿರುವ ಗೂಗಲ್ ಪೇ, ಫೋನ್‌ ಪೇ ಮತ್ತು ಪೇಟಿಎಂ ನಂತಹ ಯುಪಿಐ ಆಧಾರಿತ ಅಪ್ಲಿಕೇಷನ್‌ಗಳ ಮೂಲಕವೇ ATM ನಲ್ಲಿ ಹಣವನ್ನು ವಿಥ್‌ಡ್ರಾ ಮಾಡಬಹುದಾದ ಆಯ್ಕೆ ಜಾರಿಯಾಗಿದೆ. ಇದರಿಂದ ದೇಶದ ಜನತೆ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಇಲ್ಲದೆಯೂ ATM ನಲ್ಲಿ ಸುಲಭವಾಗಿ ಹಣವನ್ನು ವಿಥ್‌ಡ್ರಾ ಮಾಡಲು ಸಾಧ್ಯವಾತ್ತಿದೆ. ಜನರು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪಾಸ್‌ವರ್ಡ್ ಮರೆತರು ಅಥವಾ ಕಳೆದುಕೊಂಡರೂ, Google Pay, Paytm, PhonePe ನಂತಹ UPI ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಹಣ ಪಡೆಯಬಹುದು.

atm 95818167
UPI cash withdrawal

UPI ಬಳಸಿಕೊಂಡು ಕಾರ್ಡ್‌ರಹಿತ ನಗದು ಹಿಂಪಡೆಯುವ ಸೌಲಭ್ಯವು ಪ್ರಸ್ತುತ ಆಯ್ದ ಬ್ಯಾಂಕ್‌ಗಳಿಗೆ ಮಾತ್ರ ಲಭ್ಯವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), HDFC ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಗ್ರಾಹಕರು UPI ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಹಣ ವಿಥ್‌ಡ್ರಾ ಮಾಡಲು ಅವಕಾಶ ಕಲ್ಪಿಸಿವೆ. ಈ ಮೂರು ಬ್ಯಾಂಕ್‌ಗಳು ಪ್ರಸ್ತುತ ಕೆಲ ಆಯ್ದ ATM ಮಷಿನ್‌ಗಳಲ್ಲಿ UPI ಸ್ಕ್ಯಾನ್ ಆಯ್ಕೆಗಯನ್ನು ಪರಿಶೀಲಿಸುತ್ತಿವೆ. ನೀವು ಕೂಡ Google Pay, Paytm, PhonePe ನಂತಹ UPI ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಹಣ ಪಡೆಯಲು ಈ ಕೆಳಗೆ ನೀಡಲಾಗಿರುವ ಕ್ರಮಗಳನ್ನು ಅನುಸರಿಸಿ.

  • UPI ವಿಥ್‌ಡ್ರಾ ಸೇವೆಯನ್ನು ಹೊಂದಿರುವ ATM ಮಷಿನ್ ಡಿಸ್‌ಪ್ಲೇ ಮೇಲೆ ‘Withdraw Cash’ ಆಯ್ಕೆ ಇರಲಿದೆ. ಇದನ್ನು ಕ್ಲಿಕ್ ಮಾಡಿ.
  • Withdraw Cash ಮೇಲೆ ಕ್ಲಿಕ್ ಮಾಡಿದ ನಂತರ UPI ಸ್ಕ್ಯಾನ್ ಮಾಡಿ ಹಣವನ್ನು ವಿಥ್‌ಡ್ರಾ ಮಾಡಲು ಸಾಧ್ಯವಾಗಲಿದೆ. ಇದಕ್ಕಾಗಿ,
  • ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವ ಸ್ಮಾರ್ಟ್‌ಫೋನಿನಲ್ಲಿ UPI ಅಪ್ಲಿಕೇಶನ್‌ನಲ್ಲಿ ಸೇರಿಸಲಾಗಿರುವ ಬ್ಯಾಂಕ್ ಖಾತೆಯು ಸಕ್ರಿಯವಾಗಿರಬೇಕು.
  • ನೀವು ಎಷ್ಟು ಹಣವನ್ನು ಹಿಂಪಡೆಯಲು ಬಯಸುತ್ತೀರಿ ಎಂಬುದನ್ನು ಅನುಕ್ರಮದ ಮೇಲೆ ನಮೂದಿಸಬೇಕು (ಅಂದರೆ ನೀವು ನಮೂದಿಸಿದ ಹಣವು ATM ನಲ್ಲಿ ವಿಥ್‌ ಡ್ರಾ ಆಗುವಂತಿರಬೇಕು)
  • ATM ನಲ್ಲಿ ಹಣವನ್ನು ವಿಥ್‌ಡ್ರಾ ಮಾಡುವ ಕ್ರಮವು ಯಶಸ್ವಿಯಾದ ನಂತರ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ” ಗೌಪ್ಯ ಪಿನ್” ಅನ್ನು ನಮೂದಿಸಬೇಕು.
  • ಈಗ ನಿಮ್ಮ ಬ್ಯಾಂಕ್ ಖಾತೆಯಿಂದ UPI ಆಧಾರಿತವಾಗಿ ಹಣ ಪಾವತಿಯಾಗಿರುವ ಸಂದೇಶ ಬರಲಿದೆ ನಂತರ ATM ನಿಂದ ಹಣ ಹೊರಬರುತ್ತದೆ.
  1. ಗಮನಿಸಿ: UPI ಅಪ್ಲಿಕೇಶನ್‌ಗಳ ಸಹಾಯದಿಂದ ಒಂದು ವಹಿವಾಟಿನಲ್ಲಿ ನೀವು 5,000 ರೂ. ವರೆಗೆ ಹಣವನ್ನು ವಿಥ್‌ಡ್ರಾ ಮಾಡಬಹುದು.
  2. ATMಗಳಲ್ಲಿ ಕಾರ್ಡ್ ರಹಿತ ನಗದು ಹಿಂಪಡೆಯುವ ಸೌಲಭ್ಯಗಳನ್ನು ಪರಿಚಯಿಸಿದ ನಂತರ ಬ್ಯಾಂಕ್‌ಗಳು ಡೆಬಿಟ್ ಕಾರ್ಡ್‌ ನೀಡುವುದನ್ನು ಮುಂದುವರೆಸುತ್ತದೆ.

ಯುಪಿಐ ಆಧಾರಿತ ಅಪ್ಲಿಕೇಷನ್‌ಗಳ ಮೂಲಕ ATM ನಲ್ಲಿ ಹಣವನ್ನು ವಿಥ್‌ಡ್ರಾ ಮಾಡುವ ಅವಕಾಶವು, ‘ಸ್ಕಿಮ್ಮಿಂಗ್, ಕಾರ್ಡ್ ಕ್ಲೋನಿಂಗ್ ಸೇರಿದಂತೆ ಇತ್ಯಾದಿ ಹಣಕಾಸು ವಂಚನೆಯ (ಸ್ಕ್ಯಾಮ್) ಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ” ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಈ ವರ್ಷದ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯನ್ನು ಪ್ರಕಟಿಸುವಾಗ ಸುದ್ದಿಗೋಷ್ಠಿಯಲ್ಲಿ ಹೇಳಿದ್ದನ್ನು ನಾವಿಲ್ಲಿ ಗಮನಿಸಬಹುದು.

teligram

Leave a Reply

Your email address will not be published. Required fields are marked *